Film News

ಕೊನೆಗೂ ಆ ಮಿಸ್ಟರಿ ಮ್ಯಾನ್ ಯಾರು ಎಂಬುದನ್ನು ರಿವೀಲ್ ಮಾಡಿದ್ರಾ ಇಲಿಯಾನಾ? ವೈರಲ್ ಆದ ಪೊಟೋ…..!

ಗೋವಾ ಬ್ಯೂಟಿ ಇಲಿಯಾನಾ ಇತ್ತೀಚಿಗೆ ತಾನು ಗರ್ಭಿಣಿಯೆಂಬ ಸುದ್ದಿಯ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಆ ಗರ್ಭಕ್ಕೆ ತಂದೆ ಯಾರು ಎಂಬುದನ್ನು ತಿಳಿಸಿದೇ ಆಕೆ ತಾನು ಗರ್ಭಿಣಿ ಎಂದು ಘೋಷಣೆ ಮಾಡಿದರು. ಬಳಿಕ ಆಕೆ ಗರ್ಭಿಣಿಯೆಂಬುದಾಗಿ ಅನೇಕ ಪೋಸ್ಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದರು. ಕೆಲವು ದಿನಗಳಿಂದ ಆಕೆ ತನ್ನ ಬೇಬಿ ಬಂಪ್ ಶೋ ಮಾಡುತ್ತಾ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಆತನೊಂದಿಗೆ ಇರುವಂತಹ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ತನ್ನ ಗರ್ಭಕ್ಕೆ ತಾನೇ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದೀಗ ಆ ಪೊಟೋ ವೈರಲ್ ಆಗುತ್ತಿದೆ.

ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯರ ಸಾಲಿನಲ್ಲಿ ಹಾಟ್ ಬ್ಯೂಟಿ ಇಲಿಯಾನಾ ಸಹ ಒಬ್ಬರಾಗಿದ್ದಾರೆ. ದೇವದಾಸು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಒಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಟಾಲಿವುಡ್ ನಲ್ಲಿ ಆಕೆ ಭಾರಿ ಆಫರ್‍ ಗಳನ್ನು ಪಡೆದುಕೊಂಡು ಸ್ಟಾರ್‍ ನಟಿಯಾದರು. ಆಕೆಯ ಕೆರಿಯರ್‍ ಸಕ್ಸಸ್ ಆಗಿರುವ ಸಮಯದಲ್ಲೇ ಆಕೆ ತೆಗೆದುಕೊಂಡಂತಹ ಕೆಲವೊಂದು ತಪ್ಪು ನಿರ್ಣಯಗಳಿಂದ ಆಕೆಯ ಸಿನಿ ಕೆರಿಯರ್‍ ಹಾಳಾಯ್ತು. ಇನ್ನೂ ಸುಮಾರು ದಿನಗಳಿಂದ ಆಕೆ ಸಿನೆಮಾಗಳಿಂದ ದೂರವೇ ಉಳಿದರು. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಆಕ್ಟೀವ್ ಆಗಿಯೇ ಇದ್ದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಮದುವೆಯಾಗದೇ ತಾನು ಗರ್ಭಿಣಿ ಎಂದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಎಲ್ಲರೂ ಶಾಕ್ ಆಗಿದ್ದರು. ಬಳಿಕ ಆಕೆ ತನ್ನ ಬೇಬಿ ಬಂಪ್ಸ್ ಜೊತೆಗೆ ಕ್ರೇಜಿ ಕಾಮೆಂಟ್ ಗಳ ಮೂಲಕ ಸದ್ದು ಮಾಡುತ್ತಲೇ ಇದ್ದಾರೆ.

ಇನ್ನೂ ಇಲಿಯಾನಾ ಮದುವೆಗೂ ಮುಂಚೆ ಗರ್ಭಿಣಿಯಾಗಿದ್ದು, ಗರ್ಭಕ್ಕೆ ಕಾರಣ ಯಾರು ಎಂಬ ವಿಚಾರವನ್ನು ಮಾತ್ರ ತಿಳಿಸಿಲ್ಲ. ಈ ಬಗ್ಗೆ ಅನೇಕ ರೂಮರ್‍ ಗಳೂ ಸಹ ಕೇಳಿಬರುತ್ತಿದ್ದರೂ ಇಲಿಯಾನಾ ಮಾತ್ರ ತನ್ನ ಮಗುವಿನ ತಂದೆ ಯಾರು ಎಂಬ ವಿಚಾರವನ್ನು ಮಾತ್ರ ಹೊರಹಾಕಿಲ್ಲ. ಇದೀಗ ತನ್ನ ಮಿಸ್ಟರಿ ಬಾಯ್ ಫ್ರೆಂಡ್ ಬಗ್ಗೆ ರಿವೀಲ್ ಮಾಡಿದ್ದಾರೆ. ಬೆಬಿ ಮೂನ್ ಬೀಚ್ ಎಂಬಲ್ಲಿ ಇಲಿಯಾನಾ ಇದ್ದು, ಅಲ್ಲಿನ ಕೆಲವೊಂದು ಪೊಟೋಗಳನ್ನು ಆಕೆ ಹಂಚಿಕೊಂಡಿದ್ದಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ಒಬ್ಬ ವ್ಯಕ್ತಿಯ ಕೈಯನ್ನು ಹಿಡಿದ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಆತನೊಂದಿಗೆ ಡಿನ್ನರ್‍ ಮಾಡುತ್ತಿದ್ದಾರೆ. ಆದರೆ ಆತನ ಮುಖ ಮಾತ್ರ ತೋರಿಸಿಲ್ಲ. ಆದರೆ ಅವರಿಬ್ಬರ ಬೆರಳಿಗೆ ಉಂಗುರಗಳಿದ್ದು, ಇವರಿಬ್ಬರಿಗೂ ಎಂಗೇಜ್ ಮೆಂಟ್ ಆಗಿದೆ ಎಂದು ಹೇಳಲಾಗುತ್ತಿದೆ.

ಈ ಪೊಟೋ ಜೊತೆಗೆ ಆಕೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ನನ್ನ ರೊಮ್ಯಾನ್ಸ್ ಆಲೋಚನೆ ನನ್ನನ್ನು ಪ್ರಶಾಂತವಾಗಿ ತಿನ್ನಲು ಬಿಡುವುದಿಲ್ಲ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಇದೀಗ ಆಕೆ ಆ ಮಿಸ್ಟರಿ ಮ್ಯಾನ್ ಯಾರು ಎಂಬ ಬಗ್ಗೆ ಹಿಂಟ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಆತ ಯಾರು ಎಂಬುದು ತಿಳಿದುಬರಬಹುದಾಗಿದೆ.

Most Popular

To Top