Film News

ವಿಚ್ಚೇದನಕ್ಕೆ ಮುಂದಾದ ಮತ್ತೊಂದು ಬಾಲಿವುಡ್ ಜೋಡಿ, ಮದುವೆಯಾದ ಎರಡೇ ವರ್ಷದಲ್ಲಿ ವಿಚ್ಚೇದನ, ವೈರಲ್ ಆದ ಟ್ವೀಟ್…..!

ಬಾಲಿವುಡ್ ಸಿನಿರಂಗದಲ್ಲಿ ಲವ್, ಡೇಟಿಂಗ್, ಬ್ರೇಕಪ್ ಗಳು ಸರ್ವೆ ಸಾಮಾನ್ಯವಾಗಿರುತ್ತದೆ. ಇದೀಗ ಎರಡು ವರ್ಷಗಳ ಹಿಂದೆಯಷ್ಟೆ ಮದುವೆಯಾದ ಬಾಲಿವುಡ್ ಸ್ಟಾರ್‍ ನಟ ವರುಣ್ ಧವನ್ ಹಾಗೂ ನಟಾಚಾ ಇದೀಗ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಇದಕ್ಕೆಲ್ಲಾ ಕಾರಣ ಆತ ಮಾಡಿರುವ ಟ್ವೀಟ್ ಎಂದು ಹೇಳಲಾಗುತ್ತಿದೆ. ಇನ್ನೂ ಅವರ ವಿಚ್ಚೇದನದ ಬಗ್ಗೆ ಟ್ವೀಟ್ ಮಾಡಿದ್ದಾದರೂ ಯಾರು, ಏನು ಟ್ವೀಟ್ ಮಾಡಿದ್ದಾರೆ ಎಂಬ ವಿಚಾರಕ್ಕೆ ಬಂದರೇ,

ಬಾಲಿವುಡ್ ಸಿನಿರಂಗದ ಸ್ಟಾರ್‍ ಹಿರೋ ವರುಣ್ ಧವನ್ ಹಾಗೂ ನಟಾಷ ಮದುವೆಯಾಗಿ ಸುಮಾರು ಎರಡು ವರ್ಷಗಳು ಕಳೆದಿದೆ. ಮದುವೆಯಾದ ಬಳಿಕ ಈ ಜೋಡಿ  ಸಂತೋಷದಿಂದ ವೈವಾಹಿಕ ಜೀವನ ಸಾಗಿಸುತ್ತಿದ್ದರು. ನಟ ವರುಣ್ ಧವನ್ ಸುಮಾರು ಹತ್ತು ವರ್ಷಗಳಿಂದ ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಸ್ಟೂಡೆಂಟ್ ಆಫ್ ದಿ ಇಯರ್‍ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ವರುಣ್ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸಿನೆಮಾಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲೂ ಸಹ ಭಾಗಿಯಾಗುತ್ತಾ ಸದಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ಇದೀಗ ವರುಣ್ ಧವನ್ ಹಾಗೂ ನಟಾಷ ಕಳೆದ 2021 ಜನವರಿ 21 ರಂದು ಫ್ಯಾಷನ್ ಡಿಸೈನರ್‍ ನಟಾಷಾ ದಲಾಲ್ ರನ್ನು ಪ್ರೀತಿಸಿ ಮದುವೆಯಾದರು. ಮದುವೆಯಾದ ಬಳಿಕ ಈ ಜೋಡಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಇದೀಗ ಅವರು ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ. ಫಿಲಂ ಕ್ರಿಟಿಕ್ ಎಂದು ಹೇಳಿಕೊಳ್ಳುವ ಉಮೈರ್‍ ಸಂಧು ಮಾಡಿದ ಟ್ವೀಟ್ ಒಂದು ಇದೀಗ ಸಂಚಲನ ಸೃಷ್ಟಿಸಿದೆ. ವರುಣ್ ಹಾಗೂ ನಟಾಷಾ ನಡುವೆ ಎಲ್ಲವೂ ಸರಿಯಿಲ್ಲ ಶೀಘ್ರದಲ್ಲೇ ಅವರು ಬೇರೆಯಾಗಲಿದ್ದಾರೆ ಎಂಬ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಟ್ವೀಟ್ ಬಗ್ಗೆ ವರುಣ್ ಧವನ್ ಯಾವ ರೀತಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಉಮೈರ್‍ ಸಂಧು ಸದಾ ಸಿನೆಮಾ ಸೆಲಬ್ರೆಟಿಗಳ ಬಗ್ಗೆ ಅನೇಕ ಸೆನ್ಷೇಷನಲ್ ಕಾಮೆಂಟ್ಸ್ ಮಾಡುತ್ತಿರುತ್ತಾರೆ. ಇನ್ನೂ ಆತನ ಟ್ವೀಟ್ ನಲ್ಲಿ ನಿಜ ಇರುತ್ತಾ ಅಥವಾ ಪಬ್ಲಿಸಿಟಿ ಗಾಗಿ ಆ ರೀತಿ ಮಾಡುತ್ತಾರಾ ಎಂಬುದು ತಿಳಿಯದು ಆದರೆ ಅವರ ಟ್ವೀಟ್ ಗೆ ಮಾತ್ರ ನೆಟ್ಟಿಗರು ಹಾಗೂ ಆಯಾ ಸೆಲೆಬ್ರೆಟಿಗಳ ಅಭಿಮಾನಿಗಳು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಳ್ಳುತ್ತಿರುತ್ತಾರೆ. ಆದರೆ ಉಮೈರ್‍ ಸಂಧು ಮಾತ್ರ ತನ್ನ ವರಸೆಯನ್ನು ಮಾತ್ರ ಬದಲಿಸುತ್ತಿಲ್ಲ.

Most Popular

To Top