ಮೆಗಾ ಕುಟುಂಬದ ಬಗ್ಗೆ ಮತ್ತೊಂದು ರೂಮರ್, ಸುದ್ದಿ ಕೇಳಿ ಕನ್ಫೂಜ್ ಆದ ಫ್ಯಾನ್ಸ್…..!

Follow Us :

ಕೆಲವು ದಿನಗಳಿಂದ ಮೆಗಾ ಕುಟುಂಬದ ಬಗ್ಗೆ ಒಂದಲ್ಲ ಒಂದು ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇದೆ. ಚಿರು ಪುತ್ರಿ ಶ್ರೀಜಾ ಪತಿಯಿಂದ ದೂರವಾಗಿದ್ದು, ನಿಹಾರಿಕಾ ಕೊಣಿದೆಲಾ ಹಾಗೂ ಚೈತನ್ಯ ವಿಚ್ಚೇದನ, ಮೆಗಾ ಪ್ರಿನ್ಸ್ ವರುಣ್ ಹಾಗೂ ಲಾವಣ್ಯ ತ್ರಿಪಾಠಿ ಎಂಗೇಜ್ ಮೆಂಟ್ ಹೀಗೆ ಒಂದಲ್ಲ ಒಂದು ಸುದ್ದಿ ಹರಿದಾಡುತ್ತಲೇ ಇದೆ. ಇದೀಗ ಮತ್ತೊಂದು ರೂಮರ್‍ ಕೇಳಿಬರುತ್ತಿದ್ದು, ಆ ಸುದ್ದಿ ನಿಜನಾ ಅಥವಾ ಸುಳ್ಳಾ ಎಂಬುದರ ಬಗ್ಗೆ ಮೆಗಾ ಫ್ಯಾನ್ಸ್ ಕನ್ಫೂಜ್ ಆಗಿದ್ದಾರೆ ಎನ್ನಲಾಗಿದೆ.

ಸೋಷಿಯಲ್ ಮಿಡಿಯಾ ಹೆಚ್ಚು ಪ್ರಚಲಿತಕ್ಕೆ ಬಂದ ಬಳಿಕ ಅದರಲ್ಲಿ ನಿಜಕ್ಕಿಂತ ರೂಮರ್‍ ಗಳೇ ಹೆಚ್ಚಾಗಿ ಹರಿದಾಡುತ್ತವೆ. ಅದರ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳಲು ತುಂಬಾನೆ ಚಿಂತೆ ಮಾಡಬೇಕಾಗುತ್ತದೆ. ಅದರಲ್ಲೂ ಸೆಲೆಬ್ರೆಟಿಗಳ ಬಗ್ಗೆ ಬರುವಂತಹ ಸುದ್ದಿಗಳನ್ನು ನಂಬಬೇಕಾ  ಬೇಡವಾ ಎಂಬ ಚಿಂತೆ ಅವರ ಅಭಿಮಾನಿಗಳಲ್ಲಿ ತುಂಬಾನೆ ಕಾಡುತ್ತದೆ. ಸೋಷಿಯಲ್ ಮಿಡಿಯಾದಲ್ಲಿ ಸೆಲೆಬ್ರೆಟಿಗಳ ಬಗ್ಗೆ ಗುಡ್ ನ್ಯೂಸ್, ಬ್ಯಾಡ್ ನ್ಯೂಸ್ ಅವರಿಗಿಂತ ಮುಂಚೆಯೇ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಆ ಸುದ್ದಿಗಳು ಕೆಲವೊಮ್ಮೆ ನಿಜ ಆಗಬಹುದು, ಕೆಲವೊಮ್ಮೆ ಸುಳ್ಳು ಆಗಬಹುದು. ಆದರೆ ಸುದ್ದಿ ಮಾತ್ರ ಕಡಿಮೆ ಸಮಯದಲ್ಲೇ ಬಿರುಗಾಳಿಯಂತೆ ವೈರಲ್ ಆಗುತ್ತದೆ. ಈ ಹಾದಿಯಲ್ಲೇ ಮೆಗಾ ಕುಟುಂಬದ ಸೊಸೆಯಾಗಿ ಹೋಗಲಿರುವ ಲಾವಣ್ಯ ತ್ರಿಪಾಠಿ ಬಗ್ಗೆ ಹೊಸ ರೂಮರ್‍ ಒಂದು ವೈರಲ್ ಆಗುತ್ತಿದೆ. ಈ ಸುದ್ದಿ ಕೇಳಿದ ಮೆಗಾ ಫ್ಯಾನ್ಸ್ ತುಂಬಾ ಗೊಂದಲಮಯವಾಗಿದ್ದಾರೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೆ ವರುಣ್ ಹಾಗೂ ಲಾವಣ್ಯ ಎಂಗೇಜ್ ಮೆಂಟ್ ನಡೆದಿತ್ತು. ಮೊದಲಿಗೆ ಇವರ ಮದುವೆ ನವೆಂಬರ್‍ ಮಾಹೆಯಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಆಗಸ್ಟ್ 24 ರಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅವರ ಮದುವೆ ಇಟಲಿಯಲ್ಲಿ ನಡೆಸಲು ಪ್ಲಾನ್ ಮಾಡಲಾಗುತ್ತಿದೆ ಎಂಬ ಸುದ್ದಿ ಸಹ ಕೇಳಿಬರುತ್ತಿದೆ. ಇನ್ನೂ ಇದೀಗ ಕೇಳಿಬರುತ್ತಿರುವ ರೂಮರ್‍ ನಂತೆ ಅವರ ಮದುವೆ ಅಷ್ಟೊಂದು ಬೇಗ ಮಾಡಲು ಲಾವಣ್ಯ ತ್ರಿಪಾಠಿ ಗರ್ಭಿಣಿಯಾಗಿದ್ದರಿಂದ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ವಿಚಾರ ನಿಜನಾ ಅಥವಾ ಸುಳ್ಳಾ ಎಂಬ ಗೊಂದಲ ಅಭಿಮಾನಿಗಳಲ್ಲಿ ಮೂಡಿದೆ. ಈ ಬಗ್ಗೆ ಮೆಗಾ ಕುಟುಂಬದಿಂದ ಒಂದು ಕ್ಲಾರಿಟಿ ಸಿಕ್ಕರೇ ಒಳ್ಳೆಯದು ಎಂದು ಮೆಗಾ ಫ್ಯಾನ್ಸ್ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಈ ರೂಮರ್‍ ಬಗ್ಗೆ ಅನೇಕರು ಅದೆಲ್ಲಾ ಸುಳ್ಳು ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ಸುಖಾಸುಮ್ಮನೆ ಅಂತಹ ರೂಮರ್‍ ಗಳು ಹುಟ್ಟಿಕೊಳ್ಳುವುದಿಲ್ಲ ಎಂಬ ಅಭಿಪ್ರಾಯಗಳನ್ನು ಸಹ ಹೊರಹಾಕುತ್ತಿದ್ದಾರೆ. ಇನ್ನೂ ಈಗಾಗಲೇ ನಿಹಾರಿಕಾ ವಿಚ್ಚೇದನದ ಸುದ್ದಿಯಿಂದ ಮೆಗಾ ಕುಟುಂಬಕ್ಕೆ ಕೊಂಚ ಡ್ಯಾಮೇಜ್ ಆಗಿದೆ. ಅಂತಹುದರಲ್ಲಿ ಇದೀಗ ಮತ್ತೆ ಅಂತಹ ರೂಮರ್‍ ಹರಿದಾಡುತ್ತಿದೆ. ಈ ಬಗ್ಗೆ ಲಾವಣ್ಯ ಆಗಲಿ, ಅಥವಾ ಮೆಗಾ ಕುಟುಂಬವಾಗಲಿ ಸ್ಪಷ್ಟನೆ ಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.