Film News

ತೆಲುಗು ಸಿನಿರಂಗದ ನಟ ನಂದಮೂರಿ ತಾರಕರತ್ನ ಇನ್ನಿಲ್ಲ, ಶೋಕ ಸಾಗರದಲ್ಲಿ ಮುಳುಗಿದ ಸಿನಿರಂಗ…!

ಸುಮಾರು ದಿನಗಳಿಂದ ನಂದಮೂರಿ ಕುಟುಂಬದ ತಾರಕರತ್ನ ಅನಾರೋಗ್ಯದ ನಿಮಿತ್ತ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಮಾರು 22 ಎರಡು ದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ತಾರಕರತ್ನ ಫೆ.18 ರಂದು ಕೊನೆಯ ಉಸಿರನ್ನೆಳೆದಿದ್ದಾರೆ. ಇನ್ನೂ ಈ ಸುದ್ದಿ ತಿಳಿಯುತ್ತಿದ್ದಂತೆ ನಂದಮೂರಿ ಅಭಿಮಾನಿಗಳು, ನಂದಮೂರಿ ಕುಟುಂಬ ಸೇರಿದಂತೆ ಇಡೀ ಸಿನಿರಂಗ ಮಮ್ಮಲ ಮರುಗಿದೆ.

ಕಳೆದ ಜ.27 ರಂದು ನಂದಮೂರಿ ತಾರಕರತ್ನ ಹೃದಯಘಾತಕ್ಕೆ ಗುರಿಯಾಗಿದ್ದರು, ಆಂಧ್ರದ ತೆಲುಗುದೇಶಂ ಪಾರ್ಟಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಪಾದಯಾತ್ರೆ ಕುಪ್ಪಂ ನಲ್ಲಿ ಆರಂಭವಾಗಿದ್ದು, ಈ ವೇಳೆ ನಂದಮೂರಿ ಕುಟುಂಬದ ಅನೇಕರು ಭಾಗಿಯಾಗಿದ್ದರು. ಈ ಯಾತ್ರೆಯಲ್ಲಿ ತಾರಕರತ್ನ ಸಹ ಭಾಗಿಯಾಗಿದ್ದರು. ಈ ವೇಳೆ ದಿಢೀರ್‍ ನೇ ತಾರಕರತ್ನ ಕುಸಿದು ಬಿದ್ದಿದ್ದಾರೆ. ಇನ್ನೂ ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ತಾರಕರತ್ನ ರವರನ್ನು ದಾಖಲು ಮಾಡಲಾಗಿತ್ತು. ಬಳಿಕ ಅದೇ ದಿನ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸುಮಾರು 22 ದಿನಗಳಿಂದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಎಲ್ಲರೂ ತಾರಕರತ್ನ ಗುಣಮುಖರಾಗಿ ಹೊರಬರುತ್ತಾರೆ ಎಂದು ತಿಳಿದಿದ್ದರು. ಆದರೆ ಯಾರೂ ಊಹಿಸಿದ ಪರಿಣಾಮ ಎದುರಾಗಿದ್ದು, ವೈದ್ಯರ ಪ್ರಯತ್ನ, ಅಭಿಮಾನಿಗಳ ಪ್ರಾರ್ಥನೆಗಳು ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಖ್ಯಾತ ನಟ ದಿವಂಗರ ಎನ್.ಟಿ.ಆರ್‍ ಮೊಮ್ಮಗ ತಾರಕರತ್ನ 1983 ರಲ್ಲಿ ಹೈದರಾಬಾದ್ ನಲ್ಲಿ ಜನಿಸಿದರು. ಇನ್ನೂ ಒಕಟೋ ನಂಬರ್‍ ಕುರಾಡು ಎಂಬ ಸಿನೆಮಾದ ಮೂಲಕ ಫೇಂ ಸಂಪಾದಿಸಿಕೊಂಡರು. ಬಳಿಕ ಯುವರತ್ನ, ಭದ್ರಾದಿ ರಾಮುಡು, ಅಮರಾವತಿ ಸೇರಿದಂತೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಕೊನೆಯದಾಗಿ ಆತ S5 ಎಕ್ಸಿಟ್ ಎಂಬ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ನಟಿಸುತ್ತಾ, ಮತ್ತೊಂದು ಕಡೆ ರಾಜಕೀಯಗಳಲ್ಲೂ ಸಹ ಬ್ಯುಸಿಯಾಗಿದ್ದರು. ತೆಲುಗು ದೇಶಂ ಪಾರ್ಟಿಯಲ್ಲಿ ಆಕ್ಟೀವ್ ಆಗಿ ಕೆಲಸ ಮಾಡುತ್ತಿದ್ದರು. ಮುಂದಿನ ಚುನಾವಣೆಯಲ್ಲೂ ಸಹ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿತ್ತು. ಆದರೆ ತಾರಕರತ್ನ ಇಹಲೋಕ ತ್ಯೆಜಿಸಿ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಕುಟುಂಬದವರನ್ನು ಅಗಲಿದ್ದಾರೆ.

Most Popular

To Top