ಪವನ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಪವರ್ ಸ್ಟಾರ್ ಸಿನೆಮಾದಲ್ಲಿ ಮಗ ಅಖಿರಾ ನಂದನ್, ಖುಷಿಯಾದ ಫ್ಯಾನ್ಸ್……!

Follow Us :

ತೆಲುಗು ಸ್ಟಾರ್‍ ನಟ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಇದೀಗ ಪವನ್ ಕಲ್ಯಾಣ್ ರವರು OG ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಸ್ಟೈಲಿಷ್ ಆಕ್ಷನ್ ಎಂಟರ್‍ ಟ್ರೈನ್ ಆಗಿ ತೆರೆಗೆ ಬರಲಿದೆ. ಇದೀಗ ಈ ಸಿನೆಮಾದ ಬಗ್ಗೆ ಸುದ್ದಿಯೊಂದು ವೈರಲ್ ಆಗುತ್ತಿದೆ. ಈ ಸಿನೆಮಾದಲ್ಲಿ ಪವನ್ ಕಲ್ಯಾಣ್ ಪುತ್ರ ಅಖಿರಾ ಸಹ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ.

ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಹರಿಹರ ವೀರಮಲ್ಲು, ಉಸ್ತಾದ್ ಭಗತ್ ಸಿಂಗ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ವಿನೋದಯಸೀತಂ ಎಂಬ ಸಿನೆಮಾದ ರಿಮೇಕ್ ಶೂಟಿಂಗ್ ಸಹ ಪೂರ್ಣಗೊಳಿಸಿದ್ದಾರೆ.  ಇದರ ಜೊತೆಗೆ OG ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಈ ಸಿನೆಮಾ ಪವನ್ ಕಲ್ಯಾಣ್ ಹಾಗೂ ಸುಜಿತ್ ಕಾಂಬಿನೇಷನ್ ನಲ್ಲಿ ಮೂಡಿಬರಲಿದೆ. ಒರಿಜಿನಲ್ ಗ್ಯಾಂಗ್ ಸ್ಟರ್‍ ವರ್ಕಿಂಗ್ ಟೈಟಲ್ ನೊಂದಿಗೆ ಈ ಸಿನೆಮಾದ ಶೂಟೀಂಗ್ ನಡೆಸುತ್ತಿದೆ. ಇನ್ನೂ ಇತ್ತೀಚಿಗಷ್ಟೆ ಮುಂಬೈನಲ್ಲಿ ಶೂಟಿಂಗ್ ನಲ್ಲಿ ಪವನ್ ಹಾಜರಾಗಿದ್ದರು. ಪವನ್ ಕಲ್ಯಾಣ್ ರವರ ಕೆಲವೊಂದು ಸ್ಟಿಲ್ಸ್ ಸಹ ಸಖತ್ ವೈರಲ್ ಆಗಿತ್ತು.

ಇದೀಗ ಈ ಸಿನೆಮಾದ ಬಗ್ಗೆ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಸಿನೆಮಾದಲ್ಲಿ ಪವನ್ ಕಲ್ಯಾನ್ ಪುತ್ರ ಅಖಿರಾ ನಂದನ್ ಸಹ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಿಲ್ಲವಾದರೂ ಸಹ ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಸುದ್ದಿ ನಿಜವೇ ಆದರೆ ಪವನ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ ಎಂದು ಹೇಳಬಹುದಾಗಿದೆ. ಸಾಮಾನ್ಯವಾಗಿ ಪವನ್ ಕಲ್ಯಾಣ್ ರವರ ಸಿನೆಮಾಗಳು ಥಿಯೇಟರ್‍ ಗಳಲ್ಲಿ ಸಖತ್ ಸದ್ದು ಮಾಡುತ್ತವೆ. ಅಂತಹ ಸಮಯದಲ್ಲಿ ಪವನ್ ಜೊತೆಗೆ ಅವರ ಪುತ್ರ ಅಖಿರಾ ನಂದನ್ ಸಹ ಒಂದೇ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳ ಕಾತುರ ಮುಗಿಲು ಮುಟ್ಟಿದೆ.

ಇನ್ನೂ ಈ ಸಿನೆಮಾದಲ್ಲಿ ಪವನ್ ಕಲ್ಯಾಣ್ ಮೂರು ವಿಭಿನ್ನ ಪಾತ್ರಗಳಲ್ಲಿ ನಟಿಸಲಿದ್ದಾರಂತೆ. ಈ ಸಿನೆಮಾದಲ್ಲಿ ಮಾಫಿಯಾ ಡಾನ್, ಕಾಲೇಜಿನ ಉಪನ್ಯಾಸಕ ಹಾಗೂ ಟಿನೇಜ್ ಹುಡುಗನಾಗಿ ಪವನ್ ಕಾಣಿಸಿಕೊಳ್ಳಲಿದ್ದಾರಂತೆ. ಟಿನೇಜ್ ಹುಡುಗನ ಪಾತ್ರದಲ್ಲಿ ಪವನ್ ಕಲ್ಯಾಣ್ ಪುತ್ರ ಅಖಿರಾ ನಂದನ್ ರವರನ್ನು ತೆಗೆದುಕೊಳ್ಳಬೇಕೆಂದು ಹೇಳಲಾಗುತ್ತಿದೆ. ಈ ಬಗ್ಗೆ ಚರ್ಚೆಗಳು ಸಹ ನಡೆಯುತ್ತಿವೆಯಂತೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಬರಲಿದ್ದು, ಒಂದು ವೇಳೆ ಇದು ನಿಜವಾದರೇ ಅಖಿರಾ ನಂದನ್ ಗೆ ಮೊದಲನೇ ಸಿನೆಮಾ ಆಗಲಿದೆ. ಇನ್ನೂ ಈ ಸಿನೆಮಾದಲ್ಲಿ ಪವನ್ ಕಲ್ಯಾಣ್ ರವರಿಗೆ ಜೋಡಿಯಾಗಿ ಪ್ರಿಯಾಂಕಾ ಅರುಲ್ ಮೋಹನ್ ನಟಿಸಲಿದ್ದಾರೆ.