Film News

ಮದುವೆಯಾಗಬೇಕು ಅನಿಸುತ್ತಿದೆ ಎಂದ ಬಾಲಿವುಡ್ ಬ್ಯೂಟಿ ಪ್ರಣಿತಾ ಚೋಪ್ರಾ, ವೈರಲ್ ಆದ ಕಾಮೆಂಟ್ಸ್….!

ಹಿಂದಿ ಸಿನಿರಂಗದಲ್ಲಿ ಸ್ಟಾರ್‍ ನಟಿಯಾದರೂ ಅನೇಕ ಸೋಲುಗಳನ್ನು ಕಂಡ ನಟಿಯರು ಅನೇಕರಿದ್ದಾರೆ. ಅವರ ಪೈಕಿ ಪರಿಣಿತಿ ಚೋಪ್ರಾ ಸಹ ಒಬ್ಬರಾಗಿದ್ದಾರೆ. ಈಕೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಮೊದಲಲ್ಲಿ ಯಾವುದೇ ಸಿನೆಮಾದಲ್ಲಿ ನಟಿಸಿದರೂ ಸಹ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಾ ಸೂಪರ್‍ ಡೂಪರ್‍ ಹಿಟ್ ಆಗಿತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಆಕೆ ಸಾಲು ಸಾಲು ಸೋಲನ್ನು ಕಾಣುತ್ತಿದ್ದಾರೆ.   ಆದರೂ ಸಹ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಆಕೆ ಮದುವೆ ಬಗ್ಗೆ ಮಾಡಿರುವ ಕಾಮೆಂಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಕಜಿನ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಅಂದುಕೊಂಡಷ್ಟು ಸಕ್ಸಸ್ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎನ್ನಬಹುದಾಗಿದೆ ಆದರೂ ಸಹ ಸಿನೆಮಾಗಳ ಆಫರ್‍ ಗಳು ಮಾತ್ರ ಆಕೆಗೆ ಕಡಿಮೆಯಾಗಿಲ್ಲ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದ್ದಾರೆ. ಇನ್ನೂ ಆಕೆ ಇತ್ತೀಚಿಗೆ ಖಾಸಗಿ ಮಾದ್ಯಮವೊಂದಕ್ಕೆ ಸಂದರ್ಶನ ಕೊಟ್ಟಿದ್ದಾರೆ. ಈ ಸಂದರ್ಶನದಲ್ಲಿ ಆಕೆ ಕೆಲವೊಂದು ಆಸಕ್ತಿಕರವಾದ ಕಾಮೆಂಟ್ ಗಳನ್ನು ಮಾಡಿದ್ದು, ಆ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಸಂದರ್ಶನದಲ್ಲಿ ಪ್ರಣಿತಾ ಚೋಪ್ರಾ ಮದುವೆ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ ನಲ್ಲಿ ಈಗಾಗಲೇ  ಅನೇಕ ಜೋಡಿಗಳು ಮದುವೆಯಾಗುತ್ತಿದ್ದಾರೆ. ಈ ಹಾದಿಯಲ್ಲೇ ಸಂದರ್ಶನದಲ್ಲಿ ತನ್ನ ರಿಲೇಷನ್ ಶಿಪ್ ಬಗ್ಗೆ ಮಾತನಾಡಿದ್ದಾರೆ. ಸದ್ಯ ನಾನು ಯಾರೋಂದಿಗೂ ರಿಲೇಷನ್ ಶಿಪ್ ನಲ್ಲಿ ಇಲ್ಲ. ಆದರೆ ನನಗೂ ಸಹ ಮದುವೆಯಾಗಬೇಕೆಂಬ ಬಯಕೆ ಇದೆ. ಆದರೆ ವರ ಯಾರೂ ಇಲ್ಲ. ಬಾಲಿವುಡ್ ನಲ್ಲಿ ನಡೆಯುತ್ತಿರುವ ಮದುವೆಗಳನ್ನು ನೋಡಿದರೇ ನನಗೂ ಸಹ ಮಿಂಗಲ್ ಆಗಬೇಕೆಂಬ ಆಸಕ್ತಿ ಸಹ ಹೆಚ್ಚಾಗುತ್ತಿದೆ. ಆದರೆ ನಾನು ಸದ್ಯ ಸಿಂಗಲ್ ಆಗಿದ್ದೇನೆ. ಇತ್ತೀಚಿಗೆ ಮದುವೆಯಾದ ಆಲಿಯಾ, ಕಿಯಾರಾ, ಆತಿಯಾ ಹಾಗೂ ಅಡ್ವಾನಿ ಎಲ್ಲರೂ ನನ್ನ ಸ್ನೇಹಿತರಾಗಿದ್ದಾರೆ. ಆದರೆ ನಾನು ಪ್ರೀತಿಸಿ ಮದುವೆಯಾಗಬೇಕು ಎಂದುಕೊಂಡಿದ್ದೆ. ಇದೀಗ ನನ್ನ ಅಭಿಪ್ರಾಯ ಬದಲಾಗಿದೆ ಎಂದು ಹೇಳಿದ್ದಾರೆ.

ಇನ್ನೂ ನಾನು ಮದುವೆಯಾಗಲು ಸಿದ್ದವಾಗಿದ್ದೇನೆ. ಯಾರಾದರೂ ವರ ಇದ್ದರೇ ತಿಳಿಸಿ, ನನ್ನನ್ನು ಯಾರಾದರೂ ಮದುವೆಯಾಗುತ್ತೀರಾ, ಹುಡುಗ ಇದ್ದರೇ ಹೇಳಿ ಎಂದು ಒಪೆನ್ ಆಗಿಯೇ ಕಾಮೆಂಟ್ ಮಾಡಿದ್ದಾರೆ. ಇನ್ನೂ ಆಕೆ ನೀಡಿದ ಹೇಳಿಕೆಗಳು ಇದೀಗ ಸಖತ್ ವೈರಲ್ ಆಗುತ್ತಿದೆ. ಸಿನೆಮಾಗಳ ವಿಚಾರಕ್ಕೆ ಬಂದರೇ ಆಕೆ ಚಮ್ಕಿಲಾ, ಕ್ಯಾಪ್ಸೂಲ್ ಗಿಲ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಆಕೆ ಸಖತ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ.

Most Popular

To Top