ಕೇಂದ್ರ ಸರ್ಕಾರದ ಉದ್ಯೋಗ ಬಯಸುವವರಿಗೆ ಗುಡ್ ನ್ಯೂಸ್, ಇಂಡಿಯನ್ ಮರ್ಚೆಂಟ್ ನೇವಿಯಲ್ಲಿದೆ 4000 ಹುದ್ದೆಗಳು….!

Follow Us :

ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಬಯುಸುವವರಿಗಾಗಿ ಈ ಸುದ್ದಿ. ಅನೇಕರು ಕೇಂದ್ರ ಸರ್ಕಾರದ ಉದ್ಯೋಗ ಬಯಸುತ್ತಿರುತ್ತಾರೆ. ಅಂತಹವರಿಗೆ ಇಂಡಿಯನ್ ಮರ್ಚೆಂಟ್ ನೇವಿಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 30 ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಇಂಡಿಯನ್ ಮರ್ಚೆಂಟ್ ನೇವಿ ಯಲ್ಲಿ ಖಾಲಿಯಿರುವ 4000 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೀಮ್ಯಾನ್, ಮೆಸ್ ಬಾಯ್ , ಡೆಕ್ ರೇಟಿಂಗ್, ಎಲೆಕ್ಟ್ರಿಷಿಯನ್ ಸೇರಿದಂತೆ ಹಲವು ವೃಂದಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ ಕುರಿತು ತಿಳಿಯಲು ಈ ಮುಂದೆ ಓದಿ. (ಹೆಚ್ಚಿನ ಮಾಹಿತಿಗಾಗಿ https://www.sealanemaritime.in/ ತಾಣಕ್ಕೆ ಭೇಟಿ ನೀಡಿ)

ಹುದ್ದೆಗಳ ಮಾಹಿತಿ: ಡೆಕ್ ರೇಟಿಂಗ್- 721 ಹುದ್ದೆಗಳು (ವಿದ್ಯಾರ್ಹತೆ-12ನೇ ತರಗತಿ), ಎಂಜಿನ್​ ರೇಟಿಂಗ್- 236 ಹುದ್ದೆಗಳು (ವಿದ್ಯಾರ್ಹತೆ-10ನೇ ತರಗತಿ), ಸೀಮ್ಯಾನ್- 1432 ಹುದ್ದೆಗಳು (ವಿದ್ಯಾರ್ಹತೆ-10ನೇ ತರಗತಿ), ಎಲೆಕ್ಟ್ರಿಷಿಯನ್- 408 ಹುದ್ದೆಗಳು (ವಿದ್ಯಾರ್ಹತೆ-10ನೇ ಎಲೆಕ್ಟ್ರಿಷಿಯನ್​ ಐಟಿಐ), ವೆಲ್ಡರ್/ಹೆಲ್ಪರ್- 78 ಹುದ್ದೆಗಳು (ವಿದ್ಯಾರ್ಹತೆ-10ನೇ ಐಟಿಐ), ಮೆಸ್ ಬಾಯ್- 922 ಹುದ್ದೆಗಳು (ವಿದ್ಯಾರ್ಹತೆ-10ನೇ ತರಗತಿ), ಕುಕ್- 203 ಹುದ್ದೆಗಳು (ವಿದ್ಯಾರ್ಹತೆ-10ನೇ ತರಗತಿ), ಇನ್ನೂ ಆಯ್ಕೆಯಾದ ಅಭ್ಯರ್ಥಿಗಳಿಗೆ 38 ಸಾವಿರದಿಂದ 90 ಸಾವಿರದವರೆಗೆ ವೇತನ ನಿಗದಿ ಪಡಿಸಲಾಗಿದೆ.

ಇನ್ನೂ ವಯೋಮಿತಿ ವಿಚಾರಕ್ಕೆ ಬಂದರೇ, ಡೆಕ್ ರೇಟಿಂಗ್- 17.5- 25 ವರ್ಷ, ಎಂಜಿನ್​ ರೇಟಿಂಗ್- 17.5- 25 ವರ್ಷ, ಸೀಮ್ಯಾನ್- 17.5- 25 ವರ್ಷ, ಎಲೆಕ್ಟ್ರಿಷಿಯನ್- 17.5- 27 ವರ್ಷ, ವೆಲ್ಡರ್/ಹೆಲ್ಪರ್- 17.5- 27 ವರ್ಷ,  ಮೆಸ್ ಬಾಯ್- 17.5- 27 ವರ್ಷ, ಕುಕ್- 17.5- 27 ವರ್ಷ ನಿಗಧಿಪಡಿಸಿದ್ದು, ಸರ್ಕಾರದ ಮೀಸಲಾತಿಯಂತೆ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗು‌ತ್ತದೆ. ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೂ 100 ರೂಪಾಯಿ ಅರ್ಜಿ ಶುಲ್ಕ ನಿಗಧಿಪಡಿಸಿದ್ದು, ಆನ್ ಲೈನ್ ಮೂಲಕ ಪಾವತಿ ಮಾಡಬೇಕಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ನೇರವಾಗಿ ಈ ಲಿಂಕ್ ಕ್ಲಿಕ್ ಮಾಡಬಹುದಾಗಿದೆ. https://admission.sealanemaritime.in/campus/applicationform/2d48767b-f1d3-418a-9ca7-5ec848781322