ಬರ್ತ್ ಡೇ ಬೇಬಿ ಅನುಷ್ಕಾ ಶೆಟ್ಟಿ ಬಳಿ ಎಷ್ಟು ಆಸ್ತಿಯಿದೆ ಗೊತ್ತಾ, ಅನುಷ್ಕಾ ಶೆಟ್ಟಿ ಹುಟ್ಟು ಹಬ್ಬಕ್ಕೆ ಹರಿದುಬಂದ ಶುಭಾಷಯಗಳು…..!

ಸೌತ್ ಸಿನಿರಂಗದ ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಸುಮಾರು ಎರಡು ದಶಕಗಳೇ ಕಳೆದಿದೆ. ಆಕೆಯ ಸಿನಿ ಕೆರಿಯರ್‍ ನಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು…

ಸೌತ್ ಸಿನಿರಂಗದ ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಸುಮಾರು ಎರಡು ದಶಕಗಳೇ ಕಳೆದಿದೆ. ಆಕೆಯ ಸಿನಿ ಕೆರಿಯರ್‍ ನಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಪಡೆದುಕೊಂಡರು. ಇಂದಿಗೆ ಅಂದರೇ ನವೆಂಬರ್‍ 7, 2023 ಕ್ಕೆ ಆಕೆ 42 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಸುಮಾರು ವರ್ಷಗಳ ಕಾಲ ಸಿನಿರಂಗದಲ್ಲಿದ್ದ ಅನುಷ್ಕಾ ಶೆಟ್ಟಿ ಬಳಿ ಎಷ್ಟು ಆಸ್ತಿ ಇದೆ ಎಂಬ ವಿಚಾರಕ್ಕೆ ಬಂದರೇ,

ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿಯವರನ್ನು ಡೇರಿಂಗ್ ಡೈರೆಕ್ಟರ್‍ ಪೂರಿ ಜಗನ್ನಾಧ್ ಸಿನಿರಂಗಕ್ಕೆ ಪರಿಚಯ ಮಾಡಿದರು. ಮೂಲತಃ ಯೋಗಾ ಟೀಚರ್‍ ಆದ ಅನುಷ್ಕಾ ಸೂಪರ್‍ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆದರೆ ಆಕೆಗೆ ವಿಕ್ರಮಾರ್ಕುಡು ಎಂಬ ಸಿನೆಮಾ ಮಾತ್ರ ದೊಡ್ಡ ಬ್ರೇಕ್ ನೀಡಿತ್ತು. ಅರುಂಧತಿ, ಬಿಲ್ಲಾ, ಮಿರ್ಚಿ ಸಿನೆಮಾಗಳ ಸ್ಟಾರ್‍ ಹಿರೋಯಿನ್ ಪಟ್ಟ ಪಡೆದುಕೊಂಡರು. ಯಾವುದೇ ವಿವಾದಕ್ಕೆ ಗುರಿಯಾಗದೇ ಇರುವ ನಟಿಯಾಗಿ ಸಿನೆಮಾ ಒಂದಕ್ಕೆ 6 ಕೋಟಿಯವರೆಗೂ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಆಕೆಯ ಆಸ್ತಿಯ ವಿಚಾರಕ್ಕೆ ಬಂದರೇ, ಆಕೆಯ ಬಳಿ ಒಟ್ಟು 134 ಕೋಟಿ ಆಸ್ತಿಯಿದೆ ಎಂದು ಹೇಳಲಾಗುತ್ತಿದೆ.

ಅನುಷ್ಕಾ ಸ್ಥಿರಾಸ್ತಿಯ ಬಗ್ಗೆ ಹೇಳುವಾದರೇ ಹೈದರಾಬಾದ್ ನಲ್ಲಿ ಬರೊಬ್ಬರಿ 12 ಕೋಟಿ ಬೆಲೆ ಬಾಳುವಂತಹ ಮನೆ, ನಗರದ ಹೊರವಲಯದಲ್ಲಿ ಒಂದು ಫಾರ್ಮ್ ಹೌಸ್, ಬೆಂಗಳೂರು, ಮಂಗಳೂರು ನಗರದಲ್ಲೂ ಸಹ ಮನೆಗಳಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಲಗ್ಜುರಿ ಕಾರುಗಳೂ ಸಹ ಇದೆ. 20 ಲಕ್ಷ ಬೆಲೆಯ ಟಯೋಟಾ ಕರೋಲಾ ಆಲ್ಟಿಸ್, 59.88 ಲಕ್ಷ ವೆಚ್ಚ ಆಡಿ ಕ್ಯೂ5, 59 ಲಕ್ಷ ಬೆಲೆಯ ಆಡಿ A6, 70 ಲಕ್ಷ ವೆಚ್ಚದ BMW6 ಸಿರೀಸ್ ಕಾರು ಇದೆ. 2023 ಕ್ಕೆ ಅನುಷ್ಕಾ ಬಳಿ 134 ಕೋಟಿ ಆಸ್ತಿಯಿದೆ ಎಂದು ತಿಳಿದುಬಂದಿದೆ. ಇನ್ನೂ ನಟಿ ಅನುಷ್ಕಾ ಶೆಟ್ಟಿ ಕೊನೆಯದಾಗಿ ಮಿಸ್ ಶೆಟ್ಟಿ, ಮಿಸ್ಟರ್‍ ಪೊಲಿಶೆಟ್ಟಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.