ಶ್ರೀನಿಧಿಗೆ ರಿಪ್ಲೆ ಕೊಟ್ಟ ರಕ್ಷಿತ್ ಶೆಟ್ಟಿ, ಇಬ್ಬರ ನಡುವೆ ಲವ್ ಟ್ರಾಕ್ ನಡೆಯುತ್ತಿದೆ ಎಂದ ಫ್ಯಾನ್ಸ್….!

Follow Us :

ಕನ್ನಡ ಸಿನಿರಂಗದ ಸ್ಟಾರ್‍ ನಟ ರಕ್ಷಿತ್ ಶೆಟ್ಟಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‍ ಎಂದು ಹೇಳಬಹುದಾಗಿದೆ. ಈ ಹಿಂದೆ ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ಜೊತೆಗೆ ಪ್ರೀತಿ ಬಳಿಕ ಎಂಗೇಜ್ ಮೆಂಟ್ ಸಹ ಆಗಿತ್ತು. ಬಳಿಕ ಕೆಲವೊಂದು ಕಾರಣಗಳಿಂದ ಅವರಿಬ್ಬರ ಎಂಗೇಜ್ ಮೆಂಟ್ ಮುರಿದು ಬಿತ್ತು. ಬಳಿಕ ರಶ್ಮಿಕಾ ತೆಲುಗು, ತಮಿಳು, ಹಿಂದಿ ಸಿನೆಮಾಗಳಲ್ಲಿ ಬ್ಯುಸಿಯಾದರು. ಬಳಿಕ ರಕ್ಷಿತ್ ಶೆಟ್ಟಿ ರವರ ಬಗ್ಗೆ ಕೆಲವೊಂದು ನಟಿಯರ ಹೆಸರೂಗಳೂ ಸಹ ಕೇಳಿಬಂದವು. ಇದೀಗ ಮತ್ತೊರ್ವ ನಟಿಯ ಹೆಸರು ಕೇಳಿಬರುತ್ತಿದ್ದು, ನಟಿ ಶ್ರೀನಿಧಿ ಟ್ವೀಟ್ ಗೆ ರಕ್ಷಿತ್ ಶೆಟ್ಟಿ ರಿಪ್ಲೆ ಕೊಟ್ಟಿದ್ದು ಅವರಿಬ್ಬರ ನಡುವೆ ಪ್ರೇಮಾಯಣ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡುತ್ತಿದೆ.

ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಎಂಗೇಜ್ ಮೆಂಟ್ ಮುರಿದು ಬಿದ್ದ ಬಳಿಕ ರಕ್ಷಿತ್ ಸಿಂಗಲ್ ಆಗಿದ್ದಾರೆ. ಆದರೆ ಅವರ ಜೊತೆಗೆ ಕೆಲವು ನಟಿಯರ ಹೆಸರುಗಳೂ ಸಹ ಕೇಳಿಬಂದವು. ಅವನೇ ಶ್ರೀಮನ್ನಾರಾಯಣ ಸಿನೆಮಾದಲ್ಲಿ ನಾಯಕಿಯಾಗಿ ನಟಿಸಿದ ಸಾನ್ವಿ ಶ್ರೀವಾಸ್ತವ ಹೆಸರೂ ಸಹ ರಕ್ಷಿತ್ ಶೆಟ್ಟಿ ಜೊತೆಗೆ ಕೇಳಿಬಂದಿತ್ತು. ಜೊತೆಗೆ ಇಬ್ಬರೂ ಪೋಸ್ ಕೊಟ್ಟ ಸೆಲ್ಫಿ ಕಂಡ ನೆಟ್ಟಿಗರು ಬೇಗ ಮದುವೆಯಾಗಿ ಎಂದು ಕಾಮೆಂಟ್ ಗಳನ್ನು ಸಹ ಹಂಚಿಕೊಂಡಿದ್ದರು. ಜೊತೆಗೆ ಇಬ್ಬರ ನಡುವೆ ಲವ್ ಇದೆ ಎಂಭ ರೂಮರ್‍ ಗಳು ಜೋರಾಗಿಯೇ ಹರಿದಾಡಿದ್ದವು. ಬಳಿಕ ಇದೆಲ್ಲಾ ರೂಮರ್‍ ಗಳು ಮಾತ್ರ ಎಂದು ಬಯಲಾಯ್ತು. ಇದೀಗ ಕೆಜಿಎಫ್ ಫೇಂ ನ ಶ್ರೀನಿಧಿ ಶೆಟ್ಟಿಯೊಂದಿಗೆ ರಕ್ಷಿತ್ ಹೆಸರು ಕೇಳಿಬರುತ್ತಿದೆ.

ಕೆಜಿಎಫ್ ಸಿರೀಸ್ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಶ್ರೀನಿಧಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ನಡುವೆ ಪ್ರೇಮಾಯಣ ಶುರುವಾಗಿದೆ ಎಂಬ ರೂಮರ್‍ ಒಂದು ಹರಿದಾಡುತ್ತಿದೆ. ಅದಕ್ಕೆ ಶ್ರೀನಿಧಿ ಮಾಡಿದ ಟ್ವೀಟ್ ಗೆ ರಕ್ಷಿತ್ ಶೆಟ್ಟಿ ರಿಯಾಕ್ಟ್ ಆಗಿರುವುದು. ಇತ್ತೀಚಿಗೆ ನಟಿ ಶ್ರೀನಿಧಿ ತನ್ನ ಟ್ವಿಟರ್‍ ನಲ್ಲಿ ಹೊಸ ಪೊಟೋಗಳನ್ನು ಹಂಚಿಕೊಂಡಿದ್ದರು. ಅದಕ್ಕೆ ಹಾಗೆ ಸುಮ್ಮನೆ ಎಂಬ ಕ್ಯಾಪ್ಷನ್ ಸಹ ಹಾಕಿದ್ದರು. ಇನ್ನೂ ಈ ಟ್ವೀಟ್ ಗೆ ರಕ್ಷಿತ್ ಶೆಟ್ಟಿ ರಿಯಾಕ್ಟ್ ಆಗಿದ್ದು. ಓಹ್ ಗೊತ್ತಾಯಿತು ಶೆಟ್ರೆ ಎಂದು ತುಳು ಭಾಷೆಯಲ್ಲಿ ಕಾಮೆಂಟ್ ಮಾಡಿದ್ದರು. ಇನ್ನೂ ಈ ಟ್ವೀಟ್ ಇದೀಗ ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರೂ ಸಹ ಗುಡ್ ನ್ಯೂಸ್ ಯಾವಾಗ ಕೊಡ್ತೀರಾ ಎಂದು ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ರಕ್ಷಿತ್  ಶೆಟ್ಟಿ  ಟ್ವೀಟ್ ಗೆ ಶ್ರೀನಿಧಿ ಸಹ ಆಹಾಹಾ ಗೊತ್ತಾಯಿತಾ ಶೆಟ್ರೆ, ಯಾರಿಗೂ ಹೇಳಬೇಡಿ ಎಂದು ರಿಪ್ಲೆ ಕೊಟ್ಟಿದ್ದಾರೆ.

ಇನ್ನೂ ಶ್ರೀನಿಧಿ ಕಡೆಯಿಂದಲೂ ರಿಪ್ಲೆ ಬಂದ ಬಳಿಕ ಮತಷ್ಟು ರೂಮರ್‍ ಜೋರಾಗಿದೆ. ಇನ್ನೂ ಈ ನಡುವೆ ಮತ್ತೊಂದು ಸುದ್ದಿ ಸಹ ಕೇಳಿಬರುತ್ತಿದೆ. ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ರಿಚರ್ಡ್ ಆಂಟೋನಿ ಎಂಬ ಸಿನೆಮಾಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿರಬಹುದು ಎಂಬ ಅನುಮಾನಗಳನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಸಹ ಈ ಸಿನೆಮಾಗೆ ನಾಯಕಿ ಆಯ್ಕೆಯಾಗದ ಕಾರಣ ಶ್ರೀನಿಧಿ ರವರೇ ನಾಯಕಿಯಾಗಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಈ ಕಾರಣದಿಂದಲೇ ಇಬ್ಬರೂ ಆ ರೀತಿಯಲ್ಲಿ ಟ್ವೀಟ್ ಮಾಡಿಕೊಂಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.