ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ಕೊಟ್ಟ ಕಾಂಟ್ರವರ್ಸಿ ಕ್ವೀನ್ ಕಂಗನಾ, ವೈರಲ್ ಆದ ಕಾಮೆಂಟ್ಸ್…..!

ಬಾಲಿವುಡ್ ಸಿನಿರಂಗದಲ್ಲಿ ಕಾಂಟ್ರವರ್ಸಿ ಕ್ವೀನ್ ಎಂದೇ ಖ್ಯಾತಿ ಪಡೆದುಕೊಂಡ ನಟಿ ಕಂಗನಾ ಯಾವುದೇ ವಿಚಾರವಿದ್ದರೂ ಸಹ ನೇರವಾಗಿ ಮಾತನಾಡುವಂತಹ ಸ್ವಭಾವ ಹೊಂದಿದ್ದಾರೆ. ಈ ಕಾರಣದಿಂದ ಆಕೆ ಅನೇಕ ವಿವಾದಗಳಿಗೆ ಗುರಿಯಾಗುತ್ತಿರುತ್ತಾರೆ. ಬಾಲಿವುಡ್ ಸ್ಟಾರ್‍ ನಟರೂ…

ಬಾಲಿವುಡ್ ಸಿನಿರಂಗದಲ್ಲಿ ಕಾಂಟ್ರವರ್ಸಿ ಕ್ವೀನ್ ಎಂದೇ ಖ್ಯಾತಿ ಪಡೆದುಕೊಂಡ ನಟಿ ಕಂಗನಾ ಯಾವುದೇ ವಿಚಾರವಿದ್ದರೂ ಸಹ ನೇರವಾಗಿ ಮಾತನಾಡುವಂತಹ ಸ್ವಭಾವ ಹೊಂದಿದ್ದಾರೆ. ಈ ಕಾರಣದಿಂದ ಆಕೆ ಅನೇಕ ವಿವಾದಗಳಿಗೆ ಗುರಿಯಾಗುತ್ತಿರುತ್ತಾರೆ. ಬಾಲಿವುಡ್ ಸ್ಟಾರ್‍ ನಟರೂ ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇದೀಗ ಆಕೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಬಗ್ಗೆ ಕೆಲವೊಂದು ಸಂಚಲನಾತ್ಮಕ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಕಂಗನಾ ರಾಣವತ್ ಕಾಂಟ್ರವರ್ಸಿಗಳಿಗೆ ಕೇರಾಫ್ ಅಡ್ರಸ್ ಎಂದೇ ಹೇಳಬಹುದು. ಸ್ಟಾರ್‍ ನಟನಾದರೂ, ದೊಡ್ಡ ಪೊಲಿಟೀಷಿಯನ್ ಆದರೂ ಸಹ ಸೋಷಿಯಲ್ ಮಿಡಿಯಾದ ಮೂಲಕ ನೇರವಾಗಿ ವಿಮರ್ಶೆ ಮಾಡುತ್ತಿರುತ್ತಾರೆ. ಈ ಕಾರಣದಿಂದಲೇ ಆಕೆಯನ್ನು ಅವಾರ್ಡ್, ರಿವಾರ್ಡ್, ಸಿನೆಮಾ ಕಾರ್ಯಕ್ರಮಗಳಿಗೆ ಆಕೆಗೆ ಆಹ್ವಾನ ತೀರಾ ಕಡಿಮೆ ಎಂದೇ ಹೇಳಬಹುದು. ಬಾಲಿವುಡ್ ನಲ್ಲಿ ಪರೋಕ್ಷವಾಗಿ ಆಕೆಗೆ ಬಹಿಷ್ಕಾರವಿದ್ದಂತೆ ಇದ್ದರೂ ಸಹ ತನ್ನ ಸಿನೆಮಾಗಳನ್ನು ಮಾಡಿಕೊಳ್ಳುತ್ತಾ ಸಾಗುತ್ತಿದ್ದಾರೆ. ಅದರಲ್ಲೂ ತಮಿಳಿನಲ್ಲಿ ಹೆಚ್ಚು ಸಿನೆಮಾಗಳನ್ನು ಮಾಡುತ್ತಿದ್ದಾರೆ. ಸದ್ಯ ಕಂಗನಾ ಎಮರ್ಜೆನ್ಸಿ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಶೀಘ್ರದಲ್ಲೆ ತೆರೆಕಾಣಲಿದೆ. ಈ ಸಿನೆಮಾದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ಎಮರ್ಜೆನ್ಸಿ ಕಾಲವನ್ನು ಬೇಸ್ ಮಾಡಿಕೊಂಡು ಈ ಸಿನೆಮಾ ನಿರ್ಮಾಣ ಮಾಡಲಾಗಿದೆ.

ಇನ್ನೂ ಕಂಗನಾ ಇಂದಿರಾಗಾಂಧಿ ಪಾತ್ರದ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಇದೀಗ ಸಂಚಲನ ಸೃಷ್ಟಿಸಿದೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕಂಗನಾಗೆ ಕೆಲವೊಂದು ಪ್ರಶ್ನೆಗಳನ್ನು ಪತ್ರಕರ್ತರು ಕೇಳಿದ್ದಾರೆ. ಮಿಡಿಯಾದವರು ಕಂಗನಾರವರನ್ನು ನಿಮಗೆ ಪ್ರಧಾನಿ ಆಗಬೇಕೆಂಬ ಆಲೋಚನೆ ಬರಲಿಲ್ಲವೇ ಎಂದು ಕೇಳಿದ್ದಾರೆ. ಅದಕ್ಕೆ ರಿಯಾಕ್ಟ್ ಆದ ಕಂಗನಾ ಈ ಸಿನೆಮಾದಲ್ಲಿ ನಾನು ಪ್ರಧಾನಿ ಪಾತ್ರದಲ್ಲೇ ಅಲ್ಲವೇ ನಟಿಸಿರೋದು. ಎಮರ್ಜೆನ್ಸಿ ಸಿನೆಮಾದಲ್ಲಿ ಅಂದಿನ ಇಂದಿರಾ ಗಾಂಧಿ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಆ ಸಿನೆಮಾ ನೋಡಿದ ಬಳಿಕ ಯಾರೂ ಪ್ರಧಾನಿ ಆಗಬೇಕು ಎಂದು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಕಂಗನಾ ನೀಡಿದ ಈ ಹೇಳಿಕೆಗೆ ಎಲ್ಲರೂ ಶಾಕ್ ಆಗಿದ್ದಾರೆ. ಜೊತೆಗೆ ರಾಜಕೀಯದಲ್ಲಿ ಬರಬೇಕಾದರೇ ಧೈರ್ಯ ಇರಬೇಕು. ನನ್ನ ಹಾಗೆ ಸೂಕ್ಷ್ಮವಾಗಿದ್ದರೇ ರಾಜಕೀಯಕ್ಕೆ ಕೆಲಸಕ್ಕೆ ಬರೊಲ್ಲ. ಆ ಕಾರಣದಿಂದಲೇ ನಾನು ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ ಎಂದು ಹೇಳಿದ್ದಾರೆ.