Film News

ಸ್ಟಾರ್ ನಟಿಯರ ಮೇಲೆ ಸಂಚಲನಾತ್ಮಕ ಕಾಮೆಂಟ್ಸ್ ಮಾಡಿದ ಕಂಗನಾ, ಅವರು ನಿರ್ಮಾಪಕರೊಂದಿಗೆ ಕಮಿಟ್ ಆಗುತ್ತಾರೆ ಎಂದ ನಟಿ….!

ಬಾಲಿವುಡ್ ನಲ್ಲಿ ಫೈರ್‍ ಬ್ರಾಂಡ್ ಎಂತಲೇ ಖ್ಯಾತಿ ಪಡೆದುಕೊಂಡ ಸ್ಟಾರ್‍ ನಟಿ ಕಂಗನಾ ರಾನೌತ್ ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಮೇಲೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಜೊತೆಗೆ ರಾಜಕೀಯ ನಾಯಕರನ್ನೂ ಸಹ ಆಕೆ ವಿಮರ್ಶೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆಯನ್ನು ಕಾಂಟ್ರವರ್ಸಿ ಕ್ವೀನ್ ಎಂತಲೂ ಕರೆಯುತ್ತಾರೆ. ಇದೀಗ ಆಕೆ ಬಾಲಿವುಡ್ ಸ್ಟಾರ್‍ ನಟಿಯರ ಮೇಲೆ ಸಂಚಲನಾತ್ಮಕ ಕಾಮೆಂಟ್ ಗಳನ್ನು ಮಾಡಿದ್ದಾರೆ. ಆ ಮೂಲಕ ಮತ್ತೊಮ್ಮೆ ಆಕೆ ಸುದ್ದಿಯಾಗಿದ್ದಾರೆ.

ಬಾಲಿವುಡ್ ನಟಿ ಕಂಗನಾ ಬಾಲಿವುಡ್ ಸಿನಿರಂಗದ ಮೇಲೆ ಆಗಾಗ ಫೈರ್‍ ಆಗುತ್ತಿರುತ್ತಾರೆ. ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾಗುತ್ತಿರುತ್ತಾರೆ. ಬಾಲಿವುಡ್ ನಟಿಯರಲ್ಲಿ ಕಂಗನಾ ವಿಭಿನ್ನವಾದ ನಟಿಯೆಂದಲೇ ಹೇಳಬಹುದಾಗಿದೆ. ಸ್ಟಾರ್‍ ನಟರೊಂದಿಗೆ ಅನೇಕ ಸಿನೆಮಾಗಳಲ್ಲಿ ನಟಿಸಿದ ಈಕೆ ಇದೀಗ ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೂಲಕ ಕೆರಿಯರ್‍ ಸಾಗಿಸುತ್ತಿದ್ದಾರೆ. ಅದರಲ್ಲೂ ಸೋಲು-ಗೆಲುವು ಎಂಬುದನ್ನು ನೋಡದಂತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಥೆಯ ಜೊತೆಗೆ ತನ್ನ ಪಾತ್ರಕ್ಕೂ ಪ್ರಾಮುಖ್ಯತೆಯಿದ್ದರೇ ಮಾತ್ರ ಆಕೆ ಸಿನೆಮಾಗೆ ಒಪ್ಪಿಗೆ ನೀಡುತ್ತಾರೆ. ಬಾಲಿವುಡ್ ನ ನೆಪೊಟಿಜಂ, ಪುರುಷಾಧಿಪತ್ಯ, ಕಾಸ್ಟಿಂಗ್ ಕೌಚ್ ಬಗ್ಗೆ ಕಾಮೆಂಟ್ಸ್ ಮಾಡುತ್ತಲೇ ಇರುತ್ತಾರೆ. ಇದೀಗ ಆಕೆ ಮತ್ತೊಂದು ಕಾಂಟ್ರವರ್ಸಿ ಕಾಮೆಂಟ್ ಮಾಡಿದ್ದಾರೆ.

ಬಾಲಿವುಡ್ ಸಿನಿರಂಗದ ಕೆಲವು ನಟಿಯರ ಮೇಲೆ ಕಂಗನಾ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ ಅನೇಕ ಎ ಲೀಸ್ಟ್ ನಲ್ಲಿರುವ ಹಿರೋಯಿನ್ ಗಳು ಯಾವುದೇ ಸಂಭಾವನೆ ಪಡೆಯದೇ ನಟಿಸುತ್ತಾರೆ. ಇತರೆ ಮಾರ್ಗದಲ್ಲಿ ನಿರ್ದೇಶಕ ನಿರ್ಮಾಪಕರು ಫೇವರ್‍ ಮಾಡುತ್ತಾರೆ. ತಮ್ಮ ಕೆರಿಯರ್‍ ಹಾಳಾಗಬಾರದು ಎಂಬ ಉದ್ದೇಶದಿಂದಲೇ ಆ ಹಿರೋಯಿನ್ ಗಳು ಮೇಕರ್ಸ್ ಜೊತೆಗೆ ಎಲ್ಲಾ ರೀತಿಯಲ್ಲೂ ಕಮಿಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟೇಅಲ್ಲದೇ ಸಂಭಾವನೆಯ ಬಗ್ಗೆ ಸಹ ಮಾತನಾಡಿದ್ದಾರೆ. ಆದರೆ ಅನೇಕ ನಟಿಯರು ತಮ್ಮ ಕೆರಿಯರ್‍ ಗಾಗಿ ಕೆಲವೊಂದು ಸಿನೆಮಾಗಳಲ್ಲಿ ಉಚಿತವಾಗಿ ನಟಿಸಿದ್ದಾರೆ. ಆದರೆ ನಾನು ಮಾತ್ರ ಆ ರೀತಿ ಮಾಡೊದಿಲ್ಲ. ಹಿರೋಗಳಿಗೆ ಸಮನಾದ ಸಂಭಾವನೆ ಪಡೆಯುವುದು ನಾನು ಮಾತ್ರ ಎಂದು ಹೇಳಿದ್ದಾರೆ.

ಇನ್ನೂ ನಟಿ ಕಂಗನಾ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದು, ಆಕೆಯ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಸದ್ಯ ಕಂಗನಾ ಎಮರ್ಜೆನ್ಸಿ ಹಾಗೂ ಚಂದ್ರಮುಖಿ-2 ಸಿನೆಮಾದಲ್ಲಿ ನಟಿಸಿದ್ದು, ಶೀಘ್ರದಲ್ಲೇ ಈ ಸಿನೆಮಾಗಳು ತೆರೆಗೆ ಬರಲಿದೆ.

Most Popular

To Top