ಕೊಟ್ಟ ಮಾತನ್ನು ನೆರವೇರಿಸಿದ ಲಾರೆನ್ಸ್, ವಿಶೇಷಚೇತನರಿಗೆ ಮನೆ, ಬೈಕ್ ನೀಡಿದ ನಟ, ವೈರಲ್ ಆದ ವಿಡಿಯೋ….!

Follow Us :

ಸೌತ್ ಸಿನಿರಂಗದ ಸ್ಟಾರ್‍ ನಟ, ನಿರ್ಮಾಪಕ, ನಿರ್ದೇಶಕ, ಕೊರಿಯೋಗ್ರಾಫರ್‍ ರಾಘವ ಲಾರೆನ್ಸ್ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಮಲ್ಟಿ ಟ್ಯಾಲೆಂಟೆಡ್ ಕಲಾವಿದನಾಗಿ ಸಿನೆಮಾಗಳಲ್ಲಿ ಮಾತ್ರವಲ್ಲದೇ ಸಮಾಜ ಸೇವೆಯ ಮೂಲಕ ಫೇಂ ಪಡೆದುಕೊಂಡಿದ್ದಾರೆ. ಸ್ವಯಂ ಕೃಷಿಯಿಂದ ಈ ಮಟ್ಟಕ್ಕೆ ಬೆಳೆದ ರಾಘವ ಲಾರೆನ್ಸ್ ಬಡವರು, ನಿರ್ಗತಿಕರಿಗಾಗಿ ವಿವಿಧ ರೀತಿಯ ಸಹಾಯ ಮಾಡುತ್ತಿರುತ್ತಾರೆ. ಇದೀಗ ವಿಶೇಷ ಚೇತನರಿಗೆ ತಾನು ಕೊಟ್ಟ ಮಾತಿನಂತೆ ಮನೆ, ಬೈಕ್ ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸೌತ್ ನಟ ರಾಘವ ಲಾರೆನ್ಸ್ ಸಾಮಾನ್ಯನಾಗಿ ನಿರ್ದೇಶಕನ ಕಾರು ಒರೆಸುವವನಾಗಿ ಕೆಲಸ ಆರಂಭಿಸಿದ್ದರು. ಬಳಿಕ ಸೈಡ್ ಡ್ಯಾನ್ಸರ್‍ ಆಗಿ, ಪ್ರಮುಖ ಡ್ಯಾನ್ಸರ್‍ ಆಗಿ, ಕೊರಿಯೋಗ್ರಾಫರ್‍ ಆಗಿ, ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಬೆಳೆದಿದ್ದಾರೆ. ತುಂಬಾ ಬಡತನದಿಂದ ಬಂದು ಓರ್ವ ಸ್ಟಾರ್‍ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದುಡಿದ ಹಣದಲ್ಲಿ ಇಂತಿಷ್ಟು ಮೀಸಲಿಟ್ಟು, ಅದನ್ನು ಬಡವರಿಗಾಗಿ ಮೀಸಲಿಟ್ಟು ಅವರಿಗೆ ಸಹಾಯ ಮಾಡುತ್ತಿರುತ್ತಾರೆ. ಈ ರೀತಿ ಲಾರೆನ್ಸ್ ಕೈಗೊಂಡ ಸಾಮಾಜಿಕ ಕಾರ್ಯಕ್ರಮಗಳ ದೊಡ್ಡ ಪಟ್ಟಿಯೇ ಇದೆ ಎನ್ನಬಹುದಾಗಿದೆ. ಇದೀಗ ಅವರು ಮತ್ತೊಂದು ಸಾಮಾಜಿಕ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್ನೂ ನಟ ಲಾರೆನ್ಸ್ ಅನಾಥ ಮಕ್ಕಳು, ವಿಶೇಷ ಚೇತನರಿಗಾಗಿ ತನ್ನ ಕೈಯಲ್ಲಾದ ಸಹಾಯ ಮಾಡುತ್ತಿರುತ್ತಾರೆ. ಇದೀಗ ಅವರು ಕೊಟ್ಟ ಮಾತೊಂದನ್ನು ನೆರವೇರಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಕಾರ್ಯಕ್ರಮವೊಂದರಲ್ಲಿ ಕೊಟ್ಟ ಮಾತಿನಂತೆ ವಿಶೇಷ ಚೇತನರಿಗೆ ಬೈಕ್ ಗಳನ್ನು ಖರೀದಿಸಿ ಕೊಟ್ಟಿದ್ದಾರೆ. ಮಲ್ಲರಕಂಭಂ ಎಂಬಲ್ಲಿ ವಿಶೇಷಚೇತನರು ಅದ್ಬುತವಾದ ಪ್ರದರ್ಶನ ಮಾಡಿದರು ಎಂಬ ಪ್ರೆಸ್ ಮೀಟ್ ಒಂದರಲ್ಲಿ ನೋಡಿದ್ದೇ ಮಾಡುವ ಕೆಲಸದ ಮೇಲೆ ಅವರಿಗಿರುವ ಕಾಳಜಿ ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ. ಆದ್ದರಿಂದ ಅವರಿಗೆಲ್ಲಾ ಬೈಕ್ಸ್ ಹಾಗೂ ಮನೆ ಕಟ್ಟಿಕೊಡುವುದಾಗಿ ಮಾತು ಕೊಟ್ಟಿದ್ದೇನೆ. ಈ ವಾಹನಗಳನ್ನು ಅವರಿಗೆ ಉಪಯೋಗವಾಗುವಂತೆ ವಾಹನಗಳನ್ನು ತ್ರಿಚಕ್ರವಾಹಗಳಾಗಿ ಮಾರ್ಪಾಡು ಮಾಡಿಕೊಡುತ್ತೇವೆ. ಅದೇ ರೀತಿ ಕೊಟ್ಟ ಮಾತಿನಂತೆ ಶೀಘ್ರದಲ್ಲೆ ಮನೆ ಸಹ ಕಟ್ಟಿಸಿಕೊಡುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಇದೀಗ ಲಾರೆನ್ಸ್ ಹಂಚಿಕೊಂಡ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವು ದಿನಗಳ ಹಿಂದೆ ಸಹ ಗಂಡನನ್ನು ಕಳೆದುಕೊಂಡ ಮಹಿಳೆಗೆ ಆಟೋ ಒಂದನ್ನು ಖ್ಯಾತ ಯೂಟ್ಯೂಬರ್‍ ಬಾಲಾ ಜೊತೆಗೆ ಕೊಟ್ಟಿದ್ದರು. ಈ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.