ಹಾಸನ ಮಗು ಸಾವು ಪ್ರಕರಣಕ್ಕೆ ನಿಮಾನ್ಸ್ ಕ್ಲಾರಿಟಿ, ಮಗು ಬದುಕೋ ಸಾಧ್ಯತೆ ತುಂಬಾ ಕಡಿಮೆಯಿತ್ತು ಎಂದ ನಿಮಾನ್ಸ್……!

ಕಳೆದೆರಡು ದಿನಗಳ ಹಿಂದೆಯಷ್ಟೆ ತಾಯಿಯ ಕೈಯಿಂದ 1 ವರ್ಷದ ಮಗು 10 ಅಡಿ ಮೇಲಿಂದ ಜಾರಿ ಕೆಳಗೆ ಬಿದಿದ್ದತ್ತು. ಈ ಕಾರಣದಿಂದ ಮಗು ತಲೆಗೆ ತೀವ್ರವಾದ ಗಾಯವಾಗಿ ಅಸ್ವಸ್ಥವಾಗಿತ್ತು. ತಮ್ಮ ಮಗುವನ್ನು ಉಳಿಸಿಕೊಳ್ಳಲು ಪೋಷಕರು…

ಕಳೆದೆರಡು ದಿನಗಳ ಹಿಂದೆಯಷ್ಟೆ ತಾಯಿಯ ಕೈಯಿಂದ 1 ವರ್ಷದ ಮಗು 10 ಅಡಿ ಮೇಲಿಂದ ಜಾರಿ ಕೆಳಗೆ ಬಿದಿದ್ದತ್ತು. ಈ ಕಾರಣದಿಂದ ಮಗು ತಲೆಗೆ ತೀವ್ರವಾದ ಗಾಯವಾಗಿ ಅಸ್ವಸ್ಥವಾಗಿತ್ತು. ತಮ್ಮ ಮಗುವನ್ನು ಉಳಿಸಿಕೊಳ್ಳಲು ಪೋಷಕರು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್ ಗೆ ಹೋಗುವಂತೆ ಅಲ್ಲಿನ ವೈದ್ಯರು ತಿಳಿಸಿದ್ದರು. ಆದರೆ ಬೆಡ್ ಸಿಗದೇ ಮಗು ಸಾವನ್ನಪ್ಪಿದೆ ಎಂಬ ಗಂಭೀರ ಆರೋಪ ನಿಮಾನ್ಸ್ ಆಡಳಿತ ಮಂಡಳಿ ವಿರುದ್ದ ಕೇಳಿಬಂದಿತ್ತು. ಇದೀಗ ನಿಮಾನ್ಸ್ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಕಳೆದ ಬುಧವಾರ ಹಾಸನದಿಂದ ಬೆಂಗಳೂರಿಗೆ ಜಿರೋ ಟ್ರಾಫಿಕ್ ಮೂಲಕ ಅಸ್ವಸ್ತಗೊಂಡಿದ್ದ 1 ವರ್ಷದ ಮಗು ನಿಮಾನ್ಸ್ ಗೆ ಕರೆದುಕೊಂಡು ಬರಲಾಗಿತ್ತು. ಹಾಸನದ ಸರ್ಕಾರಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದರು. ಅದರಂತೆ ಮಗುವನ್ನು ಜಿರೋ ಟ್ರಾಫಿಕ್ ಮೂಲಕ ನಿಮಾನ್ಸ್ ಗೆ ಕರೆದುಕೊಂಡು ಬರಲಾಗಿತ್ತು. ಹಾಸನದ ಸರ್ಕಾರಿ ವೈದ್ಯರು ಆಸ್ಪತ್ರೆಯಲ್ಲಿ ಬೆಡ್ ಕಾಯ್ಡಿರಿಸುವಂತೆ ನಿಮಾನ್ಸ್ ಆಡಳಿತ ಮಂಡಳಿಗೆ ತಿಳಿಸಿದ್ದರು ಎನ್ನಲಾಗಿದೆ. ಇನ್ನೂ 1 ಗಂಟೆ 40 ನಿಮಿಷದಲ್ಲೇ ಆಂಬ್ಯುಲೆನ್ಸ್ ನಿಮಾನ್ಸ್ ತಲುಪಿತ್ತು. ಬೆಡ್ ಸಿಗದ ಕಾರಣ ಮಗು ಸಾವನ್ನಪ್ಪಿದ್ದು, ಪೋಷಕರು ಹಾಗೂ ಸಂಬಂಧಿಕರು ನಿಮಾನ್ಸ್ ಆಡಳಿತ ಮಂಡಳಿಯ ವಿರುದ್ದ ಆಕ್ರೋಷ ಹೊರಹಾಕಿದ್ದರು.

ಇದೀಗ ನಿಮಾನ್ಸ್ ನ ಸ್ಥಾನಿಕ ಅಧಿಕಾರಿ ಡಾ.ಶಶಿಧರ್‍ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಮಗೆ ಹಾಸನ ಸರ್ಕಾರಿ ಆಸ್ಪತ್ರೆಯಿಂದ ಯಾವುದೇ ಮಾಹಿತಿ ಬಂದಿರಲಿಲ್ಲ. ಮಗು ಆಸ್ಪತ್ರೆಗೆ ಬರುವ ಒಂದು ಗಂಟೆ ಮುಂಚೆ ಮಾಹಿತಿ ಬಂದಿತ್ತು. ಆಂಬ್ಯುಲೆನ್ಸ್ ಚಾಲಕರೊಬ್ಬರು ಹಾಸನ್ ಮೆಡಿಕಲ್ ರಿಪೋರ್ಟ್ ತೋರಿಸಿದ್ದು, ಅದನ್ನು ನೋಡಿದಾಗ ನಮ್ಮ ವೈದ್ಯರು ಮಗು ಬದುಕುವ ಸಾಧ್ಯತೆ ಕಡಿಮಾಯಗಿತ್ತು. ಇಲ್ಲಿಗೆ ಕರೆತರುವ ಅಗತ್ಯವಿಲ್ಲ ಎಂದು ಹೇಳಿದ್ದೆವು. ಆಸ್ಪತ್ರೆಗೆ ಬಂದ ಬಳಿಕ ಆಂಬ್ಯುಲೆನ್ಸ್ ನಲ್ಲೇ ಪರೀಕ್ಷೆ ಮಾಡಿದ್ದೇವೆ. ಅಲ್ಲಿ ಮಗು ವೆಂಟಿಲೇಟರ್‍ ನಲ್ಲಿತ್ತು. 10 ನಿಮಿಷದ ಬಳಿಕ ಮಗುವನ್ನು ಒಳಗಡೆ ಚಿಕಿತ್ಸೆಗೆ ಕಳುಹಿಸಿದ್ದೇವೆ. ಸುಮಾರು 2 ಗಂಟೆಗಳ ಕಾಲ ಮಗುವನ್ನು ಬದುಕಿಸಲು ನಮ್ಮ ಕಡೆಯಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡಿದ್ದೆವು. ಆದರೆ ಮಗುವನ್ನು ಬದುಕಿಸಲು ಆಗಿರಲಿಲ್ಲ. ಇನ್ನೂ ಮಗುವಿನ ಮೃತದೇಹ ಹಸ್ತಾಂತರದ ಬಗ್ಗೆ ಸಹ ಪ್ರತಿಕ್ರಿಯಿಸಿದ್ದು, ಈ ವಿಚಾರ ಪೊಲೀಸರಿಗೆ ಸಂಬಂಧಿಸಿದ್ದು, ಅವರು ಉತ್ತರಿಸಬೇಕಿದೆ. ಪೊಲೀಸರು ಅವರ ವರದಿ ಮಾಡಿ ಮೃತ ದೇಹ ಪಡೆಯಬೇಕು. ಪೊಲೀಸರು ಇಲ್ಲಿಯವರೆಗೂ ಆ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.