Film News

ಮೇಕಪ್ ಲೆಸ್ ಆಗಿ ಹಾಟ್ ಪೋಸ್ ಕೊಟ್ಟ ಡಸ್ಕಿ ಬ್ಯೂಟಿ ಅಮಲಾಪಾಲ್, ಕ್ಯೂಟ್ ಲುಕ್ಸ್ ಪೊಟೋ ವೈರಲ್….!

ಸೌತ್ ಸಿನಿರಂಗದಲ್ಲಿ ವಿವಾದಾತ್ಮಕ ವಿಚಾರಗಳಿಂದ ಸುದ್ದಿಯಾಗುವಂತಹ ನಟಿಯರಲ್ಲಿ ಮೊದಲ ಸ್ಥಾನದಲ್ಲೇ ಅಮಲಾಪಾಲ್ ಇರುತ್ತಾರೆ. ಸಿನೆಮಾಗಳಲ್ಲಿ ಆಕೆ ಬೋಲ್ಡ್ ಆಗಿ ನಟಿಸುವ ವಿಭಿನ್ನ ರೀತಿಯ ಫೇಮ್ ಪಡೆದುಕೊಂಡಿದ್ದಾರೆ. ಅದರಲ್ಲೂ ಆಕೆ ನ್ಯೂಡ್ ಸಿನೆಮಾದಲ್ಲೂ ಸಹ ನಟಿಸಿ ಅನೇಕ ವಿಮರ್ಶೆಗಳಿಗೆ ತುತ್ತಾಗಿದ್ದರು. ಮೊದಲಿಗಿಂತಲೂ ಸಹ ಅಮಲಾಪಾಲ್ ಇದೀಗ ತುಂಬಾ ಕ್ರೇಜ್ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸುಮಾರು ದಿನಗಳ ಬಳಿಕ ಅಮಲಾ ಪಾಲ್ ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.  ತುಂಬಾ ಗ್ಯಾಪ್ ಬಳಿಕ ಇದೀಗ ಮೇಕಪ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ.

ಸೌತ್ ಸಿನಿರಂಗದ ಸ್ಟಾರ್‍ ನಟಿ ಅಮಲಾಪಾಲ್ ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾದಿಂದ ದೂರವೇ ಉಳಿದಿದ್ದರು. ಈ ಹಿಂದೆ ಆಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲಿರುತ್ತಿದ್ದರು. ಆದರೆ ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾಗೆ ದೂರ ಇದ್ದರು. ಈ ಹಿಂದೆ ಸದಾ ಗ್ಲಾಮರಸ್ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸುತ್ತಿದ್ದರು. ಬೀಚ್, ವೆಕೇಷನ್ ಗಳಲ್ಲಿ ಸುತ್ತಾಡುತ್ತಾ ಗ್ಲಾಮರಸ್ ಪೋಸ್ ಗಳನ್ನು ನೀಡುತ್ತಾ ಅಭಿಮಾನಿಗಳನ್ನು ರಂಜಿಸುವುದರ ಜೊತೆಗೆ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಂಡಿದ್ದರು. ಇದೀಗ ಗ್ಲಾಮರ್‍ ಪೊಟೋಗಳಿಗೆ ದೂರ ಸರಿಯುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಾದಿಯಲ್ಲೇ ಆಕೆ ಮೇಕಪ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಮೇಕಪ್ ಲೆಸ್ ನಲ್ಲೂ ಅಭಿಮಾನಿಗಳ ಮೈಂಡ್ ಬ್ಲಾಕ್ ಮಾಡಿದ್ದು. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸುಮಾರು ದಿನಗಳ ಬಳಿಕ ಅಮಲಾಪಾಲ್ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ರೆಡ್ ಟಾಪ್ ಧರಿಸಿ ಮೇಕಪ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಟೇಬಲ್ ಬಳಿ ಕುಳಿತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳ ಜೊತೆಗೆ ಅಮಲಾ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ಸಂತೋಷ ಝೇಂಕರಿಸುತ್ತಿದೆ. ಅದು ಒಂದು ಮಾರ್ಗದಲ್ಲಿ ಪ್ರವಹಿಸುತ್ತಿದೆ ಎಂದು ಅಮಲಾಪಾಲ್ ಕ್ಯಾಪ್ಷನ್ ಹಾಕಿದ್ದಾರೆ. ಜೊತೆಗೆ ಹಾರುತ್ತಿರುವ ಪಾರಿವಾಳದಂತ ಎಮೋಜಿಯನ್ನು ಸಹ ಹಂಚಿಕೊಂಡಿದ್ದಾರೆ. ಸದ್ಯ ಅಮಲಾಪಾಲ್ ಆಧ್ಯಾತ್ಮಿಕ ಸೇವೆಯಲ್ಲಿ ತಲ್ಲೀನರಾಗಿದ್ದಾರೆ. ಮಹಾ ಶಿವರಾತ್ರಿ ಅಂಗವಾಗಿ ಆಕೆ ಆಧ್ಯಾತ್ಮಿಕ ಸೇವೆಯಲ್ಲಿದ್ದಾರೆ.

ಇನ್ನೂ ನಟಿ ಅಮಲಾ ಪಾಲ್ ತಮಿಳು, ಮಲಯಾಳಂ ಸಿನೆಮಾಗಳ ಜೊತೆಗೆ ಹಿಂದಿಯಲ್ಲೂ ಸಹ ನಟಿಸುತ್ತಿದ್ದಾರೆ. ಈ ಹಿಂದೆ ನ್ಯೂಡ್ ಸಿನೆಮಾದಲ್ಲೂ ನಟಿಸಿ ವಿಮರ್ಶೆಗೆ ಗುರಿಯಾಗಿದ್ದ ಈಕೆ ಇದೀಗ ನಟನೆಗೆ ಪ್ರಾಧಾನ್ಯತೆ ಇರುವ ಸಿನೆಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಪಾರವೈಪೋಲಾ ಎಂಬ ಸಿನೆಮಾದಲ್ಲಿ, ಮಲಯಾಳಂ ನಲ್ಲಿ ದ್ವಿಜ, ಆಡುಜೀವಿತಂ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ ಇದರ ಜತೆಗೆ ಹಿಂದಿಲ್ಲಿ ಭೋಳಾ ಎಂಬ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Most Popular

To Top