Film News

ಸ್ಟಾರ್ ಕಿಡ್ ಶಿವಾತ್ಮಿಕಾ ಗೆ ಆ ಸಿನೆಮಾದಲ್ಲಿ ನಟಿಸಬೇಡ ಎಂದಿದ್ದರಂತೆ, ವೈರಲ್ ಆದ ಸಂಚಲನಾತ್ಮಕ ಹೇಳಿಕೆಗಳು….!

ತೆಲುಗು ಸ್ಟಾರ್‍ ನಟ ಡಾ.ರಾಜಶೇಖರ್‍ ಪುತ್ರಿ ಶಿವಾತ್ಮಿಕಾ ರಾಜಶೇಖರ್‍ ಸಿನೆಮಾಗಳಲ್ಲಿ ಸಕ್ಸಸ್ ಕಂಡುಕೊಳ್ಳಲು ಶ್ರಮಿಸುತ್ತಿದ್ದಾರೆ. 18 ವರ್ಷಕ್ಕೆ ನಟಿಯಾಗಿ ಎಂಟ್ರಿಕೊಟ್ಟ ಶಿವಾತ್ಮಿಕ ದೊರಸಾನಿ ಎಂಬ ಸಿನೆಮಾದ ಮೂಲಕ ತನ್ನ ಟ್ಯಾಲೆಂಟ್ ಶೋ ಮಾಡಿದರು. ಸ್ಟಾರ್‍ ಕಿಡ್ ಆಗಿ ಕೇವಲ ಕಮರ್ಷಿಯಲ್ ಸಿನೆಮಾಗಳಲ್ಲಿ ಮಾತ್ರ ನಟಿಸದೇ, ಕಥೆಗೆ ಬಲವಿರುವಂತಹ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಆಕೆ ಕೆಲವೊಂದಯ ಸಂಚಲನಾತ್ಮಕ ಹೇಳಿಕೆಗನ್ನು ನೀಡಿದ್ದು, ಆಕೆಯ ಹೇಳಿಕೆಗಳು ವೈರಲ್ ಆಗುತ್ತಿವೆ.

ನಟಿ ಶಿವಾತ್ಮಿಕ ತೆಲುಗು ಹಾಗೂ ತಮಿಳಿನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಇತ್ತೀಚಿಗಷ್ಟೆ ಆಕೆ ಕೃಷ್ಣವಂಶಿ ನಿರ್ದೇಶನದ ರಂಗಮಾರ್ತಾಂಡ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಶಿವಾತ್ಮಿಕ ಪ್ರಕಾಶ್ ರಾಜ್ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿ ಆಕೆ ತುಂಬಾ ಅದ್ಬುತವಾಗಿ ನಟಿಸಿದ್ದಾರೆ. ಕೆಲವೊಂದು ದೃಶ್ಯಗಳಲ್ಲಿ ಆಕೆ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ ಎನ್ನಬಹುದಾಗಿದೆ. ಆಕೆಯ ನಟನೆಗೆ ಅಭಿಮಾನಿಗಳು ಕಣ್ಣಿರಾಕಿದ್ದಾರೆ. ಕಮರ್ಷಿಯಲ್ ಆಗಿ ರಂಗಮಾರ್ತಾಂಡ ಸಿನೆಮಾ ಸಕ್ಸಸ್ ಕಾಣದೇ ಇದ್ದರೂ ಸಹ ಸಕ್ಸಸ್ ಕಂಡಿದೆ. ಇನ್ನೂ ಇತ್ತೀಚಿಗೆ ಆಕೆ ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಸಂದರ್ಶನದಲ್ಲಿ ಆಕೆ ರಂಗಮಾರ್ತಾಂಡ ಸಿನೆಮಾದ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಶಿವಾತ್ಮಿಕ ರಂಗಮಾರ್ತಾಂಡ ಸಿನೆಮಾದ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಂಗಮಾರ್ತಾಂಡ ಸಿನೆಮಾದಲ್ಲಿ ನನ್ನ ಪಾತ್ರ ಮೈನ್ ಲೀಡ್ ಅಲ್ಲ. ಜೊತೆಗೆ ಅದು ಕಮರ್ಷಿಯಲ್ ಸಿನೆಮಾ ಸಹ ಅಲ್ಲ. ಈ ಕಾರಣದಿಂದ ಈ ಸಿನೆಮಾದಲ್ಲಿ ನಟಿಸಬೇಡ, ಆ ಸಿನೆಮಾ ಮಾಡಿದರೇ ನಿನಗೆ ಅವಕಾಶಗಳು ಬರುವುದಿಲ್ಲ. ಆ ಸಿನೆಮಾ ಮಾಡಬೇಡ, ನಿನ್ನ ಕೆರಿಯರ್‍ ಇಲ್ಲಿಗೆ ಮುಗಿಯುತ್ತದೆ. ಹಿರೋಯಿನ್ ಆಗಿ ಕ್ಯಾರೆಕ್ಟರ್‍ ಆರ್ಟಿಸ್ಟ್ ರೋಲ್ ಮಾಡಿದರೆ ನಿನ್ನ ಸಿನಿ ಕೆರಿಯರ್‍ ಮೇಲೆ ಪ್ರಭಾವ ಬೀರುತ್ತದೆ. ಜೊತೆಗೆ ಈಗಿನ ಕಾಲದಲ್ಲಿ ಅಂತಹ ಸಿನೆಮಾ ಯಾರೂ ನೋಡುವುದಿಲ್ಲ ಎಂದು ಹೇಳಿದ್ದರಂತೆ. ಆದರೆ ನಾನು ಅವರ ಮಾತುಗಳನ್ನು ಕೇಳಿಸಿಕೊಳ್ಳಲಿಲ್ಲ. ಈ ಸಿನೆಮಾದಿಂದ ನಾನು ತುಂಬಾ ಸಂತೃಪ್ತಿಯನ್ನು ಹೊಂದಿದ್ದೇನೆ ಎಂದಿದ್ದಾರೆ.

ಇನ್ನೂ ನಾನು ಅನೇಕ ಸಿನೆಮಾಗಳಲ್ಲಿ ನಟಿಸಿದ್ದೇನೆ. ನಾನು ಮಾಡಿದ ಎಲ್ಲಾ ಸಿನೆಮಾಗಳ ಪಾತ್ರದಲ್ಲಿ ಮೇಕಪ್ ಹಾಕಿಕೊಂಡಿಲ್ಲ. ಸಾಮಾನ್ಯ ಪಾತ್ರ ಆದ ಕಾರಣದಿಂದ ನಿರ್ದೇಶಕರೂ ಸಹ ಮೇಕಪ್ ಬೇಡ ಎಂದು ಹೇಳುತ್ತಿದ್ದರು. ನನಗೆ ಮೇಕಪ್ ಹಾಕಿಕೊಳ್ಳುವುದು ಎಂದರೇ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಜೊತೆಗೆ ತನ್ನ ತಂದೆ ರಾಜಶೇಖರ್‍ ರವರ ಜೊತೆ ಸಹ ಸಿನೆಮಾ ಮಾಡಲು ಆಸೆಯಿದೆ ಎಂದು ಹೇಳಿದ್ದಾರೆ. ಇನ್ನೂ ಶೀವಾತ್ಮಿಕ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಹಾಟ್ ಪೋಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ.

Most Popular

To Top