Film News

ಪ್ರೆಗ್ನೆಂಟ್ ರೂಮರ್ ಬಗ್ಗೆ ರಿಯಾಕ್ಟ್ ಆದ ಸಿಂಗರ್ ಸುನಿತಾ, ವೈರಲ್ ಆದ ಕಾಮೆಂಟ್ಸ್….!

ತೆಲುಗು ಸಿನಿರಂಗದ ಖ್ಯಾತ ಗಾಯಕಿ ಸುನಿತ ಸ್ಟಾರ್‍ ನಟಿಯರಂತೆ ದೊಡ್ಡ ಅಭಿಮಾನಿ ಬಳಗ ಸಹ ಇದೆ. ಹಾಡುಗಳನ್ನು ಹಾಡುವ ಮೂಲಕ ಹಾಗೂ ಕೆಲವು ಸಿನೆಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಸಹ ಕೆಲಸ ಮಾಡಿದ್ದಾರೆ. ಆಕೆ ಕಳೆದ 2021ರಲ್ಲಿ ರಾಮ್ ವೀರಪನೇನಿ ಎಂಬಾತನೊಂದಿಗೆ ಎರಡನೇ ಮದುವೆಯಾದರು. ಸುಮಾರು ದಿನಗಳಿಂದ ಸುನಿತಾ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದ್ದು, ಈ  ಬಗ್ಗೆ ಸುನಿತಾ ರಿಯಾಕ್ಟ್ ಆಗಿದ್ದಾರೆ. ಆಕೆ ನೀಡಿದ ಹೇಳಿಕೆಗಳು ವೈರಲ್ ಆಗಿದೆ.

ಸಿಂಗರ್‍ ಸುನಿತ ರವರಿಗೆ ಸ್ಟಾರ್‍ ನಟಿಯರಂತೆ ದೊಡ್ಡ ಅಭಿಮಾನಿ ಬಳಗ ಸಹ ಇದೆ. ಹಾಡುಗಳನ್ನು ಹಾಡುವ ಮೂಲಕ ಹಾಗೂ ಕೆಲವು ಸಿನೆಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಸಹ ಕೆಲಸ ಮಾಡಿದ್ದಾರೆ. ಇನ್ನೂ ಆಕೆಗೆ ಚಿಕ್ಕವಯಸ್ಸಿನಲ್ಲೇ ಮದುವೆಯಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಇಬ್ಬರು ಮಕ್ಕಳ ತಾಯಿ ಸಹ ಆಗಿದ್ದಾರೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ಆಕೆ ಪತಿಯೊಂದಿಗೆ ವಿಭೇದಗಳು ಹುಟ್ಟಿಕೊಂಡು ವಿಚ್ಚೇದನ ಪಡೆದುಕೊಂಡರು. ಬಳಿಕ ಆಕೆ ಎರಡು ಮಕ್ಕಳನ್ನು ತುಂಬಾ ಕಷ್ಟದಿಂದಲೇ ಬೆಳೆಸಿದ್ದಾರೆ. ಇನ್ನೂ ಮಕ್ಕಳ ಒಪ್ಪಿಗೆಯ ಮೇರೆಗೆ ಆಕೆ ಕಳೆದ 2021 ರಲ್ಲಿ ಮ್ಯಾಂಗೋ ಮಿಡಿಯಾ ಮುಖ್ಯಸ್ಥ ರಾಮ್ ವೀರಪನೇನಿ ಎಂಬಾತನೊಂದಿಗೆ ಮದುವೆಯಾದರು. ಈ ಮದುವೆಯಲ್ಲಿ ಸುನಿತಾ ಮಕ್ಕಳು ಸಹ ಹಾಜರಿದ್ದರು. ಅಂದು ಈ ಸುದ್ದಿ ತುಂಬಾನೆ ವಿಮರ್ಶೆಗಳು ಸಹ ಎದುರಾದವು. ಬಳಿಕ ಆಕೆ ನನ್ನ ಮಕ್ಕಳು ಹಾಗೂ ನನ್ನ ಭವಿಷ್ಯದ ದೃಷ್ಟಿಯಿಂದ ನನ್ನ ಕುಟುಂಬಸ್ಥರ ಅನುಮತಿಯೊಂದಿಗೆ ಮದುವೆ ನಿರ್ಣಯ ತೆಗೆದುಕೊಂಡೆ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಅವರ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಅದಕ್ಕೆ ಸ್ವತಃ ಸುನಿತಾ ರವರೇ ರಿಯಾಕ್ಟ್ ಆಗಿದ್ದಾರೆ.

ಇನ್ನೂ ಸಿಂಗರ್‍ ಸುನಿತಾ ಗರ್ಭಿಣಿ ರೂಮರ್‍ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಮ್ಯೂಜಿಕ್ ಕಾನ್ಫರೆನ್ಸ್ ನಡೆಯಲಿದ್ದು, ಈ ಸಂಬಂಧ ಪ್ರಮೋಷನ್ ಕಾರ್ಯಕ್ರಮದಲ್ಲಿ ಸುನಿತಾ ಭಾಗವಹಿಸಿದ್ದರು. ಈ ವೇಳೆ ಮಿಡಿಯಾದೊಂದಿಗೆ ಮಾತನಾಡಿದ ಸುನಿತಾ ಗರ್ಭಿಣಿ ರೂಮರ್‍ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಮಿಡಿಯಾದವರು ಸುನಿತಾ ರವರನ್ನು ಪ್ರಶ್ನೆ ಮಾಡುತ್ತಾ ನೀವು ಗರ್ಭಿಣಿಯಾಗಿದ್ದೀರಿ ಎಂದು ಸುದ್ದಿಗಳು ಹರಿದಾಡುತ್ತಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಾರೆ. ಈ ವೇಳೆ ಆಕೆ ಮಾತನಾಡಿ, ಆ ವಿಚಾರ ನನಗೂ ಸಹ ತಿಳಿದಿಲ್ಲ. ಈ ರೂಮರ್‍ ಗಳನ್ನು ಹುಟ್ಟಿಸುತ್ತಿರುವವರ ಆಲೋಚನಾ ವಿಧಾನಕ್ಕೆ ಅದನ್ನು ಬಿಡುತ್ತೇನೆ. ಅವರು ನನ್ನು ಹಾಗೂ ನನ್ನ ಜೀವನವನ್ನು ಏನು ಮಾಡಲಾರೆರು ಎಂದು ಉತ್ತರಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ಗರ್ಭಿಣಿ ರೂಮರ್‍ ಗೆ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಕಳೆದ 1997 ರಲ್ಲಿ ಕಿರಣ್ ಗೋಪರಾಜು ಎಂಬಾತನನ್ನು ಮದುವೆಯಾದರು. ಅವರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇದೆ. ಸುಮಾರು ದಿನಗಳ ಸಂಸಾರದ ಬಳಿಕ 2017 ರಲ್ಲಿ ಅಧಿಕೃತವಾಗಿ ಬೇರೆಯಾದರು. ಬಳಿಕ 2021 ರಲ್ಲಿ ಸುನಿತಾ ಎರಡನೇ ಮದುವೆಯಾದರು. ಇನ್ನೂ ಸುನಿತಾ ರವರು ಗರ್ಭಿಣಿಯಾಗಿದ್ದಾರೆ ಎಂಬ ರೂಮರ್‍ ಗೆ ಆಕೆಯ ಹೇಳಿಕೆಯಿಂದ ಪುಲ್ ಸ್ಟಾಪ್ ಬಿದ್ದಿದೆ ಎನ್ನಬಹುದು.

Most Popular

To Top