ನಾನು ನಟರ ಜೊತೆಗೆ ಡೇಟ್ ಮಾಡೋಲ್ಲ ಎಂದ ಸ್ಟಾರ್ ಕಿಡ್ ಜಾನ್ವಿ, ಶಾಕಿಂಗ್ ಕಾಮೆಂಟ್ಸ್ ವೈರಲ್…..!

Follow Us :

ಬಾಲಿವುಡ್ ಸ್ಟಾರ್‍ ಕಿಡ್ ಜಾನ್ವಿ ಕಪೂರ್‍ ಸಿನೆಮಾಗಳಲ್ಲಿ ಅಷ್ಟೊಂದು ಸಕ್ಸಸ್ ಕಾಣದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಂತೂ ಸ್ಟಾರ್‍ ನಟಿಯರಿಗಿಂತಲೂ ಹೆಚ್ಚಿನ ಪಾಪ್ಯುಲಾರಿಟಿ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಈಕೆಯ ಅಪ್ಡೇಟ್ಸ್ ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇದೀಗ ಆಕೆ ಕಾಫಿ ವಿತ್ ಕರಣ್ ಶೋ ಕಾರ್ಯಕ್ರಮದಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.

ಬಾಲಿವುಡ್ ನ ರಿಯಾಲಿಟಿ ಶೋ ಗಳಲ್ಲಿ ಕಾಫಿ ವಿತ್ ಕರಣ್ ಶೋ ತುಂಬಾನೆ ಫೇಂ ಪಡೆದುಕೊಂಡಿದೆ. ಈ ಶೋ ನಲ್ಲಿ ಸ್ಟಾರ್‍ ನಟ-ನಟಿಯರು ಭಾಗವಹಿಸಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಶೋ ನಲ್ಲಿ ಕೇವಲ ಸಿನೆಮಾ ವಿಚಾರಗಳನ್ನು ಮಾತ್ರವಲ್ಲದೇ ವೈಯುಕ್ತಿಕ ವಿಚಾರಗಳನ್ನು ಸಹ ಮಾತನಾಡಲಾಗುತ್ತದೆ. ಈ ಶೋ ಹೋಸ್ಟ್ ಮಾಡುವ ನಿರ್ಮಾಪಕ ಕರಣ್ ಜೋಹಾರ್‍ ಕೇಳಿದ ಪ್ರಶ್ನೆಗಳೂ ಸಹ ಬೋಲ್ಡ್ ಆಗಿರುತ್ತವೆ. ಶೋನಲ್ಲಿ ಆತ ಹೆಚ್ಚಾಗಿ ಸೆಕ್ಸ್, ಅಫೇರ್‍, ಬ್ರೇಕಪ್, ಡೇಟಿಂಗ್ ಬಗ್ಗೆ ಕೇಳುತ್ತಿರುತ್ತಾರೆ. ಅದರಲ್ಲೂ ಸೆಕ್ಸ್ ಬಗ್ಗೆ ಕೇಳದೇ ಆತನ ಶೋ ಮುಗಿಸೋದೇ ಇಲ್ಲ ಎಂದು ಹೇಳಬಹುದಾಗಿದೆ. ಈ ಶೋ ನಲ್ಲಿ ಇದೀಗ ನಟಿ ಜಾನ್ವಿ ಕಪೂರ್‍ ಭಾಗಿಯಾಗಿದ್ದಾರೆ. ಆತನ ಪ್ರಶ್ನೆಗೆ ಜಾನ್ವಿ ಶಾಕಿಂಗ್ ಕಾಮೆಂಟ್ ಸಹ ಮಾಡಿದ್ದಾರೆ.

ಕಾಫಿ ವಿತ್ ಕರಣ್ ಶೋ ನಲ್ಲಿ ಭಾಗಿಯಾಗಿದ್ದ ಜಾನ್ವಿ ಕಪೂರ್‍ ಕರಣ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಜಾನ್ವಿ ಕಪೂರ್‍ ಸಿನೆಮಾ ಕೆರಿಯರ್‍, ಸಿನೆಮಾ ಶೂಟಿಂಗ್, ಸ್ನೇಹಿತರು ಹೀಗೆ ಪ್ರಶ್ನೆಗಳನ್ನು ಕೇಳುತ್ತಾ ಸಾಗಿದ್ದಾರೆ. ಅದಕ್ಕೆ ಜಾನ್ವಿ ಸಹ ಉತ್ತರ ನೀಡಿದ್ದಾರೆ. ನಿಮ್ಮನ್ನು ಹುಡುಗರು ನೋಡಿದಾಗ ಅವರ ಕಣ್ಣುಗಳು ನಿಮ್ಮಲ್ಲಿ ಏನು ನೋಡುತ್ತಿರುತ್ತವೆ ಎಂದು ಕರಣ್ ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಜಾನ್ವಿ ಮೊದಲಿಗೆ ನಾನು ಹುಡುಗರು ನನ್ನ ಕಣ್ಣುಗಳನ್ನು ನೋಡ್ತಾರೆ ಅಂದುಕೊಂಡಿದ್ದೆ. ಆದರೆ ಅವರು ನೋಡೋದೇ ಬೇರೆ ಅಂತ ಗೊತ್ತಾಯ್ತು ಎಂದು ಹೇಳಿದ್ದರು. ಜೊತೆಗೆ ನಾನು ಯಾವುದೇ ನಟನೊಂದಿಗೆ ಡೇಟಿಂಗ್ ಮಾಡಲು ಇಷ್ಟ ಪಡೊಲ್ಲ ಎಂದು ಹೇಳಿದ್ದಾರೆ. ಸದ್ಯ ಜಾನ್ವಿ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿವೆ.

ಸದ್ಯ ಜಾನ್ವಿ ಕಪೂರ್‍ ದೇವರ ಸಿನೆಮಾದಲ್ಲಿ ಜೂನಿಯರ್‍ ಎನ್.ಟಿ.ಆರ್‍ ಜೊತೆಗೆ ನಟಿಸುತ್ತಿದ್ದಾರೆ. ಈ ಸಿನೆಮಾದ ಮೂಲಕ ಆಕೆ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ಸಿನೆಮಾದಲ್ಲಿ ಆಕೆ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿರುತ್ತಾರೆ.