ಬಾಲಿವುಡ್ ಕುರಿತು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ವಿಜಯ್ ಸೇತುಪತಿ, ನನ್ನನ್ನು ಟ್ರೋಲ್ ಮಾಡುತ್ತಾರೆ ಅಂದುಕೊಂಡಿದ್ದೆ ಎಂದ ನಟ…..!

Follow Us :

ಕಾಲಿವುಡ್ ಸ್ಟಾರ್‍ ನಟ ವಿಜಯ್ ಸೇತುಪತಿ ವಿಲಕ್ಷಣ ನಟನಾಗಿ ಫೇಂ ಸಂಪಾದಿಸಿಕೊಂಡಿದ್ದಾರೆ. ತುಂಬಾ ಕ್ರೇಜ್ ಹೊಂದಿರುವ ನಟರಲ್ಲಿ ವಿಜಯ್ ಸೇತುಪತಿ ಸಹ ಒಬ್ಬರಾಗಿದ್ದಾರೆ. ಆತ ಅಭಿನಯದ ಬಹುತೇಕ ಎಲ್ಲಾ ಸಿನೆಮಾಗಳೂ ಸಹ ಒಳ್ಳೆಯ ಸಕ್ಸಸ್ ಸಾಧಿಸಿದೆ ಎಂದು ಹೇಳಬಹುದಾಗಿದೆ. ವೈವಿದ್ಯಮಯ ಪಾತ್ರಗಳೊಂದಿಗೆ, ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ, ಹಿರೋ ಆಗಿ, ವಿಲನ್ ಆಗಿ ಕಡಿಮೆ ಸಮಯದಲ್ಲೇ ಸ್ಟಾರ್‍ ನಟರಾಗಿದ್ದಾರೆ ವಿಜಯ್ ಸೇತುಪತಿ. ಇದೀಗ ಆತ ಬಾಲಿವುಡ್ ಬಗ್ಗೆ ಮಾಡಿರುವಂತಹ ಕಾಮೆಂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸೌತ್ ಸಿನಿರಂಗದ ಮಲ್ಟಿ ಟ್ಯಾಲೆಂಟೆಡ್ ಸ್ಟಾರ್‍ ವಿಜಯ್ ಸೇತುಪತಿ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಸೌತ್ ನಲ್ಲಿ ಮಾತ್ರವಲ್ಲದೇ ಆತನಿಗೆ ಬಾಲಿವುಡ್ ನಲ್ಲೂ ಅವಕಾಶಗಳು ಬರುತ್ತಿವೆ. ಈಗಾಗಲೇ ಎರಡು ಮೂರು ಸಿನೆಮಾಗಳಲ್ಲಿ ವಿಜಯ್ ಸೇತುಪತಿ ನಟಿಸಿದ್ದಾರೆ. ಸದ್ಯ ವಿಜಯ್ ಸೇತುಪತಿ ಅಭಿನಯದ ಮೆರಿ ಕ್ರಿಸ್ ಮಸ್ ಎಂಬ ಸಿನೆಮಾ ಫೆ.12 ರಂದು ತೆರೆಕಾಣಲಿದ್ದು, ಈ ಸಿನೆಮಾದ ಪ್ರಮೋಷನ್ ನಲ್ಲಿ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ನಾನು ಹಿಂದಿಯಲ್ಲಿ ಎರಡು ಮೂರು ಸಿನೆಮಾಗಳಲ್ಲಿ ಮಾತ್ರ ನಟಿಸುತ್ತೀನಿ ಎಂದು ಕೊಂಡಿದ್ದೆ. ಆದರೆ ಬಾಲಿವುಡ್ ಪ್ರೇಕ್ಷಕರು ನೀಡುತ್ತಿರುವ ಪ್ರೀತಿ ಪ್ರೇಮ ನನಗೆ ಆರ್ಶೀವಾದವಿದ್ದಂತೆ. ನಾನು ಅಷ್ಟರ ಮಟ್ಟಿಗೆ ಅಭಿಮಾನಿಸುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ.

ನನಗೆ ಹಿಂದಿ ಭಾಷೆಯ ಮೇಲೆ ಅಷ್ಟೊಂದು ಹಿಡಿತ ಇರಲಿಲ್ಲ. ಬಾಲಿವುಡ್ ನಲ್ಲಿ ನನ್ನ ಹಿಂದಿ ಭರಿಸಲಾರದೆ ಅಲ್ಲಿನ ಪ್ರೇಕ್ಷಕರು ತುಂಬಾ ಕಾಲ ನನ್ನನ್ನು ಭರಿಸುವುದಿಲ್ಲ ಎಂದುಕೊಂಡೆ. ಒಂದೆರಡು ಸಿನೆಮಾಗಳಿಗೆ ಮಾತ್ರ ಸೀಮಿತವಾಗುತ್ತೇನೆ ಎಂದುಕೊಂಡೆ. ನನ್ನ ಮೊದಲ ಎರಡು ಸಿನೆಮಾಗಳು ರಿಲೀಸ್ ಆಗುವುದಕ್ಕೂ ಮುಂಚೆ ಫರ್ಜಿ ಎಂಬ ವೆಬ್ ಸಿರೀಸ್ ಜೊತೆಗೆ ಜವಾನ್ ಸಿನೆಮಾದಲ್ಲೂ ನಟಿಸುವ ಅವಕಾಶ ಬಂತು. ಅದು ನನಗೆ ತುಂಬಾ ಶಾಕ್ ಕೊಟ್ಟಿತ್ತು. ಹಿಂದಿ ಪ್ರೇಕ್ಷಕರು ನನ್ನನ್ನು ಆದರಿಸುತ್ತಿದ್ದರೇ ನನಗೆ ತುಂಬಾನೆ ಗರ್ವವಾಗಿದೆ ಎಂದು ಹೇಳಿದ್ದಾರೆ. ಅಷ್ಟೇಅಲ್ಲದೇ ನನ್ನ ಹಿಂದಿ ನೋಡಿ ಅಲ್ಲಿನ ಪ್ರೇಕ್ಷಕರು ಟ್ರೋಲ್ ಮಾಡುತ್ತಾರೆ ಎಂದುಕೊಂಡಿದೆ. ಇದೇ ವಿಚಾರವನ್ನು ಫರ್ಜಿ ಸಿರೀಸ್ ನ ಅಸಿಸ್ಟೆಂಟ್ ನಿರ್ದೇಶಕ ಗೋಸ್ವಾಮಿ ರವರಿಗೂ ತಿಳಿಸಿದ್ದೆ. ಆದರೆ ಆತ ನಿನ್ನನ್ನು ಇಲ್ಲಿನ ಪ್ರೇಕ್ಷಕರು ಇಷ್ಟಪಡುತ್ತಾರೆ ಎಂದು ಹೇಳಿದ್ದರು. ಅದರಂತೆ ಫಾರ್ಜಿ ವೆಬ್ ಸಿರೀಸ್ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತ್ತು. ಒಂದು ಬಾರಿ ಪ್ರೇಕ್ಷಕರಿಗೆ ನಾವು ಕನೆಕ್ಟ್ ಆದರೆ ನಮ್ಮನ್ನು ಇಷ್ಟಪಡುತ್ತಲೇ ಇರುತ್ತಾರೆ ಎಂದು ಅರ್ಥವಾಯ್ತು ಎಂದು ಕಾಮೆಂಟ್ಸ್ ಮಾಡಿದ್ದಾರೆ. ನಟ ವಿಜಯ್ ಸೇತುಪತಿಯ ಈ ಕಾಮೆಂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.