ಓವರ್ ಹಾಟ್ ನೆಸ್ ಮೂಲಕ ಪೋಸ್ ಕೊಟ್ಟ ಸಮಂತಾ, ವೈರಲ್ ಆದ ವಿಡಿಯೋ….!

Follow Us :

ಸ್ಟಾರ್‍ ನಟಿ ಸಮಂತಾ ಬಗ್ಗೆ ಹೆಚ್ಚಿನ ಪರಿಚಯದ ಅವಶ್ಯಕತೆಯಿಲ್ಲ. ಸುಮಾರು ಹದಿಮೂರು ವರ್ಷಗಳಿಂದ ಆಕೆ ಸಿನಿರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸ್ಟಾರ್‍ ನಟರ ಜೊತೆಗೆ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಆರೋಗ್ಯ ದೃಷ್ಟಿಯಿಂದ ಆಕೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದು, ಮಯೋಸೈಟೀಸ್ ವ್ಯಾಧಿಯಿಂದ ಸಂಪೂರ್ಣವಾಗಿ ಗುಣಮುಖರಾಗಲು ವಿದೇಶಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ಹಾರಿದ್ದಾರೆ. ಇದೀಗ ಆಕೆಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ.

ಕಳೆದ ಎರಡು ವರ್ಷಗಳಿಂದ ಸಮಂತಾ ತುಂಬಾನೆ ಸುದ್ದಿಯಲ್ಲಿದ್ದಾರೆ. ಆಕೆ ಸಿನೆಮಾಗಳಿಂದ ಮಾತ್ರವಲ್ಲದೇ ಹೆಚ್ಚಾಗಿ ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾದರು. ಅಕ್ಕಿನೇನಿ ನಾಗಚೈತನ್ಯ ಜೊತೆಗೆ ವಿಚ್ಚೇದನ, ಬಳಿಕ ಸಿನೆಮಾಗಳು, ಬಳಿಕ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾದರು. ಈ ಎಲ್ಲಾ ಕಾರಣಗಳಿಂದ ಆಕೆ ಭಾರಿ ಸುದ್ದಿಯಾದರು. ಆಕೆಗೆ ಸಂಬಂಧಿಸಿದ ವಿಚಾರಗಳೂ ಸಹ ಕಡಿಮೆ ಸಮಯದಲ್ಲೇ ವೈರಲ್ ಆಗಿದ್ದವು. ಇದೀಗ ಸಮಂತಾ ಮತ್ತೆ ಆರೋಗ್ಯದ ದೃಷ್ಟಿಯಿಂದ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಯೋಗಾ, ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಾ ಬ್ಯುಸಿಯಾಗಿದ್ದಾರೆ. ಸಮಂತಾ ಮತ್ತೆ ಅನಾರೋಗ್ಯಕ್ಕೆ ಗುರಿಯಾದರೇ ಎಂಬ ಅನುಮಾನಗಳನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಸಮಂತಾ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡರೂ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಆಕೆ ಎಲ್ಲಿಗೆ ಹೋದರೂ ಅಲ್ಲಿನ ವಿಶೇಷಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಮಂತಾ ಲೇಟೆಸ್ಟ್ ಲುಕ್ಸ್ ಮೈಂಡ್ ಬ್ಲೋಯಿಂಗ್ ಆಗಿದೆ ಎಂದು ಹೇಳಲಾಗಿದೆ. ಆಕೆ ತನ್ನ ಇನ್ಸ್ಟಾ ಗ್ರಾಂ ನಲ್ಲಿ ಹಂಚಿಕೊಂಡ ಈ ಲೇಟೆಸ್ಟ್ ಹಾಟ್ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಸಮಂತಾ ಬಬ್ಲಿಯಾಗಿ ಹಾಟ್ ಆಗಿ ಹುಚ್ಚೆಬ್ಬಿಸುವಂತೆ ಕಾಣಿಸಿಕೊಂಡಿದ್ದಾರೆ. ಕ್ಯೂಟ್ ಆಗಿ ಸ್ಮೈಲ್ ಕೊಡುತ್ತಾ,ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಇನ್ನೂ ಈ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಲೈಕ್ ಗಳು ಬಂದಿದ್ದು, ವಿಡಿಯೋ ಸಖತ್ ವೈರಲ್  ಆಗುತ್ತಿದೆ.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಆಕೆ ಇಷಾ ಯೋಗಾ ಸೆಂಟರ್‍ ನಲ್ಲಿ ಆಧ್ಯಾತ್ಮಿಕತೆಯ ಮೊರೆ ಹೋಗಿದ್ದರು. ಆ ಪೊಟೋಗಳು ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಇನ್ನೂ ಆಕೆ ವಿಜಯ್ ದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾದ ಜೊತೆಗೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲೂ ಸಹ ನಟಿಸಿದ್ದು, ಈ ಎರಡೂ ಪ್ರಾಜೆಕ್ಟ್ ಗಳು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.