ಸಿನೆಮಾ ನೋಡಿದ ಬಳಿಕ ನೀವು ಅವರೊಂದಿಗೆ ಪ್ರೀತಿಗೆ ಬೀಳದೇ ಇದ್ದರೇ ನನ್ನ ಹೆಸರು ಬದಲಿಸಿಕೊಳ್ಳುತ್ತೇನೆ ಎಂದ ಮೃಣಾಲ್, ವೈರಲ್ ಆದ ಕಾಮೆಂಟ್ಸ್……!

ಮೊದಲನೇ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ನಟಿಯರಲ್ಲಿ ಮೃಣಾಲ್ ಠಾಕೂರ್‍ ಸಹ ಒಬ್ಬರಾಗಿದ್ದಾರೆ. ಸೀತಾರಾಮಂ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಮೃಣಾಲ್ ಓವರ್‍ ನೈಟ್ ಸ್ಟಾರ್‍ ಆದರು. ಆಕೆ ಅಭಿನಯದ ಹಾಯ್ ನಾನ್ನ ಸಿನೆಮಾ…

ಮೊದಲನೇ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ನಟಿಯರಲ್ಲಿ ಮೃಣಾಲ್ ಠಾಕೂರ್‍ ಸಹ ಒಬ್ಬರಾಗಿದ್ದಾರೆ. ಸೀತಾರಾಮಂ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಮೃಣಾಲ್ ಓವರ್‍ ನೈಟ್ ಸ್ಟಾರ್‍ ಆದರು. ಆಕೆ ಅಭಿನಯದ ಹಾಯ್ ನಾನ್ನ ಸಿನೆಮಾ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಸಿನೆಮಾದ ಪ್ರೀ ರಿಲೀಸ್ ಈವೆಂಟ್ ಸಹ ಭರದಿಂದ ಸಾಗುತ್ತಿದೆ. ಈವೆಂಟ್ ನಲ್ಲಿ ಮೃಣಾಲ್ ನೀಡಿದ ಕಾಮೆಂಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡು‌ತ್ತಿದೆ. ಈ ಸಿನೆಮಾದ ನೋಡಿದ ಬಳಿಕ ಅವರೊಂದಿಗೆ ಪ್ರೀತಿಗೆ ಬೀಳದೇ ಇದ್ದರೇ ತನ್ನ ಹೆಸರನ್ನು ಬದಲಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನಟಿ ಮೃಣಾಲ್ ನ್ಯಾಚುರಲ್ ಸ್ಟಾರ್‍ ನಾನಿ ಜೊತೆಗೆ ಹಾಯ್ ನಾನ್ನ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಶೌರ್ಯೂವ್ ಎಂಬ ಡೆಬ್ಯೂ ಡೈರೆಕ್ಟರ್‍ ನಿರ್ದೇಶನದ ಈ ಸಿನೆಮಾ ಡಿ.7 ರಂದು ತೆರೆಗೆ ಬರಲಿದೆ. ಈ ನಿಟ್ಟಿನಲ್ಲಿ ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ. ಇತ್ತೀಚಿಗಷ್ಟೆ ವೈಜಾಗ್ ನಲ್ಲಿ ಪ್ರೀ ರಿಲೀಸ್ ಈವೆಂಟ್ ಆಯೋಜಿಸಲಾಗಿತ್ತು. ಈ ವೇಳೆ ಮೃಣಾಲ್ ರೆಡ್ ಸೀರೆಯಲ್ಲಿ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದರು. ಸೀರೆಯಲ್ಲಿ ಈವೆಂಟ್ ನಲ್ಲಿದ್ದ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಪಕ್ಕಾ ತೆಲುಗು ಹುಡುಗಿಯಂತೆ ಆಕೆ ಕಾಣಿಸಿಕೊಂಡಿದ್ದು, ಈವೆಂಟ್ ಗೆ ಸ್ಪೇಷಲ್ ಅಟ್ರಾಕ್ಷನ್ ಆಗಿದ್ದರು ಎಂದೇ ಹೇಳಬಹುದಾಗಿದೆ. ಇದೀಗ ಆಕೆ ಮಾಡಿದಂತಹ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ.

ಮೃಣಾಲ್ ಈವೆಂಟ್ ನಲ್ಲಿ ಮಾತನಾಡುತ್ತಾ ನಿರ್ದೇಶಕ ಈ ಸಿನೆಮಾದ ಕಥೆಯನ್ನು ಹೇಳಿದಾಗ ನಾನು ತುಂಬಾ ಎಗ್ಸೈಟ್ ಆಗಿದ್ದೆ. ಅದರಲ್ಲೂ ನಾನಿ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದು ಕೇಳಿ ಮತಷ್ಟು ಎಗ್ಸೈಟ್ ಆಗಿದ್ದೆ. ನಾನಿ ಜೊತೆಗೆ ಕೆಲಸ ಮಾಡುವುದು ಅದ್ಬುತವಾದ ಅನುಭವ ಅದೇ ರೀತಿ ಸಿನೆಮಾದಲ್ಲಿ ಬಾಲ ನಟಿಯಾಗಿ ನಟಿಸಿದ ಕಿಯಾರಾ ಜೊತೆಗೂ ಸಹ ನಟಿಸಿದ್ದು ಅದ್ಬುತವಾದ ಅನುಭವ. ಈ ಸಿನೆಮಾದ ಮೂಲಕ ನನಗೆ ಒಳ್ಳೆಯ ಫ್ರೆಂಡ್ ದೊರಕಿದಂತಾಗಿದೆ. ಸೀತಾರಾಮಂ ಸಿನೆಮಾದಲ್ಲಿ ನನ್ನನ್ನು ಸೀತೆಯಾಗಿ ಎಲ್ಲರೂ ಉತ್ತಮವಾಗಿ ಬೆಂಬಲಿಸಿದ್ದರು. ಇದೀಗ ಹಾಯ್ ನಾನ್ನ ಸಿನೆಮಾವನ್ನು ಸಹ ನೋಡಿ ನನ್ನನ್ನು ಬೆಂಬಲಿಸಿ. ಎಂದಿದ್ದಾರೆ.

ಇನ್ನೂ ಈ ಸಿನೆಮಾದಲ್ಲಿ ತಂದೆ ಮಗಳ ಮದ್ಯೆ ಒಳ್ಳೆಯ ಬಾಂಡಿಂಗ್ ಇರುತ್ತದೆ. ಸಿನೆಮಾ ಮಾಡುವಾಗ ನನಗೆ ನಮ್ಮ ತಂದೆ ನೆನಪಿಗೆ ಬಂದರು. ನಾನಿ ಹಾಗೂ ಪುಟಾಣಿಯ ಮದ್ಯೆ ಇರುವಂತಹ ಬಾಡಿಂಗ್ ಚೆನ್ನಾಗಿರುತ್ತದೆ. ಸಿನೆಮಾ ನೋಡಿದ ಬಳಿ ಅವರೊಂದಿಗೆ ಪ್ರೀತಿಗೆ ಬೀಳೋದು ಖಚಿತ. ಒಂದು ವೇಳೆ ಆ ರೀತಿಯಾಗದಿದ್ದರೇ, ನನ್ನ ಹೆಸರನ್ನು ಬದಲಿಸಿಕೊಳ್ಳುತ್ತೇನೆ ಎಂದು ಆಕೆ ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.