Film News

ಗುರುತು ಸಿಗದಂತೆ ಕಾಣಿಸಿಕೊಂಡ ಬೋಲ್ಡ್ ಬ್ಯೂಟಿ ಉರ್ಫಿ, ಆ ಪಾರ್ಟ್ ಗೆ ಮಾಡಿಸಿಕೊಂಡ ಸರ್ಜರಿಯ ಕಾರಣದಿಂದ ಆಕೆ ಆ ರೀತಿಯಾದರೇ?

ಬಾಲಿವುಡ್ ಸಿನಿರಂಗದ ನಟಿಯರ ಪೈಕಿ ಸದಾ ವಿವಾದಗಳ ಮೂಲಕ ಸುದ್ದಿಯಲ್ಲಿರುವ ನಟಿಯರಲ್ಲಿ ಉರ್ಫಿ ಜಾವೇದ್ ಸದಾ ಮುಂದಿರುತ್ತಾರೆ ಎಂದು ಹೇಳಬಹುದಾಗಿದೆ. ವಿವಿಧ ರೀತಿಯ ಅದರಲ್ಲೂ ವಿಚಿತ್ರವಾದ ಬಟ್ಟೆಗಳ ಮೂಲಕ ಆಕೆ ಸದಾ ಸುದ್ದಿಯಾಗುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಇದೀಗ ಆಕೆ ಗುರುತು ಹಿಡಿಯದ ರೀತಿಯ ಕಾಣಿಸಿಕೊಂಡಿದ್ದಾರೆ. ಆಕೆಯ ಪೊಟೋಗಳು ಇದೀಗ ವೈರಲ್ ಆಗಿದ್ದು, ಆ ಭಾಗಕ್ಕೆ ಮಾಡಿಸಿಕೊಂಡ ಸರ್ಜರಿಯ ಕಾರಣದಿಂದ ಆಕೆ ಹೀಗಾಗಿದ್ದಾರೆ ಎನ್ನಲಾಗಿದೆ.

ನಟಿ ಉರ್ಫಿ ಮೊದಲು ಕಿರುತೆರೆಯಲ್ಲಿ ಕಾಣಿಸಿಕೊಂಡರೂ ಸಹ ಆಕೆ ಪಾಪ್ಯುಲರ್‍ ಆಗಿದ್ದು ಮಾತ್ರ ಹಿಂದಿ ವರ್ಷನ್ ನ ಬಿಗ್ ಬಾಸ್ ನಲ್ಲಿ. ಈ ಶೋ ಮೂಲಕ ಕ್ರೇಜ್ ಸಂಪಾದಿಸಿಕೊಂಡ ಈಕೆ ಶೋ ನಿಂದ ಹೊರಬಂದ ಬಳಿಕ ವಿಚಿತ್ರವಾದ ಬಟ್ಟೆಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಮೈಕೊರೆಯುವ ಚಳಿಯಲ್ಲೂ ಸಹ ಆಕೆ ತುಂಟು ಬಟ್ಟೆಯುಟ್ಟು ಎಲ್ಲರ ಗಮನ ಸೆಳೆಯುತ್ತಾಳೆ. ಕೈಗೆ ಸಿಗುವಂತಹ ವಸ್ತುಗಳನ್ನು ಬಳಸಿಕೊಂಡು ಖಾಸಗಿ ಅಂಗಾಂಗಗಳನ್ನು ಕವರ್‍ ಮಾಡಿಕೊಂಡು ಸಹ ಪೋಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ. ವಿಚಿತ್ರ ಬಟ್ಟೆಗಳ ಮೂಲಕ ಸದಾ ಸದ್ದು ಮಾಡುವ ಉರ್ಫಿಯ ಲೇಟೆಸ್ಟ್ ಲುಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆಕೆಯನ್ನು ನೋಡಿ ಅರೇ ಉರ್ಫಿಗೆ ಏನಾಗಿದೆ ಎಂದು ಎಲ್ಲರೂ ಶಾಕ್ ಆಗಿದ್ದಾರೆ.

ಇನ್ನೂ ನಟಿ ಉರ್ಫಿ ತನ್ನ ಇನ್ಸ್ಟಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಗುರುತು ಸಿಗದಂತೆ ಕಾಣಿಸಿಕೊಂಡಿದ್ದಾರೆ. ಆಕೆಯ ತುಟಿಗಳು ಉಬ್ಬಿಕೊಂಡು, ಫೇಸ್ ಮುದುಡಿಕೊಂಡಿದೆ. ಕಣ್ಣುಗಳು ಸಹ ಉಬ್ಬಿಕೊಂಡಿದೆ. ಈ ಪೊಟೋಗಳಲ್ಲಿ ಆಕೆಯನ್ನು ಯಾರೂ ಸಹ ಆಕೆಯನ್ನು ಗುರ್ತಿಸಲು ಸಾಧ್ಯವೇ ಇಲ್ಲ ಎಂದು ಹೇಳಬಹುದು. ಈ ಬಗ್ಗೆ ಆಕೆ ಒಂದು ನೋಟ್ ಸಹ ಬರೆದಿದ್ದಾರೆ. ಈ ಪೊಟೋಗಳು ಸದ್ಯದ ಪೊಟೋಗಳಲ್ಲಿ, ಕಳೆದ 2016 ರಲ್ಲಿ ತೆಗೆದಂತಹ ಪೊಟೋಗಳಾಗಿವೆ. ತನ್ನ ತುಟಿಗಳಿಗೆ ಸರ್ಜರಿ ಮಾಡಿಸಿಕೊಂಡ ಕಾರಣ ಈ ರೀತಿಯಾಗಿತ್ತಂತೆ. ನನ್ನ 18 ವರ್ಷ ವಯಸ್ಸಿನಲ್ಲೇ ಲಿಪ್ ಫಿಲ್ಲರ್‍ ಗಳನ್ನು ಹಾಕಿಸಿಕೊಂಡೆ. ನನ್ನ ಲಿಪ್ಸ್ ತುಂಬಾ ಚಿಕ್ಕದಾಗಿತ್ತು. ಅವು ದೊಡ್ಡದಾಗಿ ಕಾಣಿಸಬೇಕೆಂದು ಸರ್ಜರಿ ಮಾಡಿಸಿಕೊಂಡೆ. ಯಾರಾದರೂ ಸರ್ಜರಿ ಮಾಡಿಸಿಕೊಳ್ಳಬೇಕಾದರೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ನೋಟ್ ಬರೆದಿದ್ದಾರೆ.

ಇನ್ನೂ ಉರ್ಫಿ ಹಂಚಿಕೊಂಡ ಈ ಥ್ರೋ ಬ್ಯಾಕ್ ಪೊಟೋಗಳು ವೈರಲ್ ಆಗಿದೆ. ಸದ್ಯದ ಪೊಟೋಗಳೆಂದು ಭಾವಿಸಿ ಅನೇಕರು ಎಚ್ಚರ, ಟೇಕ್ ಕೇರ್‍ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಆಕೆ ಧರಿಸುವ ಬಟ್ಟೆಗಳ ಕಾರಣದಿಂದ ಟ್ರೋಲ್ ಆಗುತ್ತಿದ್ದರೂ ಸಹ ಆಕೆ ಮಾತ್ರ ಡೋಂಟ್ ಕೇರ್‍ ಎನ್ನದೇ ತನ್ನ ಕೆಲಸ ತನ್ನದು ಎಂದು ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿರುತ್ತಾರೆ.

Most Popular

To Top