ಶೂಟಿಂಗ್ ಸೆಟ್ ನಲ್ಲಿ ಗಾಯಗೊಂಡ ವಿಕ್ರಂ, ತಂಗಲಾನ್ ಸಿನೆಮಾ ಶೂಟಿಂಗ್ ನಲ್ಲಿ ಅವಘಡ…..!

ಸೌತ್ ಸಿನಿರಂಗದ ಸ್ಟಾರ್‍ ನಟ ವಿಕ್ರಂ ಚಿಯಾನ್ ಸದ್ಯ ತಂಗಲಾನ್ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಸಿನೆಮಾದ ಪೋಸ್ಟರ್‍ ಸಹ ಬಿಡುಗಡೆಯಾಗಿದ್ದು ಈ ಪೋಸ್ಟರ್‍ ಭಾರಿ ಸದ್ದು ಮಾಡಿತ್ತು. ಸದ್ಯ ಈ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಶೂಟಿಂಗ್ ವೇಳೆ ವಿಕ್ರಂ ಗಾಯಗೊಂಡಿದ್ದಾರೆ. ಕೂಡಲೇ ಅವರರನ್ನು ಹತ್ತಿರದ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಹೇಳಲಾಗುತ್ತಿದೆ.

ನಿರ್ದೇಶಕ ರಂಜಿತ್ ಹಾಗೂ ವಿಕ್ರಂ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುತ್ತಿರುವ ತಂಗಲಾನ್ ಸಿನೆಮಾ ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದೆ.  ಭಾರಿ ಆಕ್ಷನ್ ದೃಶ್ಯಗಳನ್ನು ಒಳಗೊಂಡ ಸಿನೆಮಾ ಇದಾಗಿದ್ದು. ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮತ್ತೆರಡು ದಿನಗಳಲ್ಲೆ ಶೂಟಿಂಗ್ ನಡೆಯಬೇಕಿತ್ತು. ಆದರೆ ಅದಕ್ಕೂ ಮುಂದೆ ಚಿತ್ರತಂಡ ರಿಹಾರ್ಸಲ್ ನಲ್ಲಿ ಭಾಗಿಯಾಗಿದೆ. ಈ ವೇಳೆ ಅವಗಡ ಸಂಭವಿಸಿದೆ. ಈ ವೇಳೆ ನಟ ವಿಕ್ರಂ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಕ್ರಂ ಪಕ್ಕೆಲುಬು ಮುರಿದಿದೆ ಎನ್ನಲಾಗುತ್ತಿದೆ. ಇನ್ನೂ ಕೂಡಲೇ ವಿಕ್ರಂ ರವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಈ ವೇಳೆ ಪರೀಕ್ಷೆ ಮಾಡಿದ ವೈದ್ಯರು ವಿಕ್ರಂ ರವರಿಗೆ ಆಪರೇಷನ್ ಮಾಡಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ವಿಕ್ರಂ ಗಾಯಗೊಂಡಿದ್ದು, ಗುಣಮುಖರಾದ ಬಳಿಕ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಸಹ ಮಾಹಿತಿ ನೀಡಿದೆ. ಇನ್ನೂ ವಿಕ್ರಂ ಅಭಿಮಾನಿಗಳೂ ಸೇರಿದಂತೆ ಅನೇಕರು ವಿಕ್ರಂ ಶೀಘ್ರವಾಗಿ ಗುಣಮುಖರಾಗಲಿ ಎಂದು ಶುಭ ಕೋರುತ್ತಿದ್ದಾರೆ. ಇನ್ನೂ ತಂಗಲಾನ್ ಸಿನೆಮಾವನ್ನು ಸ್ಟುಡಿಯೋ ಗ್ರೀನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಕರ್ನಾಟಕದ ಕೆಜಿಎಫ್ ಬ್ಯಾಕ್ ಡ್ರಾಪ್ ನಲ್ಲಿ ನಡೆಯುವಂತಹ ಪಿರಿಯಾಡಿಕಲ್ ಸಿನೆಮಾ ಇದಾಗಲಿದೆ. ಇದರಲ್ಲಿ ಮಾಳವಿಕಾ ಮೋಹನನ್ ವಿಕ್ರಂ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಪಶುಪತಿ, ಡೇನಿಯಲ್ ಸೇರಿದಂತೆ ಮತಷ್ಟು ಕಲಾವಿದರು ನಟಿಸುತ್ತಿದ್ದಾರೆ.

ಇನ್ನೂ ವಿಕ್ರಂ ಚಿಯಾನ್ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇತ್ತಿಚಿಗಷ್ಟೆ ವಿಕ್ರಂ ಸ್ಟಾರ್‍ ಡೈರೆಕ್ಟರ್‍ ಪೊನ್ನಿಯನ್ ಸೆಲ್ವನ್-2 ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ವಿಕ್ರಂ ನಟನೆಗೆ ಒಳ್ಳೆಯ ಸ್ಪಂದನೆ ಸಹ ದೊರೆತಿದೆ. ಐಶ್ವರ್ಯ ಜೊತೆಗೆ ಪ್ರೀತಿ, ಬಳಿಕ ಆಕೆಯ ಕೈಯಲ್ಲಿ ಮರಣ ಈ ದೃಶ್ಯಗಳು ಅಭಿಮಾನಿಗಳನ್ನು ಮೆಚ್ಚಿಸಿದೆ. ಇದೀಗ ತಂಗಲಾನ್ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಶೂಟಿಂಗ್ ಆರಂಭದಲ್ಲೇ ಅಂತಹ ಘಟನೆ ಸಂಭವಿಸಿದೆ.