Film News

ನಿರ್ದೇಶಕರಿಗೆ ಹೊಸ ಕಂಡಿಷನ್ ಇಟ್ಟ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ, ಆಕೆಯಿಟ್ಟ ಕಂಡಿಷನ್ ಏನು ಗೊತ್ತಾ?

ಸೌತ್ ಸಿನಿರಂಗದ ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಸುಮಾರು ಎರಡು ದಶಕಗಳೇ ಕಳೆದಿದೆ. ಆಕೆಯ ಸಿನಿ ಕೆರಿಯರ್‍ ನಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಪಡೆದುಕೊಂಡರು. ಅಕ್ಕಿನೇನಿ ನಾಗಾರ್ಜುನ್ ರವರ ಜೊತೆಗೆ ಸೂಪರ್‍ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅನುಷ್ಕಾ ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾದರು. ಕೊನೆಯದಾಗಿ ಆಕೆ ಮಿಸ್ ಶೆಟ್ಟಿ ಮಿಸ್ಟರ್‍ ಪೊಲಿಶೆಟ್ಟಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ ಆಕೆ ನಿರ್ದೆಶಕರಿಗೆ ಹೊಸ ಕಂಡಿಷನ್ ಇಟ್ಟಿದ್ದಾರಂತೆ ಅಷ್ಟಕ್ಕೂ ಆಕ ಕಂಡಿಷನ್ ಏನು ಎಂಬ ವಿಚಾರಕ್ಕೆ ಬಂದರೇ,

ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿಯವರನ್ನು ಡೇರಿಂಗ್ ಡೈರೆಕ್ಟರ್‍ ಪೂರಿ ಜಗನ್ನಾಧ್ ಸಿನಿರಂಗಕ್ಕೆ ಪರಿಚಯ ಮಾಡಿದರು. ಮೂಲತಃ ಯೋಗಾ ಟೀಚರ್‍ ಆದ ಅನುಷ್ಕಾ ಸೂಪರ್‍ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆದರೆ ಆಕೆಗೆ ವಿಕ್ರಮಾರ್ಕುಡು ಎಂಬ ಸಿನೆಮಾ ಮಾತ್ರ ದೊಡ್ಡ ಬ್ರೇಕ್ ನೀಡಿತ್ತು. ಅರುಂಧತಿ, ಬಿಲ್ಲಾ, ಮಿರ್ಚಿ ಸಿನೆಮಾಗಳ ಸ್ಟಾರ್‍ ಹಿರೋಯಿನ್ ಪಟ್ಟ ಪಡೆದುಕೊಂಡರು. ಇದೀಗ ಆಕೆ ಲೇಡಿ ಸೂಪರ್‍ ಸ್ಟಾರ್‍ ರೇಂಜ್ ಇಮೇಜ್ ಪಡೆದುಕೊಂಡಿದ್ದಾರೆ. ಸ್ಟಾರ್‍ ನಟರಿಗೆ ಸಮನಾಗಿ ಸಿನೆಮಾಗಳ ಕಲೆಕ್ಷನ್ ಮಾಡಿ ಖ್ಯಾತಿ ಸಹ ಆಕೆಗಿದೆ. ಈ ನಡುವೆ ಆಕೆ ಬಾಹುಬಲಿ ಹಾಗೂ ಸೈಜ್ ಜಿರೋ ಬಳಿಕ ತುಂಬಾನೆ ಬದಲಾದರು. ಅದರಲ್ಲೂ ಸೈಜ್ ಜಿರೋ ಸಿನೆಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದರು. ತೂಕ ಹೆಚ್ಚಿಸಿಕೊಂಡಿದ್ದರಿಂದ ಆಕೆಯ ಆರೋಗ್ಯದ ಮೇಲೆ ಪ್ರಭಾವ ಬೀರಿ, ತೂಕ ಕಡಿಮೆ ಮಾಡಿಕೊಳ್ಳಲು ಸಹ ತುಂಬಾನೆ ಕಷ್ಟಪಟ್ಟರು ಎನ್ನಲಾಗಿದೆ.

ತೂಕ ಹೆಚ್ಚಾದ ಹಿನ್ನೆಲೆಯಲ್ಲಿ ಆಕೆ ಸಿನೆಮಾಗಳಿಂದ ದೂರವುಳಿದರು, ಅದೇ ರೀತಿ ಹೊರಗಡೆ ಕಾಣಿಸುವುದು ಸಹ ಕಡಿಮೆಯಾಗಿತ್ತು. ಇದೀಗ ಮತ್ತೆ ಆಕೆ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚಿಗಷ್ಟೆ ಮಲಯಾಳಂ ಸಿನೆಮಾದ ಓಪನಿಂಗ್ ನಲ್ಲಿ ಭಾಗಿಯಾಗಿದ್ದರು. ಸದ್ಯ ಅನುಷ್ಕಾ ಕೈಯಲ್ಲಿ ಎರಡು ಸಿನೆಮಾಗಳಿವೆ. ತೆಲುಗಿನಲ್ಲಿ ಕ್ರಿಷ್ ನಿರ್ದೇಶನದಲ್ಲಿ ಲೇಡಿ ಓರಿಯೆಂಟೆಡ್ ಸಿನೆಮಾ ಮಾಡುತ್ತಿದ್ದಾರೆ. ಈ ಸಿನೆಮಾದಲ್ಲಿ ಆಕೆ ವೇಶ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಸದ್ಯ ರಾಮೋಜಿ ಫಿಲಂ ಸಿಟಿಯಲ್ಲಿ ಹಾಗೂ ಬೂತ್ ಬಂಗಲೆಯೊಂದರಲ್ಲಿ ಶೂಟಿಂಗ್ ನಡೆಯುತ್ತಿದ್ದು, ಈ ಸಿನೆಮಾಗೆ ಗಾಟಿ ಎಂಬ ಟೈಟಲ್ ಸಹ ಇಡಲಾಗಿದೆ. ಮಲಯಾಳಂ ನಲ್ಲಿ ಸಹ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಇದರಲ್ಲೂ ಆಕೆ ಮೈನ್ ಲೀಡ್ ಆಗಿದ್ದಾರೆ ಎನ್ನಲಾಗಿದೆ.

ಇನ್ನೂ ಇದೀಗ ಅನುಷ್ಕಾ ನಿರ್ಣಯ ಒಂದನ್ನು ತೆಗೆದುಕೊಂಡಿದ್ದಾರಂತೆ. ಅದರಂತೆ ಆಕೆ ಇನ್ನು ಮುಂದೆ ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲಿ ಮಾತ್ರ ನಟಿಸಲು ತೀರ್ಮಾನ ತೆಗೆದುಕೊಂಡಿದ್ದಾರಂತೆ. ಹಿರೋಗೆ ಜೋಡಿಯಾಗಿ ನಟಿಸೋಕೆ ಒಪ್ಪುತ್ತಿಲ್ಲವಂತೆ. ತನ್ನ ಪಾತ್ರ ಲೀಡ್ ಇದ್ದರೇ ಮಾತ್ರ ಒಪ್ಪಿಗೆ ನೀಡುತ್ತಿದ್ದಾರಂತೆ. ಅಂತಹ ಕಥೆಯಿದ್ದರೇ ಮಾತ್ರ ನನ್ನನ್ನು ಸಂಪರ್ಕ ಮಾಡಿ ಎಂದು ನಿರ್ದೇಶಕ ಬಳಿಕ ಕಂಡಿಷನ್ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಆಕೆಯನ್ನು ರೊಮ್ಯಾಂಟಿಕ್ ಲುಕ್ ನಲ್ಲಿ ನೋಡೋದು ಕಷ್ಟ ಎಂದೇ ಹೇಳಬಹುದಾಗಿದೆ. ಈ ಸುದ್ದಿಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲ, ಇನ್ನಷ್ಟೆ ಸತ್ಯಾಂಶ ಏನೆಂದು ತಿಳಿದುಬರಬೇಕಿದೆ.

Most Popular

To Top