Film News

ಶೀಘ್ರದಲ್ಲೇ ಬುಟ್ಟಬೊಮ್ಮ ಪೂಜಾ ಹೆಗ್ಡೆ ಮದುವೆಯಂತೆ, ಸ್ಟಾರ್ ಕ್ರಿಕೆಟರ್ ರನ್ನು ಮದುವೆಯಾಗಲಿದ್ದಾರಂತೆ ಪೂಜಾಹೆಗ್ಡೆ….!

ಸಿನೆಮಾ ನಟಿಯರ ಬಗ್ಗೆ ಸದಾ ಕೇಳಿಬರುವ ಒಂದೇ ಪ್ರಶ್ನೆ ಮದುವೆ. ನಟಿಯರು ಸಂದರ್ಶನದಲ್ಲಿ ಕಾಣಿಸಿದರೂ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೂ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಿರುತ್ತಾರೆ. ಕೆಲವೊಮ್ಮೆ ರೂಮರ್‍ ಗಳೂ ಸಹ ಕೇಳಿಬರುತ್ತಿರುತ್ತದೆ. ಇದೀಗ ಸೌತ್ ಸಿನಿರಂಗದ ಸ್ಟಾರ್‍ ನಟಿ ಪೂಜಾ ಹೆಗ್ಡೆ ಮದುವೆಯ ಬಗ್ಗೆ ಹೊಸ ರೂಮರ್‍ ಒಂದು ಕೇಳಿಬರುತ್ತಿದ್ದು, ಶೀಘ್ರದಲ್ಲೇ ಆಕೆ ಸ್ಟಾರ್‍ ಕ್ರಿಕೆಟರ್‍ ಒಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆತ ಯಾರು ಎಂಬ ಚರ್ಚೆ ಸಹ ಶುರುವಾಗಿದೆ.

ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಸೋಲು ಕಂಡರೂ ಸಹ ಬೇಡಿಕೆಯುಳ್ಳ ನಟಿಯರಲ್ಲಿ ಮೊದಲ ಸ್ಥಾನ ಸ್ಟಾರ್‍ ನಟಿ ಪೂಜಾ ಹೆಗ್ಡೆಗೆ ಸಲ್ಲುತ್ತದೆ. ಬುಟ್ಟಬೊಮ್ಮ ಎಂದೇ ಕರೆಯಲಾಗುವ ಪೂಜಾ ಹೆಗ್ಡೆ ಮಾತ್ರ ಹ್ಯಾಟ್ರಿಕ್ ಸೋಲುಗಳನ್ನು ಕಂಡರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಡಸ್ಕಿ ಬ್ಯೂಟಿಯ ಮಾದಕ ಪೊಟೋಗಳಿಗೆ ಫಿದಾ ಆಗುತ್ತಿರುತ್ತಾರೆ. ಜೊತೆಗೆ ಆಗಾಗ ವೆಕೇಷನ್ ಗಳಿಗೂ ಸಹ ಹಾರುತ್ತಾ ಅಲ್ಲಿನ ಎಂಜಾಯ್ ಮಾಡುವ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಾ ಮತಷ್ಟು ಕ್ರೇಜ್ ಪಡೆದುಕೊಳ್ಳುತ್ತಿರುತ್ತಾರೆ.

ಇನ್ನೂ ಪೂಜಾ ಹೆಗ್ಡೆ ಕೊನೆಯದಾಗಿ ಸಲ್ಮಾನ್ ಖಾನ್ ಜೊತೆಗೆ ಕಿಸಿಕಿ ಭಾಯ್ ಕಿಸಿಕಿ ಜಾನ್ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಸಹ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಇದೀಗ ಪೂಜಾ ಹೆಗ್ಡೆ ಮದುವೆಯ ಬಗ್ಗೆ ಶಾಕಿಂಗ್ ರೂಮರ್‍ ಒಂದು ಹರಿದಾಡುತ್ತಿದೆ. ಈ ಹಿಂದೆ ಸಹ ಆಕೆಯ ಮದುವೆಯ ಬಗ್ಗೆ ಕೆಲವೊಂದು ಸುದ್ದಿಗಳು ಕೇಳಿಬರುತ್ತಿತ್ತು. ಇದೀಗ ಕ್ರೇಜಿ ರೂಮರ್‍ ಹರಿದಾಡುತ್ತಿದೆ. ಪೂಜಾ ಹೆಗ್ಡೆ ಸ್ಟಾರ್‍ ಕ್ರಿಕೆಟರ್‍ ಜೊತೆಗೆ ಪ್ರೀತಿಗೆ ಬಿದ್ದಿದ್ದು, ಶೀಘ್ರದಲ್ಲೇ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಸದ್ಯ ಈ ಸುದ್ದಿ ಸಿನಿರಂಗ ಹಾಗೂ ಸೋಷಿಯಲ್ ಮಿಡಿಯಾದಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಜೊತೆಗೆ ಆ ಸ್ಟಾರ್‍ ಕ್ರಿಕೆಟರ್‍ ಯಾರು ಎಂಬ ಚರ್ಚೆ ಸಹ ಸೋಷಿಯಲ್ ಮಿಡಿಯಾದಲ್ಲಿ ಶುರುವಾಗಿದೆ.

ಅಷ್ಟೇಅಲ್ಲದೇ ಆಕೆ ಇತ್ತೀಚಿಗೆ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲೂ ಸಹ ಇಬ್ಬರೂ ಭಾಗಿಯಾಗಿದ್ದರು ಎಂಬ ಪ್ರಚಾರ ಸಹ ನಡೆಯುತ್ತಿದೆ. ಈ ಬಗ್ಗೆ ಪೂಜಾ ಯಾವ ರೀತಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಪೂಜಾ ಹೆಗ್ಡೆ ಕಾಲಿಗೆ ಗಾಯವಾದ ಕಾರಣದಿಂದ ಆಕೆ ಸಿನೆಮಾಗಳಿಂದ ದೂರ ಇದ್ದಾರೆ ಎಂಬ ಮಾತುಗಳೂ ಸಹ ಕೇಳಿಬಂದಿದೆ.

Trending

To Top