Film News

ವರದಿಗಾರರ ಮೇಲೆ ಫೈರ್ ಆದ ಸಿದ್ದಾರ್ಥ್, ಕೂಲ್ ಅಂಡ್ ಸ್ವೀಟ್ ಆಗಿಯೇ ವಾರ್ನ್ ಕೊಟ್ಟ ನಟ….!

ಕಾಲಿವುಡ್ ನಟ ಸಿದ್ದಾರ್ಥ್ ರವರನ್ನು ಸಿನಿರಂಗದಲ್ಲಿ ಲವರ್‍ ಬಾಯ್ ಎಂತಲೇ ಕರೆಯುತ್ತಾರೆ. ಆತ ಸೌತ್ ಸಿನಿರಂಗದ ಅನೇಕ ನಟಿಯರ ಜೊತೆಗೆ ಡೇಟ್ ಮಾಡಿದ್ದಾನೆ ಎಂಬ ರೂಮರ್‍ ಗಳೂ ಸಹ ಕೇಳಿಬಂದಿವೆ. ಇದೀಗ ಆತ ಅದಿತಿ ರಾವ್ ಹೈದರಿ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ರೂಮರ್‍ ಜೋರಾಗಿಯೇ ಕೇಳಿಬರುತ್ತಿದೆ. ಇದೀಗ ಕಾರ್ಯಕ್ರಮವೊಂದರಲ್ಲಿ ಸಿದ್ದಾರ್ಥ್ ರವರ ವೈಯುಕ್ತಿಕ ವಿಚಾರಗಳ ಬಗ್ಗೆ ಮಿಡಿಯಾದವರು ಪ್ರಶ್ನೆಗಳನ್ನು ಕೇಳಿದ್ದು, ಅವರಿಗೆ ಕೂಲ್ ಅಂಡ್ ಸ್ವೀಟ್ ಆಗಿಯೇ ವಾರ್ನ್ ಕೊಟ್ಟಿದ್ದಾರೆ. ಅಷ್ಟಕ್ಕೂ ಸಿದ್ದಾರ್ಥ್ ಮಿಡಿಯಾದವರನ್ನು ಉದ್ದೇಶಿಸಿ ಮಾತನಾಡಿದ್ದು ಏನು ಎಂಬ ವಿಚಾರಕ್ಕೆ ಬಂದರೇ,

ಸಿನೆಮಾ ಸೆಲೆಬ್ರೆಟಿಗಳು ಮಿಡಿಯಾದವರ ಕೈಗೆ ಸಿಕ್ಕರೇ ಅವರಿಗೆ ವಿವಿಧ ರೀತಿಯ ಪ್ರಶ್ನೆಗಳ ಸುರಿಮಳೆಗೈಯುತ್ತಾರೆ. ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳ ಬಗ್ಗೆ ಸಹ ನೇರವಾದ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಇನ್ನೂ ಅನೇಕ ಸೆಲೆಬ್ರೆಟಿಗಳು ಮಿಡಿಯಾದವರ ಪ್ರಶ್ನೆಗಳಿಗೆ ಸಮಾಧಾನವಾಗಿಯೇ ಉತ್ತರಗಳನ್ನು ನೀಡುತ್ತಾರೆ. ಮತ್ತೆ ಕೆಲವರು ಕೋಪಗೊಳ್ಳುತ್ತಿರುತ್ತಾರೆ. ಮತ್ತೆ ಕೆಲವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಸುಮ್ಮನಾಗಿರುತ್ತಾರೆ. ಅದರಲ್ಲೂ ಕೆಲವರಂತೂ ಬ್ರಿಲಿಯೆಂಟ್ ಆಗಿ ಉತ್ತರ ನೀಡುತ್ತಾರೆ. ಇದೇ ರೀತಿ ನಟ ಸಿದ್ದಾರ್ಥ್ ರವರಿಗೂ ಸಹ ಮಿಡಿಯಾದವರು ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ.

ನಟ ಸಿದ್ದಾರ್ಥ್ ಸಾಮಾನ್ಯವಾಗಿ ಮಿಡಿಯಾದವರಿಗೆ ಸಿಗುವುದಿಲ್ಲ. ಇದೀಗ ಮಿಡಿಯಾದವರಿಗೆ ಸಿದ್ದಾರ್ಥ್ ಸಿಕ್ಕಿಬಿದ್ದಿದ್ದಾರೆ. ಸುಮಾರು ದಿನಗಳಿಂದ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಬಗ್ಗೆ ಅನೇಕ ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇದೆ. ಸಿದ್ದಾರ್ಥ್ ಅಭಿನಯದ ಟಕ್ಕರ್‍ ಎಂಬ ಸಿನೆಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಜೋರಾಗಿಯೇ ನಡೆಯುತ್ತಿದೆ. ಈ ಪ್ರಮೋಷನ್ ವೇಳೆ ಭಾಗಿಯಾಗಿದ್ದ ಸಿದ್ದಾರ್ಥ್ ಹೈದರಾಬಾದ್ ಗೆ ಬಂದಿದ್ದಾರೆ. ಈ ವೇಳೆ ವರದಿಗಾರ ಪ್ರಶ್ನೆಯೊಂದನ್ನು ಕೇಳಿದ್ದಾರೆ. ನೀವು ಸಿನೆಮಾಗಳಲ್ಲಿ ಲವ್ ನಲ್ಲಿ ಸಕ್ಸಸ್ ಕಂಡ ಹಿರೋ, ಆದರೆ ರಿಯಲ್ ಲೈಫ್ ನಲ್ಲಿ ಸಕ್ಸಸ್ ಪುಲ್ ಹಿರೋ ಅಲ್ಲ. ಈ ರೀತಿ ನೀವು ಎಂದಾದರೂ ಅಂದುಕೊಂಡಿದ್ದೀರಾ ಎಂದು ಪ್ರಶ್ನೆ ಕೇಳಿದ್ದಾರೆ.

ಅದಕ್ಕೆ ಸಿದ್ದಾರ್ಥ್ ರಿಯಾಕ್ಟ್ ಆಗಿದ್ದು, ಮತ್ತೆ ಇಂತಹ ವಿಚಾರವನ್ನು ಕನ್ನಡಿ ನೋಡಿಯಾಗಲಿ, ನಿದ್ದೆಯಲ್ಲಾಗಲೀ, ನನ್ನ ಮೈಂಡ್ ನಲ್ಲಾಗಲಿ ಎಂದೂ ಸಹ ಆಲೋಚನೆ ಮಾಡಿಲ್ಲ. ಆದರೆ ರಿಯಲ್ ಲೈಫ್ ನಲ್ಲಿ ನಾನು ಯಾವ ರೀತಿಯಾಗಿ ಪ್ರೀತಿಸುತ್ತಿದ್ದೇನೆ ಎಂಬುದರ ಬಗ್ಗೆ ನೀವು ತುಂಬಾ ಯೋಚನೆ ಮಾಡುತ್ತಿರಾ. ಈ ಕಾರಣದಿಂದ ನಾವು ವೈಯುಕ್ತಿಕವಾಗಿ ಕುಳಿತು ಮಾತನಾಡಿಕೊಳ್ಳೋಣ, ಟಕ್ಕರ್‍ ಸಿನೆಮಾಗೂ ಅದಕ್ಕೂ ಏನೂ ಸಂಬಂಧವಿಲ್ಲ ಎಂದು ಸ್ವೀಟ್ ಅಂಡ್ ಸ್ಟ್ರಾಂಗ್ ಆಗಿಯೇ ಉತ್ತರ ನೀಡಿದ್ದಾರೆ. ಇನ್ನೂ ಸಿದ್ದಾರ್ಥ್‌ ಅಭಿನಯದ ಟಕ್ಕರ್‍ ಸಿನೆಮಾ ಇದೇ ಜೂ.9 ರಂದು ಬಿಡುಗಡೆಯಾಗಲಿದೆ.

Most Popular

To Top