Film News

ನನ್ನ ತಂದೆ ಸುಮ್ಮನಿರುತ್ತಾರೇನೋ, ನಾವು ಹಾಗಲ್ಲ ಎಂದು ರಾಮ್ ಚರಣ್ ಸ್ಟ್ರಾಂಗ್ ವಾರ್ನಿಂಗ್…..!

ತೆಲುಗು ಸಿನಿರಂಗದಲ್ಲಿ ದೊಡ್ಡ ಕುಟುಂಬಗಳಲ್ಲಿ ಮೆಗಾ ಫ್ಯಾಮಿಲಿ ಸಹ ಒಂದಾಗಿದೆ. ಮೆಗಾಸ್ಟಾರ್‍ ಚಿರಂಜೀವಿ ತೆಲುಗು ಸಿನಿರಂಗದಲ್ಲಿ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡ ನಟರಾಗಿದ್ದಾರೆ. ಇನ್ನೂ ಆಗಾಗ ಚಿರಂಜೀವಿಯವರ ಬಗ್ಗೆ ಅನೇಕರು ಟೀಕೆಗಳನ್ನು ಮಾಡುತ್ತಿದ್ದು, ಈ ಬಗ್ಗೆ ಚಿರು ಪುತ್ರ ರಾಮ್ ಚರಣ್ ಇದೀಗ ಫೈರ್‍ ಆಗಿದ್ದಾರೆ. ನಮ್ಮ ತಂದೆ ಸುಮ್ಮನಿರುತ್ತಾರೆ, ಆದರೆ ನಾವು ಹಾಗಲ್ಲ ಎಂದು ಸ್ಟ್ರಾಂಗ್ ವಾರ್ನಿಂಗ್ ಕೊಟ್ಟಿದ್ದಾರೆ. ಇದೀಗ ರಾಮ್ ಚರಣ್ ಹೇಳಿಕೆಗಳು ಇದೀಗ ಹಾಟ್ ಟಾಪಿಕ್ ಆಗಿದೆ.

ನಟ ರಾಮ್ ಚರಣ್ ವಾಲ್ತೇರು ವಿರಯ್ಯ ವಿಜಯ ವಿಹಾರ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ರಾಮ್ ಚರಣ್ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಹನುಮಕೊಂಡ ಎಂಬ ಪ್ರದೇಶದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಮ್ ಚರಣ್ ಚಿರಂಜೀವಿ ವಿರೋಧಿಗಳು, ಕೆಲವು ನಿರ್ಮಾಪಕರನ್ನು ಟಾರ್ಗೆಟ್ ಮಾಡಿ ಈ ವಾರ್ನಿಂಗ್ ನೀಡಿದ್ದಾರೆ ಎನ್ನಲಾಗುತ್ತಿದೆ. ನಮ್ಮ ತಂದೆಯವರು ಸುಮ್ಮನಿರುತ್ತಾರೆ. ಅದಕ್ಕಾಗಿಯೇ ಇಷ್ಟು ಮಂದಿ ಬಂದಿದ್ದೇವೆ. ಆದೇ ಅವರು ಕೊಂಚ ಜೋರಾಗಿ ಮಾತನಾಡಿದರೇ ಹೇಗೆ ಇರುತ್ತೆ, ಆ ಬಳಿಕ ಏನಾಗುತ್ತದೆ ಊಹೆ ಮಾಡಿಕೊಳ್ಳಿ. ಚಿರಂಜೀವಿ ಯವರು ಸೈಲೆಂಟ್ ಆಗಿರುತ್ತಾರೆನೋ, ನಾವು ಮಾತ್ರ ಸೈಲೆಂಟ್ ಆಗಿ ಇರುವುದಿಲ್ಲ ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಇನ್ನೂ ಈ ಹೇಳಿಕೆಗಳನ್ನು ಕೇಳಿದ ಎಲ್ಲರೂ ಆಶ್ಚರ್ಯಕ್ಕೆ ಗುರಿಯಾಗಿದ್ದಾರೆ.

ಅಷ್ಟೇಅಲ್ಲದೇ ಕೆಲ ನಿರ್ಮಾಪಕರಿಗೂ ಸಹ ಕೌಂಟರ್‍ ಕೊಟ್ಟಿದ್ದಾರೆ. ಮೈತ್ರಿ ಮೇಕರ್ಸ್ ನಿರ್ಮಾಪಕರಾದ ನವೀನ್ ಹಾಗೂ ರವಿ ತುಂಬಾ ಫ್ಯಾಷಿನೇಟ್ ನಿರ್ಮಾಪಕರಾಗಿದ್ದಾರೆ. ಅವರು ತುಂಬಾ ಇಷ್ಟದಿಂದ, ಡೆಡಿಕೇಷನ್ ಮೂಲಕ ಸಿನೆಮಾಗಳನ್ನು ಮಾಡುತ್ತಾರೆ. ಅವರಂತೆ ಯಾರು ಸಿನೆಮಾಗಳನ್ನು ಮಾಡುವುದಿಲ್ಲ. ಅವರ ಬ್ಯಾನರ್‍ ನಡಿ ತೆರೆಕಂಡ ಅನೇಕ ಸಿನೆಮಾಗಳು ಹಿಟ್ ಆಗಿದೆ. ಕೆಲವು ನಿರ್ಮಾಪಕರು ಅದರಲ್ಲೂ ಇಬ್ಬರು ಮೂವ್ವರು ಅವರನ್ನು ನೋಡಿ ಕಲಿಯಬೇಕು ಎಂದು ಹೇಳಿದ್ದಾರೆ. ಇನ್ನೂ ವಾಲ್ತೇರು ವೀರಯ್ಯ ಸಿನೆಮಾ ನಿಜಕ್ಕೂ ಪೂನಕಾಲು ಲೋಡಿಂಗ್ ಎಂಬಂತಿದೆ. ಈ ಸಿನೆಮಾದಲ್ಲಿ ಚಿರಂಜೀವಿವರು ಬ್ರದರ್‍ ಎಂಬಂತೆ ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ತುಂಬಾ ಅದ್ಬುತವಾದ ಹಾಡುಗಳಿದ್ದು, ಸಂಗೀತ ನಿರ್ದೇಶಕ ದೇವಿಶ್ರೀಪ್ರಸಾದ್ ರವರಿಗೂ ಸಹ ರಾಮ್ ಚರಣ್ ಧನ್ಯವಾದಗಳನ್ನು ತಿಳಿಸಿದ್ದಾರೆ. ಅದೇ ರೀತಿ ರವಿತೇಜ ರವರ ಪಾತ್ರ ಸಹ ತುಂಬಾ ಚೆನ್ನಾಗಿದೆ ಎಂದು ಸಿನೆಮಾದ ಬಗ್ಗೆ ಹೊಗಳಿದ್ದಾರೆ.

ಇನ್ನೂ ನಟ ರಾಮ್ ಚರಣ್ ನೀಡಿರುವ ಈ ಸಂಚಲನಾತ್ಮಕ ಹೇಳಿಕೆಗಳು ಯಾರನ್ನು ಉದ್ದೇಶಿಸಿ ಹೇಳಲಾಗಿದೆ ಎಂಬುದು ಹಾಟ್ ಟಾಪಿಕ್ ಆಗಿದೆ. ಕೆಲವು ದಿನಗಳ ಹಿಂದೆ ನಟಿ ಹಾಗೂ ಮಂತ್ರಿ ರೋಜಾ ಸಹ ಕೆಲವೊಂದು ಹೇಳಕೆಗಳನ್ನು ನೀಡಿದ್ದರು. ಜೊತೆಗೆ ಆಂಧ್ರದ ಅನೇಕ ರಾಜಕೀಯ ನಾಯಕರು ಸಹ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಬಗ್ಗೆ ಕಾಮೆಂಟ್ ಗಳನ್ನು ಮಾಡುತ್ತಲೇ ಇರುತ್ತಾರೆ. ಇನ್ನೂ ಅವರನ್ನೇ ಉದ್ದೇಶಿಸಿ ರಾಮ್ ಚರಣ್ ಈ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗುತ್ತಿದ್ದು, ಇಡೀ ಕಾರ್ಯಕ್ರಮಕ್ಕೆ ರಾಮ್ ಚರಣ್ ಹೇಳಿಕೆಗಳು ಹೈಲೈಟ್ ಆಗಿದೆ ಎಂದೂ ಸಹ ಹೇಳಲಾಗುತ್ತಿದೆ.

Most Popular

To Top