Film News

ಮದುವೆ ವಾರ್ಷಿಕೋತ್ಸವದಂದು ತಮ್ಮ ಅವಳಿ ಮಕ್ಕಳ ಮುಖ ತೋರಿಸಿದ ನಯನ್, ಎಮೋಷನಲ್ ಆದ ವಿಘ್ನೇಶ್……!

ಸೌತ್ ಸಿನಿರಂಗದ ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಮದುವೆಯಾಗಿ ವರ್ಷ ಕಳೆದಿದೆ. ಕಳೆದ 2022 ಜೂನ್ 9 ರಂದು ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಿದೆ. ಇಂದು ಈ ಜೋಡಿಯ ಮದುವೆ ವಾರ್ಷಿಕೋತ್ಸವ ಆಗಿದ್ದು, ಅಭಿಮಾನಿಗಳಿಗೆ ತಮ್ಮ ಮುದ್ದಿನ ಅವಳಿ ಮಕ್ಕಳ ಮುಖವನ್ನು ತೋರಿಸಿ ಸರ್ಪ್ರೈಸ್ ನೀಡಿದ್ದಾರೆ. ಕೆಲವು ತಿಂಗಳುಗಳ ಹಿಂದೆಯಷ್ಟೆ ಈ ಜೋಡಿ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡಿದ್ದರು. ಇದೀಗ ಮೊದಲ ಬಾರಿಗೆ ತಮ್ಮ ಮಕ್ಕಳ ಮುಖವನ್ನು ತೋರಿಸಿದ್ದಾರೆ.

ಸುಮಾರು ವರ್ಷಗಳ ಕಾಲ ಪ್ರೀತಿಸಿ ಕಳೆದ ವರ್ಷ ಮದುವೆಯಾದರು. ಮದುವೆಯಾದಾಗಿನಿಂದ ಅವರು ಒಂದಲ್ಲ ಒಂದು ವಿವಾದಕ್ಕೆ ಸಿಲುಕಿಕೊಂಡರು. ಇನ್ನೂ ಈ ಜೋಡಿ ಎಲ್ಲೇ ಕಾಣಿಸಿಕೊಂಡರೂ ಸಹ ಅಲ್ಲಿ ಅವರಿಬ್ಬರ ಅಭಿಮಾನಿಗಳು ಸಾಗರದಂತೆ ಸೇರುತ್ತಾರೆ. ಇನ್ನೂ ನಯನತಾರಾ ಸೋಷಿಯಲ್ ಮಿಡಿಯಾ ಹಾಗೂ ಮಿಡಿಯಾಗೆ ದೂರವೇ ಇರುತ್ತಾರೆ. ಆದರೆ ವಿಘ್ನೇಶ್ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ವಿಘ್ನೇಶ್ ತಮ್ಮ ಕುಟುಂಬದ ಬಗ್ಗೆ ಅಭಿಮಾನಿಗಳೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇಂದು (ಜೂ.9) ಈ ಜೋಡಿಯ ಮೊದಲ ಮದುವೆ ವಾರ್ಷಿಕೋತ್ಸವವಾಗಿದ್ದು, ನಯನತಾರಾ ತಮ್ಮ ಅವಳಿ ಮಕ್ಕಳನ್ನು ಎತ್ತಿಕೊಂಡಿರುವ ಪೊಟೋಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ನಯನತಾರಾ ಹಾಗೂ ವಿಘ್ನೇಶ್ ಸೆರಗೋಸಿ ಪದ್ದತಿಯ ಮೂಲಕ ಮಕ್ಕಳನ್ನು ಪಡೆದುಕೊಂಡರು. ಈ ಕಾರಣಕ್ಕಾಗಿಯೂ ದೊಡ್ಡ ಮಟ್ಟದ ವಿವಾದದಲ್ಲಿ ಸಹ ಸಿಲುಕಿಕೊಂಡಿದ್ದರು. ಇದೀಗ ಈ ಜೋಡಿ ತಮ್ಮ ಮಕ್ಕಳೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತಿದ್ದಾರೆ. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಅವಳಿ ಮಕ್ಕಳನ್ನು ಪಡೆದುಕೊಂಡರು. ಇದೀಗ ವಿಘ್ನೇಶ್ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ನಯನತಾರ ಮಕ್ಕಳನ್ನು ಎತ್ತಿಕೊಂಡಿರುವ ಪೊಟೋ ಶೇರ್‍ ಮಾಡಿ ಎಮೋಷನಲ್ ಕ್ಯಾಪ್ಷನ್ಸ್ ಹಾಕಿದ್ದಾರೆ. ನನ್ನ ಜೀವನಕ್ಕೆ ಮೂಲ ನೀನೇ. ಈ ವರ್ಷ ಅದೆಷ್ಟೋ ಅದ್ಬುತವಾದ ಕ್ಷಣಗಳೊಂದಿಗೆ ಕಳೆದಿದ್ದೇವೆ. ಅನೇಕ ತೊಂದರೆಗಳು, ಎದುರೇಟುಗಳು, ಕಠಿಣ ಪರೀಕ್ಷೆಗಳೂ ಸಹ ಎದುರಾದವು. ಎಷ್ಟೇ ಕಷ್ಟಗಳು ಬಂದರೂ ಮನೆಗೆ ಬಂದು ಸುಂದರವಾದ ಕುಟುಂಬವನ್ನು ನೋಡಿ ಎಲ್ಲವನ್ನೂ ಮರೆತು ಬಿಡುತ್ತಿದ್ದೆ. ಕನಸುಗಳು ಸಾಕಾರಗೊಳಿಸುವಂತಹ ನಂಬಿಕೆ ಸಹ ಹೆಚ್ಚಾಗುತ್ತದೆ ಎಂದು ಎಮೋಷನಲ್ ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ನಯನತಾರಾ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಯನ್ ಅಂಡ್ ವಿಘ್ನೇಶ್ ತಮ್ಮ ಮಕ್ಕಳಿಗೆ ಉಯರ್‍, ಉಲಗಮ್ ಎಂದು ಹೆಸರುಗಳನ್ನು ಸಹ ಇಟ್ಟಿದ್ದಾರೆ. ಇಬ್ಬರನ್ನೂ ಎತ್ತಿಕೊಂಡು ನಯನತಾರ ಕ್ಯೂಟ್ ಪೋಸ್ ಕೊಟ್ಟಿದ್ದಾರೆ. ತನ್ನ ಅವಳಿ ಮಕ್ಕಳ ಮುಖ ಸ್ಪಷ್ಟವಾಗಿ ಕಾಣಿಸಿದೆ. ಇನ್ನೂ ಈ ಪೊಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ನೆಟ್ಟಿಗರೂ ಸೇರಿದಂತೆ ಮದುವೆ ವಾರ್ಷಿಕೋತ್ಸವದ ಶುಭಾಷಯಗಳನ್ನು ಕೋರುತ್ತಿದ್ದಾರೆ.

Most Popular

To Top