ಸ್ಲೀವ್ ಲೆಸ್ ಬ್ಲೌಜ್ ಧರಿಸಿ ಸೀರೆಯಲ್ಲಿ ಬ್ಯೂಟಿಪುಲ್ ಪೋಸ್ ಕೊಟ್ಟ ಆಲಿಯಾ, ಟ್ರೆಡಿಷನಲ್ ಲುಕ್ಸ್ ನಲ್ಲೂ ಟೆಂಪ್ಟ್ ಮಾಡುವಂತೆ ಪೋಸ್ ಕೊಟ್ಟ ಬ್ಯೂಟಿ……!

Follow Us :

ಬಾಲಿವುಡ್ ನಲ್ಲಿ ಕ್ಯೂಟ್ ಅಂಡ್ ಹಾಟ್ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ಆಲಿಯಾ ಕಳೆದ ವರ್ಷ ಏಪ್ರಿಲ್ 14 ರಂದು ರಣಬೀರ್‍ ಕಪೂರ್‍ ಜೊತೆಗೆ ಅದ್ದೂರಿಯಾಗಿ ಸಪ್ತಪದಿ ತುಳಿದರು. ಮುಂಬೈನಲ್ಲಿ ಇವರ ವಿವಾಹ ಮಹೋತ್ಸವ ಅದ್ದೂರಿಯಾಗಿ ನಡೆದಿತ್ತು. ನಟಿ ಆಲಿಯಾ ಭಟ್ ಕಳೆದ ನವೆಂಬರ್‍ 6 ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಮದುವೆ, ಗರ್ಭಿಣಿಯ ಕಾರಣದಿಂದ ಆಕೆ ಸಿನೆಮಾಗಳಿಂದ ದೂರವೇ ಉಳಿದಿದ್ದರು. ಇದೀಗ ಮತ್ತೆ ಆಕೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತನ್ನ ಲೇಟೆಸ್ಟ್ ಸಿನೆಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ.

ಬಾಲಿವುಡ್ ಸ್ಟಾರ್‍ ನಟಿ ಆಲಿಯಾ ಭಟ್ ಯಂಗ್ ಏಜ್ ನಲ್ಲೇ ಸ್ಟೂಡೆಂಟ್ ಆಫ್ ದಿ ಇಯರ್‍ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸುವ ಮೂಲಕ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಕಳೆದ ವರ್ಷದ ಏಪ್ರಿಲ್ ಮಾಹೆಯಲ್ಲಿ ಬಾಲಿವುಡ್ ನಟ ರಣವೀರ್‍ ಕಪೂರ್‍ ಜೊತೆಗೆ ಮದುವೆಯಾದರು. ಕೊನೆಯದಾಗಿ ಆಕೆ ಪ್ಯಾನ್ ಇಂಡಿಯಾ ಸಿನೆಮಾ RRR ಹಾಗೂ ಬ್ರಹ್ಮಾಸ್ತ್ರ ಸಿನೆಮಾದಲ್ಲಿ ನಟಿಸಿದ್ದರು. ಈ ಎರಡೂ ಸಿನೆಮಾಗಳ ಆಕೆಗೆ ಒಳ್ಳೆಯ ಕ್ರೇಜ್ ತಂದುಕೊಟ್ಟವು. RRR ಸಿನೆಮಾದ ಬಳಿಕ ಆಕೆಗೆ ತೆಲುಗಿನಲ್ಲಿ ಮತಷ್ಟು ಆಫರ್‍ ಗಳು ಬಂದರೂ ಸಹ ಮದುವೆ, ಪ್ರಗ್ನೆನ್ಸಿ ಕಾರಣದಿಂದ ಆಕೆ ಯಾವುದೇ ಸಿನೆಮಾಗಳನ್ನು ಒಪ್ಪಿಕೊಳ್ಳಲಿಲ್ಲ ಎನ್ನಲಾಗಿದೆ. ಇದೀಗ ಆಲಿಯಾ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಮದುವೆ ಬಳಿಕ ಆಲಿಯಾ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸದ್ಯ ರಣವೀರ್‍ ಸಿಂಗ್ ಜೊತೆಗೆ ರಾಕಿ ಔರ್‍ ರಾಣಿ ಕಿ ಪ್ರೇಮ್ ಕಹಾನಿ ಎಂಬ ರೊಮ್ಯಾಂಟಿಕ್ ಸಿನೆಮಾದಲ್ಲಿ ಆಲಿಯಾ ನಟಿಸಿದ್ದಾರೆ. ಈ ಸಿನೆಮಾ ಇದೇ ಜು.28 ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಆಕೆ ಸಿನೆಮಾ ಪ್ರಮೋಷನ್ ಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಇದೀಗ ಕೋಲ್ಕತ್ತಾದಲ್ಲಿ ನಡೆದ ಪ್ರಮೋಷನ್ ಕಾರ್ಯಕ್ರಮದಲ್ಲಿ ಆಕೆ ಸೀರೆಯಲ್ಲಿ ಸ್ಟನ್ನಿಂಗ ಪೋಸ್ ಕೊಟ್ಟಿದ್ದಾರೆ. ಸ್ಲೀವ್ ಲೆಸ್ ಬ್ಲೌಜ್ ಧರಿಸಿ ಸೀರೆಯನ್ನುಟ್ಟು ಬ್ಯೂಟಿಪುಲ್ ಆಗಿ ದರ್ಶನ ಕೊಟ್ಟಿದ್ದಾರೆ. ಈ ಟ್ರೆಡಿಷನಲ್ ಲುಕ್ಸ್ ನಲ್ಲೂ ಸಹ ಆಲಿಯಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇದೀಗ ಆಕೆ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲೂ ಸಖತ್ ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳು ಆಕೆಯ ಸೌಂದರ್ಯದಕ್ಕೆ ಫಿದಾ ಆಗಿ ಲೈಕ್ ಗಳು ಕಾಮೆಂಟ್ ಗಳನ್ನು ಹರಿದು ಬಿಡುತ್ತಿದ್ದಾರೆ.

ಇನ್ನೂ ಆಲಿಯಾ ಮದುವೆಯಾಗಿ, ಮಗು ಆದರೂ ಸಹ ತುಂಬಾ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಆಕೆಯ ಸೌಂದರ್ಯಕ್ಕೆ ಅಭಿಮಾನಿಗಳು ಮಾತ್ರವಲ್ಲದೇ ಅನೇಕರು ಫಿದಾ ಆಗಿದ್ದಾರೆ. ಇನ್ನೂ ಹಾರ್ಟ್ ಆಫ್ ಸ್ಟೋನ್ ಎಂಬ ಹಾಲಿವುಡ್ ಸಿನೆಮಾದಲ್ಲೂ ಸಹ ಆಲಿಯಾ ನಟಿಸಿದ್ದು, ಈ ಸಿನೆಮಾದ ಸಹ ಶೀಘ್ರದಲ್ಲೇ ತೆರೆ ಕಾಣಲಿದೆ. ಈ ಸಿನೆಮಾದ ಮೂಲಕ ಆಲಿಯಾ ಹಾಲಿವುಡ್ ಸಿನಿರಂಗಕ್ಕೂ ಪಾದಾರ್ಪಣೆ ಮಾಡಿದಂತಾಗಿದ್ದು, ಈ ಸಿನೆಮಾದಲ್ಲಿ ಆಕೆ ಭಾರಿ ಆಕ್ಷನ್ ದೃಶ್ಯಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.