Film News

ರಶ್ಮಿಕಾ ರವರ ಮಾರ್ಪಿಂಗ್ ವಿಡಿಯೋ ನಂದೇ, ಅದರಲ್ಲಿ ನನ್ನ ಪ್ರಮೇಯವಿಲ್ಲ, ಈ ಬಗ್ಗೆ ತುಂಬಾ ಚಿಂತಿಸುತ್ತೇನೆ ಎಂದ ಜರಾ ಪಟೇಲ್….!

ಸೋಷಿಯಲ್ ಮಿಡಿಯಾದಲ್ಲಿ ಕೆಲವು ದಿನಗಳಿಂದ ರಶ್ಮಿಕಾ ರವರ AI ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಫೇಕ್ ವಿಡಿಯೋ  ಜರಾ ಪಟೇಲ್ ಎಂಬ ಮಹಿಳೆಗೆ ಸೇರಿದ್ದು ಎಂದು ಸಹ ತೀಳಿದಿದೆ. ಫೇಕ್ ವಿಡಿಯೋ ಕ್ರಿಯೇಟ್ ಮಾಡಿದಂತಹ ಪುಂಡರ ವಿರುದ್ದ ಸಿನಿ ರಂಗದ ಸೆಲೆಬ್ರೆಟಿಗಳೂ ಸೇರಿದಂತೆ ಐಟಿ ಶಾಖೆ ಮಂತ್ರಿ ಸಹ ತೀವ್ರವಾಗಿ ಖಂಡಿಸಿದ್ದಾರೆ. ಇದೀಗ ಆ ವಿಡಿಯೋದಲ್ಲಿ ರುವ ಜರಾ ಪಟೇಲ್ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ.

ನಟಿ ರಶ್ಮಿಕಾ ಮಂದಣ್ಣರವರ ಫೇಕ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ಸ್ಟಾರ್‍ ನಟ ಅಮಿತಾಬ್, ನಾಗಚೈತನ್ಯ, ಮೃಣಾಳ್ ಠಾಕೂರ್‍ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಆಕ್ರೋಷ ಹೊರಹಾಕಿದ್ದು, ಅಂತಹವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹ ಸಹ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಶ್ಮಿಕಾ ಸಹ ಈ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಇದೇ ವಿಡಿಯೋ ನಾನು ಶಾಲೆ ಓದುತ್ತಿರುವಾಗ ನಡೆದಿದ್ದರೇ ನಾನು ಅದನ್ನು ಹೇಗೆ ನಿಭಾಯಿಸಬೇಕು ಎಂಬುದು ಗೊತ್ತಾಗುತ್ತಿರಲಿಲ್ಲ. ನನಗೆ ಬೆಂಬಲ ನೀಡಿದಂತಹ ಎಲ್ಲರಿಗೂ ಧನ್ಯವಾದಗಳನ್ನು ಸಹ ತಿಳಿಸುತ್ತೇನೆ ಎಂದು ರಶ್ಮಿಕಾ ತಿಳಿಸಿದ್ದಾರೆ. ಇದೀಗ ರಶ್ಮಿಕಾ ಫೇಕ್ ವಿಡಿಯೋದಲ್ಲಿರುವ ಅಸಲೀ ಮಹಿಳೆ ಜರಾ ಪಟೇಲ್ ರಿಯಾಕ್ಟ್ ಆಗಿದ್ದಾರೆ.

ಸೋಷಿಯಲ್ ಮಿಡಿಯಾ ಇನ್ ಫ್ಲೂಯೆನ್ಸರ್‍ ಜರಾ ಪಟೇಲ್ ರವರ ವಿಡಿಯೋ ವನ್ನೆ ಮಾರ್ಪಿಂಗ್ ಮಾಡಿ ರಶ್ಮಿಕಾ ಎನ್ನುವಂತೆ ವಿಡಿಯೋ ಹರಿಬಿಟ್ಟಿದ್ದಾರೆ. ಈ ಬಗ್ಗೆ ರಿಯಾಕ್ಟ್ ಆಗಿದ್ದ ಜರಾ ಪಟೇಲ್ AI ಡೀಪ್ ಫೇಕ್ ವಿಡಿಯೋ ಟೆಕ್ನಾಲಜಿಯನ್ನು ಬಳಸಿ ನನ್ನ ದೇಹಕ್ಕೆ ಒರ್ವ ಖ್ಯಾತ ನಟಿಯ ಮುಖವನ್ನು ಜೋಡಿಸಿದ್ದಾರೆ. ಇದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ನನ್ನ ಗಮನಕ್ಕೂ ಸಹ ಬಂದಿದೆ. ಈ ವಿಡಿಯೋ ಮೇಕಿಂಗ್ ನಲ್ಲಿ ನನ್ನ ಪ್ರಮೇಯವೇನು ಇಲ್ಲ. ಆದರೆ ಇದಕ್ಕಾಗಿ ನಾನು ತುಂಬಾ ಚಿಂತಿಸುತ್ತಿದ್ದೇನೆ. ಇಂತಹ ಫೇಕ್, ಮಾರ್ಪಿಂಗ್ ವಿಡಿಯೋಗಳನ್ನು ನೋಡುತ್ತಿದ್ದರೇ ಮಹೀಳೆಯರು, ಮಕ್ಕಳ ಭವಿಷ್ಯತ್ ಕುರಿತು ತುಂಬಾ ಚಿಂತೆಯಾಗಿದೆ. ಅಂತಹ ಕೃತ್ಯಗಳನ್ನು ಎಸಗುವಂತಹವರಿಗೆ ಯಾರೂ ಸಹ ಬೆಂಬಲಿಸಬೇಡಿ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಬರುವಂತಹ ಎಲ್ಲವನ್ನೂ ಯಾರೂ ನಿಜ ಎಂದು ನಂಬಬೇಡಿ ಎಂದು ಆಕೆ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಬರೆದಿದ್ದಾರೆ. ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸೋಷಿಯಲ್ ಮಿಡಿಯಾ ಇನ್ ಪ್ಲೂಯೆನ್ಸರ್‍ ಜರಾ ಪಟೇಲ್ ಓರ್ವ ಬ್ರಿಟೀಷ್ ಇಂಡಿಯನ್ ಮಾಡಲ್. ಆಕೆ ತನ್ನ ಇನ್ಸ್ಟಾಗ್ರಾಂನಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಫಾಲೋವರ್ಸ್‌ಗಳನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಜರಾ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಅಂಡ್ ಬೋಲ್ಡ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Most Popular

To Top