Film News

ಕ್ಯೂಟ್ ಬ್ಯೂಟಿ ಅನುಪಮಾ ರವರಿಗೆ ಹುಟ್ಟುಹಬ್ಬದ ಸಂಭ್ರಮ, ಹುಟ್ಟುಹಬ್ಬಕ್ಕೆ ಡಿ.ಜೆ ಟಿಲ್ಲು-2 ತಂಡದಿಂದ ಸರ್ಪ್ರೈಸ್…!

ಮಲಯಾಳಂ ಮೂಲದ ನಟಿ ಅನುಪಮಾ ಪರಮೇಶ್ವರನ್ ಪ್ರೇಮಂ ಎಂಬ ಸಿನೆಮಾದ ಮೂಲಕದ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ನಟಿಯಾಗಿದ್ದಾರೆ. ಅನುಪಮ ಎಂದರೇ ಸಾಕು ಲವ್ಲೀ, ಟ್ರೆಡಿಷನಲ್ ಹಾಗೂ ಕ್ಯೂಟ್ ನಟಿ ಎಂದು ಹೇಳಲಾಗುತ್ತದೆ. ಪ್ರೇಮಂ ಸಿನೆಮಾದ ಬಳಿಕ ದಕ್ಷಿಣ ಭಾರತದ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾದರು. ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಸದ್ದು ಮಾಡುತ್ತಿರುತ್ತಾರೆ. ಇಂದು (ಫೆ.18) ಅನುಪಮಾ 27 ನೇ ವಸಂತಕ್ಕೆ ಕಾಲಿಡುತ್ತಿದ್ದು, ಅಭಿಮಾನಿಗಳೂ ಸೇರಿದಂತೆ ಸಿನೆಮಾ ಸೆಲೆಬ್ರೆಟಿಗಳು ಶುಭಾಷಯಗಳ ಸುರಿಮಳೆಗೈದಿದ್ದಾರೆ. ಇನ್ನೂ ಡಿ.ಜೆ. ಟಿಲ್ಲು-2 ಚಿತ್ರತಂಡದಿಂದ ಬಿಗ್ ಸರ್ಪ್ರೈಸ್ ಸಿಕ್ಕಿದೆ.

ಮಲಯಾಳಂ ಮೂಲದ ನಟಿಯಾದರೂ ಸಹ ಅನುಪಮಾ ತೆಲುಗು ಪ್ರೇಕ್ಷರಿಗೆ ತುಂಬಾ ಹತ್ತಿರವಾದರು. ಸೌತ್ ನ ವಿವಿಧ ಭಾಷೆಗಳಲ್ಲಿ ಆಕೆ ವಿವಿಧ ಸಿನೆಮಾಗಳಲ್ಲಿ ನಟಿಸಿದ್ದರು. ಶತಮಾನಂ ಭವತಿ, ಹಲೋ ಗುರು ಪ್ರೇಮ ಕೋಸಮೇ, ಉನ್ನದಿ ಒಕ್ಕಟೆ ಜೀವಿತಂ ಸಿನೆಮಾದಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡರು. ಇನ್ನೂ ಇತ್ತಿಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡರು. ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾದಲ್ಲಿ ನಟಿಸಿದ್ದರು. ಈ ಮೂರು ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಅದರಲ್ಲೂ ಕಾರ್ತಿಕೇಯ-2 ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಆಕೆ ಈ ಸಿನೆಮಾದ ಮೂಲಕ ತುಂಬಾನೆ ಖ್ಯಾತಿ ಪಡೆದುಕೊಂಡರು. ಈ ಸಿನೆಮಾದ ಸಕ್ಸಸ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ ಅನುಪಮಾ.

ಸದ್ಯ ನಟಿ ಅನುಪಮಾ ಡಿಜೆ ಟಿಲ್ಲು-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಸಿದ್ದು ಜೊನ್ನಲಗಡ್ಡ ನಟನಾಗಿ ಕಾಣಿಸಿಕೊಂಡ ಡಿಜೆ ಟಿಲ್ಲು ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಕಡಿಮೆ ಬಂಡವಾಳದಲ್ಲಿ ಈ ಸಿನೆಮಾ ಸೆಟ್ಟೇರಿದ್ದು, ಭಾರಿ ಸಕ್ಸಸ್ ಕಂಡುಕೊಂಡಿತ್ತು. ಇನ್ನೂ ಈ ಸಿನೆಮಾದ ನಟಿಯ ಬಗ್ಗೆ ಸುಮಾರು ದಿನಗಳಿಂದ ಸಸ್ಪೆನ್ಸ್ ಇತ್ತು. ಈ ಹಿಂದೆ ಅನೇಕ ನಟಿಯರನ್ನು ಈ ಸಿನೆಮಾಗಾಗಿ ಆಯ್ಕೆ ಮಾಡಿತ್ತು ಎನ್ನಲಾಗಿತ್ತು. ಮೊದಲಿಗೆ ಶ್ರೀಲೀಲಾ, ಮಡೊನ್ನಾ ಸೆಬಾಸ್ಟಿಯನ್, ಮೀನಾಕ್ಷಿ ಚೌದರಿ ಮೊದಲಾದವರ ಹೆಸರುಗಳು ಕೇಳಿಬಂತು. ಕೊನೆಯದಾಗಿ ಮೊದಲಿಗೆ ಆಯ್ಕೆ ಮಾಡಿದ್ದ ಅನುಪಮಾ ರವರನ್ನೇ ಫೈನಲ್ ಮಾಡಲಾಗಿದ್ದು, ಅನುಪಮಾ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಸ್ಪೇಷಲ್ ಪೋಸ್ಟರ್‍ ಒಂದನ್ನು ಸಹ ರಿಲೀಸ್ ಮಾಡಿದೆ.

ಇನ್ನೂ ಡಿಜೆ ಟಿಲ್ಲು-2 ಚಿತ್ರತಂಡ ಅನುಪಮಾ ಹುಟ್ಟುಹಬ್ಬದ ಅಂಗವಾಗಿ ಅನುಪಮಾ ರವರ ಫಸ್ಟ್ ಲುಕ್ ಪೋಸ್ಟರ್‍ ರಿಲೀಸ್ ಮಾಡುವ ಮೂಲಕ ಅನುಪಮಾಗೆ ಹುಟ್ಟುಹಬ್ಬದ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಈ ಪೋಸ್ಟರ್‍ ನಲ್ಲಿ ಅನುಪಮಾ ಚಬ್ಬಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಟ್ರೆಂಡಿ ಲುಕ್ಸ್ ಮೂಲಕ ಆಕರ್ಷಣೆಯಾಗಿದ್ದಾರೆ. ಈಗಾಗಲೇ ಅನುಪಮಾ  ಈ ಸಿನೆಮಾದ ಶೂಟಿಂಗ್ ನಲ್ಲೂ ಸಹ ಭಾಗಿಯಾಗಿದ್ದಾರೆ. ಇದೇ ವರ್ಷದ ಬೇಸಿಗೆಯಲ್ಲಿ ಈ ಸಿನೆಮಾ ರಿಲೀಸ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

Most Popular

To Top