News

ಸಚಿವ ಉದಯನಿಧಿ ಸ್ಟಾಲಿನ್ ವಿರುದ್ದ ಏಕೆ ಪ್ರಕರಣದ ದಾಖಲಿಸಿಲ್ಲ ಎಂದು ಪೊಲೀಸರ ಕಿವಿ ಹಿಂಡಿದ ಹೈ ಕೋರ್ಟ್….!

ಕೆಲವು ದಿನಗಳ ಹಿಂದೆ ತಮಿಳುನಾಡಿನ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಭಾರಿ ಸುದ್ದಿಯಾಗಿದ್ದರು. ಅವರ ಹೇಳಿಕೆಯ ವಿರುದ್ದ ದೇಶದಾದ್ಯಂತ ಭಾರಿ ಆಕ್ರೋಷ ಸಹ ಕೇಳಿಬಂದಿತ್ತು. ಪ್ರಧಾನಿ ಮೋದಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು, ಹಿಂದೂ ಪರ ಸಂಘಟನೆಗಳು ಅವರ ಹೇಳಿಕೆಯ ವಿರುದ್ದ ಕಿಡಿಕಾರಿದ್ದರು. ಇದೀಗ ಹೈ ಕೋರ್ಟ್ ಈ ವಿಚಾರವಾಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರವರ ಪುತ್ರ ಉದಯನಿಧಿ ಸ್ಟಾಲಿನ್ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಸನಾತನ ಧರ್ಮವನ್ನು ಮಲೇರಿಯಾ, ಡೆಂಗಿ, ಕೊರೋನಾ ಕಾಯಿಲೆಗಳಿಗೆ ಹೋಲಿಗೆ ಮಾಡಿದ್ದರು. ಸನಾತನ ಧರ್ಮವನ್ನು ವಿರೋಧ ಮಾಡಿದರೇ ಸಾಲದು ಅದಲ್ಲು ಸಂಪೂರ್ಣವಾಗಿ ನಾಶ ಮಾಡಬೇಕೆಂದು ಹೇಳಿದ್ದರು. ಈ ಹೇಳಿಕೆ ಇಡೀ ದೇಶದಾದ್ಯಂತ ಅನೇಕರ ಆಕ್ರೋಷಕ್ಕೆ ಕಾರಣವಾಗಿತ್ತು. ಜೊತೆಗೆ ಆ ಹೇಳಿಕೆಗೆ ತಾನೂ ಈಗಲೂ ಬದ್ದ ಎಂದು ಹೇಳಿದ್ದರು. ಆ ಕಾರಣದಿಂದ ಸನಾತನ ಧರ್ಮದ ಬಗ್ಗೆ ಈ ರೀತಿಯ ಹೇಳಿಕೆ ನೀಡಿದ ಸ್ಟಾಲಿನ್ ವಿರುದ್ದ ದೊಡ್ಡ ಮಟ್ಟದಲ್ಲೇ ಆಕ್ರೋಷ ಭುಗಿಲೆದ್ದಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪೊಲೀಸರ ಕಿವಿಹಿಂಡಿದೆ ಎಂದು ಹೇಳಲಾಗುತ್ತಿದೆ. ಉದಯನಿಧಿ ಸ್ಟಾಲೀನ್ ಆ ಹೇಳಿಕೆ ನೀಡಿದಾಗ ಆತನ ವಿರುದ್ದ ಪೊಲೀಸರು ಪ್ರಕರಣ ಏಕೆ ದಾಖಲಿಸಿಲ್ಲ. ಉದಯನಿಧಿ ಸ್ಟಾಲಿನ್ ಒಂದು ಸಮುದಾಯ, ಧರ್ಮದ ವಿರುದ್ದ, ಜನವಿರೋಧಿ ಹೇಳಿಕೆಯನ್ನು ಸಾರ್ವಜನಿಕವಾಗಿ ಕೊಟ್ಟಾಗ ಪೊಲೀಸರು ಈ ಬಗ್ಗೆ ಕೇಸ್ ದಾಖಲಿಸಿಲ್ಲ. ಪ್ರಕರಣದ ದಾಖಲಿಸದೇ ಇಂತಹ ವಿಚಾರದಲ್ಲಿ ಕೈ ಹಾಕಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಪೊಲೀಸರ ಕ್ರಮಕ್ಕೆ ಚಾಟಿ ಬೀಸಿದೆ ಎಂದು ಹೇಳಲಾಗಿದೆ. ಸ್ಟಾಲಿನ್ ಹೇಳಿಕೆ ವಾದ-ವಿವಾದದ ಬಳಿಕ ಹೈಕೋರ್ಟ್ ಪೊಲೀಸರ ಕಡೆ ಬೊಟ್ಟು ಮಾಡಿದೆ ಎನ್ನಬಹುದಾಗಿದೆ. ಅಂತಹ ಸೂಕ್ಷ್ಮ ಸಂಗತಿಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗದಿದ್ದರೇ ಕೋರ್ಟ್ ಹೇಗೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಸಾಧ್ಯ ಎಂಬ ಸಂದೇಶವನ್ನು ಸಾರಿದೆ ಎಂದು ಹೇಳಬಹುದಾಗಿದೆ.

Most Popular

To Top