News

ಶ್ರೀಶೈಲಂ ದೇವಾಲಯದ ಪ್ರಸಾದದಲ್ಲಿ ಚಿಕನ್ ಮೂಳೆ, ಸ್ಪಷ್ಟನೆ ಕೊಟ್ಟ ದೇವಾಲಯದ ಆಡಳಿತ ಮಂಡಳಿ……!

ಕಳೆದೆರಡು ದಿನಗಳ ಹಿಂದೆಯಷ್ಟೆ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದುಕೊಂಡ ಶ್ರೀಶೈಲಂ ದೇವಾಲಯದ ಪ್ರಸಾದದಲ್ಲಿ ಹರೀಶ್ ರೆಡ್ಡಿ ಎಂಬ ಭಕ್ತನಿಗೆ ಚಿಕನ್ ಮೂಳೆ ಸಿಕ್ಕಿದ್ದು, ಈ ಕುರಿತು ಭಕ್ತರು ದೇವಾಲಯದ ಆಡಳಿತ ಮಂಡಳಿ ವಿರುದ್ದ ಭಾರಿ ಆಕ್ರೋಷ ಹೊರಹಾಕಿದ್ದರು. ಇದೀಗ ಈ ಕುರಿತು ದೇಗುಲದ ಅರ್ಚಕರು ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಆಡಳಿತ ಮಂಡಳಿ ನೀಡಿದ ಸ್ಪಷ್ಟನೆ ಏನು ಎಂಬ ವಿಚಾರಕ್ಕೆ ಬಂದರೇ,

ಆಂಧ್ರಪ್ರದೇಶದ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶ್ರೀಶೈಲಂ ಭ್ರಮರಾಂಬಿಕಾ ಮಲ್ಲಿಕಾರ್ಜುನ ಸ್ವಾಮಿಯ ದೇವಾಲಯಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುತ್ತಿರುತ್ತಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಹರೀಶ್ ರೆಡ್ಡಿ ಎಂಬ ಭಕ್ತ ಆತನ ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಪ್ರಸಾದ ಪಡೆದುಕೊಂಡಿದ್ದರು. ಆದರೆ ಆ ಪ್ರಸಾದದಲ್ಲಿ ಚಿಕನ್ ಮೂಳೆ ಪತ್ತೆಯಾಗಿತ್ತು. ಈ ಕುರಿತು ಆತ ಆಕ್ರೋಷ ಹೊರಹಾಕಿ ಈ ಕುರಿತು ದೂರು ಸಹ ನೀಡಿದ್ದರು. ಜೊತೆಗೆ ಈ ಸುದ್ದಿ ಹರಿದಾಡುತ್ತಿದ್ದಂತೆ ಅನೇಕ ಭಕ್ತರು ಆಡಳಿತ ಮಂಡಳಿಯ ವಿರುದ್ದ ಆಕ್ರೋಷ ಹೊರಹಾಕಿದ್ದರು.

ಇದೀಗ ದೇವಾಲಯದ ಆಡಳಿತ ಮಂಡಳಿ ಈ ಕುರಿತು ಸ್ಪಷ್ಟನೆ ನೀಡಿದೆ. ಶ್ರೀಶೈಲ ಭ್ರಮರಾಂಭಿಕಾ ದೇವಸ್ಥಾನದ ಪ್ರಧಾನ ಅರ್ಚಕ ಗಟ್ಟಿ ರಾಧಾಕೃಷ್ಣ ಶರ್ಮ ಅವಧಾನಿ ಹಾಗೂ ಶ್ರೀ ಅಮ್ಮನವರ ಪ್ರಧಾನ ಅರ್ಚಕ ಮಾರ್ಕಂಡೇಯ ಶಾಸ್ತ್ರಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ದೇವಾಯಲದಲ್ಲಿ ಕಟ್ಟುನಿಟ್ಟಿನ ನಿಯಮಗಳ ಜೊತೆಗೆ ಶುಚಿತ್ವದಿಂದ ಪ್ರಸಾದವನ್ನು ತಯಾರಿಸಲಾಗುತ್ತದೆ. ಕಾಲಕಾಲಕ್ಕೆ ಎಲ್ಲಾ ಪ್ರಸಾದ ಪಾತ್ರಗಳನ್ನು ಸ್ವಚ್ಚಗೊಳಿಸಲಾಗುತ್ತದೆ. ದೇವಾಲಯ ಸಿಬ್ಬಂದಿಯನ್ನು ಹೊರತುಪಡಿಸಿ, ಅಡುಗೆ ಕೋಣೆಗೆ ಪ್ರವೇಶಿಸಲು ಬೇರೆ ಯಾರಿಗೂ ಅನುಮತಿ ನೀಡುವುದಿಲ್ಲ ಎಂದು ಅರ್ಚಕರು ಸ್ಪಷ್ಟನೆ ನೀಡಿದ್ದಾರೆ. ದೇವಾಲಯದ ಆವರಣದಲ್ಲಿರುವ ಅಡುಗೆ ಮನೆಯಲ್ಲಿದ್ದ ಪ್ರಸಾದದಲ್ಲಿ ಅಸ್ಥಿ ಪತ್ತೆಯಾಗಿಲ್ಲ. ಎಲ್ಲಾ ಭಕ್ತರು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಈ ಘಟನೆಯಿಂದ ತುಂಬಾನೆ ಬೇಸರವಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ ಎನ್ನಲಾಗಿದೆ.

Most Popular

To Top