ಗೋವಾದಲ್ಲಿ ಅದ್ದೂರಿಯಾಗಿ ನಡೆಯಲಿದೆ ರಕುಲ್ ಪ್ರೀತ್ – ಜಾಕಿ ಭಗ್ನಾನಿ ಮದುವೆ, ವೈರಲ್ ಆದ ವೆಡ್ಡಿಂಗ್ ಕಾರ್ಡ್……..!

Follow Us :

ಸೌತ್ ಸ್ಟಾರ್‍ ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ನಟ ಜಾಕಿ ಭಗ್ನಾನಿ ಡೇಟಿಂಗ್ ನಲ್ಲಿದ್ದಾರೆ. ಸುಮಾರು ದಿನಗಳ ಕಾಲ ಅವರಿಬ್ಬರು ತಮ್ಮ ಪ್ರೀತಿಯನ್ನು ಸಿಕ್ರೇಟ್ ಆಗಿಯೇ ಇಟ್ಟುಕೊಂಡಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಈ ಜೋಡಿ ತಮ್ಮ ಪ್ರೀತಿಯ ಬಗ್ಗೆ ಪ್ರಕಟಿಸಿದ್ದರು. ಇದೀಗ ಈ ಜೋಡಿ ಮದುವೆಯಾಗಲಿದ್ದು, ಗೋವಾದಲ್ಲಿ ಅದ್ದೂರಿಯಾಗಿ ಮದುವೆ ಸಂಭ್ರಮ ನಡೆಯಲಿದೆ. ಸದ್ಯ ರಕುಲ್-ಜಾಕಿ ಮದುವೆಯ ವೆಡ್ಡಿಂಗ್ ಕಾರ್ಡ್ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಿನಿರಸಿಕರಿಗೆ ಅಷ್ಟೊಂದು ಪರಿಚಯ ಬೇಡದ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ಒಬ್ಬರಾಗಿದ್ದಾರೆ. ಕಳೆದ ವರ್ಷ ಐದಾರು ಸಿನೆಮಾಗಳಲ್ಲಿ ರಕುಲ್ ಪ್ರೀತ್ ನಟಿಸಿದ್ದರು. ಆದರೆ ಈ ಪೈಕಿ ಯಾವುದೇ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣಲಿಲ್ಲ ಎಂದು ಹೇಳಲಾಗುತ್ತಿದೆ. ಇದೀಗ ಆಕೆ ಮತ್ತೆ ಸೌತ್ ಸಿನೆಮಾಗಳತ್ತ ಮುಖ ಮಾಡಿದ್ದಾರೆ. ವೆಂಕಟಾದ್ರಿ ಎಕ್ಸ್ ಪ್ರೆಸ್, ಲೌಖ್ಯಂ, ಕರೆಂಟ್ ತೀಗ, ಬ್ರೂಸ್ ಲೀ, ಸರೈನೋಡು, ಧ್ರುವಾ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡರು. ಸೌತ್ ನಲ್ಲಿ ಭಾರಿ ಕ್ರೇಜ್ ಪಡೆದುಕೊಂಡ ಈಕೆ ಇದೀಗ ಬಾಲಿವುಡ್ ನಲ್ಲು ಪುಲ್ ಆಕ್ಟೀವ್ ಆಗಿದ್ದಾರೆ. ಇನ್ನೂ ರಕುಲ್ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳ ಕಾರಣದಿಂದಲೂ ಆಕೆ ಸುದ್ದಿಯಾಗುತ್ತಿರುತ್ತಾರೆ. ಸದ್ಯ ತಮ್ಮ ಮದುವೆಯ ಮೂಲಕ ರಕುಲ್ ಸುದ್ದಿಯಾಗುತ್ತಿದ್ದಾರೆ.

ಬಾಲಿವುಡ್ ನಟ ಕಂ ನಿರ್ಮಾಪಕ ಜಾಕಿ ಭಗ್ನಾನಿ ಜೊತೆಗೆ ಪ್ರೀತಿಯಲ್ಲಿರುವುದಾಗಿ ಸೋಷಿಯಲ್ ಮಿಡಿಯಾ ಮೂಲಕ ರಕುಲ್ ಪ್ರೀತ್ ಸಿಂಗ್ ಅಧಿಕೃತವಾಗಿ ಪ್ರಕಟಿಸಿದ್ದರು. ಇನ್ನು ಕೆಲವೇ ದಿನಗಳಲ್ಲಿ ಈ ಜೋಡಿ ಅಧಿಕೃತವಾಗಿ ಗಂಡ-ಹೆಂಡತಿಯಾಗಲಿದ್ದಾರೆ. ಫೆ.21 ರಂದು ಈ ಜೋಡಿಯ ಮದುವೆ ಗೋವಾದಲ್ಲಿ ನಡೆಯಲಿದೆ. ಸದ್ಯ ರಕುಲ್ – ಜಾಕಿ ಮದುವೆಯ ಆಮಂತ್ರಣ ಪತ್ರಿಕೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಗೋವಾದಲ್ಲಿ ಈ ಜೋಡಿಯ ಮದುವೆಯಾಗಲಿದ್ದು, ವೆಡ್ಡಿಂಗ್ ಇನ್ವಿಟೇಷನ್ ಕಾರ್ಡ್ ನಲ್ಲೂ ಸಹ ಗೋವಾ ಸೌಂದರ್ಯ ಕಾಣಿಸುವಂತೆ ಮುದ್ರಣ ಮಾಡಿಸಿದ್ದಾರೆ. ಮದುವೆ ಕಾರ್ಡ್ ನಲ್ಲಿ ತೆಂಗಿನ ಮರಗಳು, ಬೀಚ್ ದೃಶ್ಯಗಳು ಕಾಣಿಸುತ್ತಿವೆ. ರಕುಲ್ ಭಗ್ನಾನಿ ಹೆಸರಿನ ಜೊತೆಗೆ ಅಬ್ ದೋನೊ ಭಗ್ನಾನಿ ಎಂದು ಬರೆಯಲಾಗಿದೆ. ಈ ಮದುವೆ ಮೂರು ದಿನಗಳ ಕಾಲ ಭಾರಿ ಖರ್ಚಿನೊಂದಿಗೆ ನಡೆಯಲಿದೆಯಂತೆ. ಇದಕ್ಕಾಗಿ ಮೂರು ಮಂದಿ ಡಿಸೈನರ್‍ ಗಳನ್ನು ಸಹ ಆಯ್ಕೆ ಮಾಡಿದ್ದಾರಂತೆ. ಸದ್ಯ ವೆಡ್ಡಿಂಗ್ ಕಾರ್ಡ್ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.