ಮಹಿಳಾ ನಿರ್ದೇಶಕಿಯ ಸಿನೆಮಾದಲ್ಲಿ ರಾಖಿ ಭಾಯ್, ಮತ್ತೊಮ್ಮೆ ಗ್ಯಾಂಗ್ ಸ್ಟರ್ ಆಗಿ ಯಶ್?

Follow Us :

ದೇಶದ ಸಿನಿರಂಗಕ್ಕೆ ಸ್ಯಾಂಡಲ್ ವುಡ್ ಸಿನಿರಂಗದ ತಾಕತ್ತು ಏನು ಎಂಬುದನ್ನು ತೋರಿಸಿದ ಸಿನೆಮಾ ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಕೆಜಿಎಫ್ ಎಂದು ಹೇಳಬಹುದು. ದೇಶದ ಸಿನಿರಂಗದ ಅನೇಕ ಸಿನೆಮಾಗಳ ರೆಕಾರ್ಡ್‌ಗಳನ್ನು ಸಹ ಕೆಜಿಎಫ್ ಬ್ರೇಕ್ ಮಾಡಿತ್ತು. ಇನ್ನೂ ಈ ಸಿನೆಮಾದ ಮೂಲಕ ನಟ ಯಶ್ ಸಹ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಇದೀಗ ಅವರ ಮುಂದಿನ ಸಿನೆಮಾಗಳ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ. ಕೆಜಿಎಫ್-2 ಸಿನೆಮಾ ಬಿಡುಗಡೆಯಾಗಿ ವರ್ಷಗಳೇ ಕಳೆದರೂ ಇನ್ನೂ ಅವರ ಮುಂದಿನ ಸಿನೆಮಾ ಘೋಷಣೆಯಾಗಿಲ್ಲ. ಇದೀಗ ಯಶ್ ರವರ ಮುಂದಿನ ಸಿನೆಮಾದ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದೆ.

ಸ್ಯಾಂಡಲ್ ವುಡ್ ಸ್ಟಾರ್‍ ನಟ ರಾಕಿಂಗ್ ಸ್ಟಾರ್‍ ಯಶ್ ಕೆಜಿಎಫ್ ಸಿರೀಸ್ ಮೂಲಕ ಭಾರಿ ಫೇಮ್ ಪಡೆದುಕೊಂಡರು. ಈ ಸಿನೆಮಾದ ಬಳಿಕ ಯಶ್ ರವರ ಮುಂದಿನ ಸಿನೆಮಾದ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಸಹ ಇಲ್ಲ. ಯಶ್ ರವರ ಮುಂದಿನ ಸಿನೆಮಾದ ಬಗ್ಗೆ ಅಭಿಮಾನಿಗಳೂ ಸಹ ಕಾತುರದಿಂದ ಕಾಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನಿರ್ದೇಶಕ ನರ್ತನ್ ರವರ ನಿರ್ದೇಶನದಲ್ಲಿ YASH19 ಸಿನೆಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಸಹ ಯಾವುದೇ ಅಪ್ಡೇಟ್ ಇಲ್ಲ. ಇದರಿಂದ ಯಶ್ ಎಂತಹ ಸಿನೆಮಾದಲ್ಲಿ ಯಾರ ನಿರ್ದೇಶನದಲ್ಲಿ ಸಿನೆಮಾ ಮಾಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಆದರೆ ಈ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಇನ್ನೂ ಯಶ್ ಸಹ ಕಳೆದ ಎರಡು ವರ್ಷಗಳಿಂದ ಕಥೆಗಳನ್ನು ಸಹ ಕೇಳುತ್ತಿದ್ದಾರಂತೆ. ಆದರೆ ಯಾವುದೇ ಕಥೆ ಅಂತಿಮವಾಗಿಲ್ಲ ಎನ್ನಲಾಗಿದೆ.

ಇದೀಗ ಮತ್ತೊಂದು ಕ್ರೇಜಿ ಸುದ್ದಿಯೊಂದು ಕೇಳಿಬರುತ್ತಿದೆ. ಯಶ್ ಮುಂದಿನ ಸಿನೆಮಾ ಲೇಡಿ ಡೈರೆಕ್ಟರ್‍ ಸಾರಥ್ಯದಲ್ಲಿ ಮಾಡಲಿದ್ದಾರಂತೆ.  ಮಲಯಾಳಂ ಮೂಲದ ಮಹಿಳಾ ನಿರ್ದೇಶಕಿ ಗಿತೂ ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ಸಿನೆಮಾ ಮಾಡಲಿದ್ದಾರಂತೆ. ಮೂತಾನ್ ಎಂಬ ಸಿನೆಮಾದ ಮೂಲಕ ತನ್ನನ್ನು ತಾನು ನಿರೂಪಿಸಿಕೊಂಡ ಗೀತೂ ಮೋಹನ್ ದಾಸ್ ಯಶ್ ರವರಿಗೆ ಕಥೆಯನ್ನು ಹೇಳಿದ್ದು, ಅದಕ್ಕೆ ಯಶ್ ಸಹ ಒಪ್ಪಿದ್ದಾರಂತೆ. ಸದ್ಯ ಸ್ಕ್ರಿಪ್ಟ್ ವರ್ಕ್ ಸಹ ಕಂಪ್ಲೀಟ್ ಆಗಿದ್ದು, ಪ್ರೀ ಪ್ರೊಡಕ್ಷನ್ ಕೆಲಸಗಳೂ ಸಹ ಶುರುವಾಗಿದೆಯಂತೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಸಹ ಹೊರಬರಲಿದೆಯಂತೆ. ಇನ್ನೂ ಈ ಸಿನೆಮಾ ಪಕ್ಕಾ ಮಾಸ್ ಸಿನೆಮಾ ಆಗಿದ್ದು, ಈ ಸಿನೆಮಾದಲ್ಲಿ ಯಶ್ ಗ್ಯಾಂಗ್ ಸ್ಟರ್‍ ಆಗಿ ಕಾಣಿಸಿಕೊ‌ಳ್ಳಲಿದ್ದಾರಂತೆ. ಈಗಾಗಲೇ ಯಶ್ ಕೆಜಿಎಫ್ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದು, ಸಾಮಾನ್ಯ ಕಥೆಗಳು ಅವರಿಗೆ ಸೆಟ್ ಆಗುವುದಿಲ್ಲವೆಂಬ ಕಾರಣದಿಂದ ಮತ್ತೊಮ್ಮೆ ಗ್ಯಾಂಗ್ ಸ್ಟರ್‍ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ ಯಶ್.

ಇನ್ನೂ ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶ ಇದೆ ಎಂಬುದು ಇನಷ್ಟೆ ತಿಳಿದುಬರಬೇಕಿದೆ. ಆದರೆ ಈ ಸಿನೆಮಾ ಸಹ ಪ್ಯಾನ್ ಇಂಡಿಯಾ ರೇಂಜ್ ನಲ್ಲೇ ನಿರ್ಮಾಣವಾಗಲಿದೆ ಎಂದು ಸಹ ಹೇಳಲಾಗುತ್ತಿದೆ. ಇನ್ನೂ ಯಶ್ ಫ್ಯಾನ್ಸ್ ಸಹ ಅವರ ಮುಂದಿನ ಸಿನೆಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ.