ಸೀನಿಯರ್ ನಟಿ ಮೀನಾ ರವರಿಗೆ ಆ ನಟನ ಮೇಲೆ ಕ್ರಷ್ ಇತ್ತಂತೆ, ಆತನ ಮದುವೆ ದಿನ ಆಕೆ ತುಂಭಾ ನೋವು ಪಟ್ಟಿದ್ದರಂತೆ….!

Follow Us :

ಸೌತ್ ಸಿನಿರಂಗದಲ್ಲಿ ದಶಕಗಳ ಹಿಂದೆ ಸ್ಟಾರ್‍ ನಟಿಯಾಗಿ ಫೇಂ ಪಡೆದುಕೊಂಡ ನಟಿ ಮೀನಾ  ಸ್ಟಾರ್‍ ನಟರ ಅನೇಕ ಸಿನೆಮಾಗಳಲ್ಲಿ ನಟಿಸುವ ಮೂಲಕ ದೊಡ್ಡ ಅಭಿಮಾನಿ ಬಳಗ ಗಳಿಸಿಕೊಂಡಿದ್ದರು. ಸ್ಟಾರ್‍ ನಟಿಯಾಗಿ ಸೆಕೆಂಡ್ ಇನ್ನೀಂಗ್ಸ್ ನಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ನವಯುಗಂ ಎಂಬ ಸಿನೆಮಾದ ಮೂಲಕ ಹಿರೋಯಿನ್ ಆದರು. ಅಲ್ಲಿಂದ ಮೀನಾ ಕೆರಿಯರ್‍ ಶುರುವಾಗಿ ಸುಮಾರು ನಾಲ್ಕು ದಶಕಗಳಿಂದ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ.

ಸೌತ್ ನಲ್ಲಿ ಅತೀ ಹೆಚ್ಚು ತೆಲುಗು ತಮಿಳು ಸಿನೆಮಾಗಳಲ್ಲಿ ನಟಿಸಿದ ಮೀನಾ ಆಗಾಗ ಕನ್ನಡ ಹಾಗೂ ಮಲಯಾಳಂ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡರು. ಸದ್ಯ ಸೆಕೆಂಡ್ ಇನ್ನಿಂಗ್ಸ್ ಸಹ ಶುರು ಮಾಡಿರುವ ಈಕೆ ಮೋಹನ್ ಲಾಲ್, ವೆಂಕಟೇಶ್ ರವರಂತಹ ನಟರ ಜೊತೆಗೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಇತ್ತೀಚಿಗೆ ತಮಿಳಿನ ಖಾಸಗಿ ಮಿಡಿಯಾದೊಂದಿಗೆ ಮಾತನಾಡಿದ ಮೀನಾ ಅನೇಕ ಆಸಕ್ತಿಕರವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಂದರ್ಶನದ ವೇಳೆ ಆಕೆ ತನ್ನ ಕ್ರಷ್ ಯಾರು ಎಂಬ ಬಗ್ಗೆ ಸಹ ಹೇಳಿಕೊಂಡಿದ್ದಾರೆ ಜೊತೆಗೆ ಆತನ ಮದುವೆ ನಡೆದಾಗ ತುಂಭಾ ನೋವನ್ನು ಸಹ ಪಟ್ಟರಂತೆ.

ನಟಿ ಮೀನಾ ಸಂದರ್ಶನದಲ್ಲಿ ಮಾತನಾಡುತ್ತಾ ತನ್ನ ಕ್ರಷ್ ಬಗ್ಗೆ ಹೇಳಿದ್ದಾರೆ. ಮದುವೆಗೂ ಮುಂಚೆ ಆಕೆಗೆ ಬಾಲಿವುಡ್ ಸ್ಟಾರ್‍ ನಟ ಹೃತಿಕ್ ರೋಷನ್ ಎಂದರೇ ತುಂಭಾ ಇಷ್ಟವಂತೆ. ಆತ ಆಕೆಯ ಕ್ರಷ್ ಅಂತೆ. ಇನ್ನೂ ತನ್ನ ತಾಯಿಗೂ ಸಹ ಹೃತಿಕ್ ರೋಷನ್ ರಂತಹ ಹುಡುಗನಿಗೆ ಕೊಟ್ಟು ಮದುವೆ ಮಾಡಿ ಎಂತಲೂ ಹೇಳಿದ್ದರಂತೆ. ಇನ್ನೂ ಹೃತಿಕ್ ರೋಷನ್ ಮದುವೆಯ ಸಮಯದಲ್ಲಿ ಮೀನಾ ತುಂಬಾನೆ ಹರ್ಟ್ ಆಗಿದ್ದರಂತೆ. ತನ್ನ ಹೃದಯ ಚೂರು ಚೂರಾಗಿತ್ತು ಎಂದೂ ಸಹ ಸಂದರ್ಶನದಲ್ಲಿ ಮೀನಾ ಹೇಳಿದ್ದಾರೆ. ಇನ್ನೂ ಹೃತಿಕ್ ರೋಷನ್ ಕಳೆದ 2000 ರಲ್ಲಿ ಸುನೈನಾ ಖಾನ್ ಎಂಬ ಫ್ಯಾಷನ್ ಡಿಸೈನರ್‍ ಜೊತೆಗೆ ಮದುವೆಯಾದರು. 2014 ರಲ್ಲೇ ಹೃತಿಕ್ ರೋಷನ್ ಆಕೆಯಿಂದ ವಿಚ್ಚೇಧನ ಸಹ ಪಡೆದುಕೊಂಡು. ಇದೀಗ ಆತ ಮತ್ತೋರ್ವ ಯುವತಿಯೊಂದಿಗೆ ಡೇಟಿಂಗ್ ನಲ್ಲಿದ್ದಾರೆ.

ಸದ್ಯ ಆಕೆ ಜನಮ್ಮ ಡೇವಿಡ್ ಎಂಬ ಮಲಯಾಳಂ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಮೀನಾ ಸಹ ಬೆಂಗಳೂರು ಮೂಲದ ಸಾಫ್ಟ್‌ ವೇರ್‍ ಉದ್ಯೋಗಿ ವಿದ್ಯಾಸಾಗರ್‍ ಎಂಬಾತನನ್ನು ಮದುವೆಯಾಗಿದ್ದರು. ಕಳೆದ ವರ್ಷದ ಜೂನ್ 28 ರಂದು ಮೀನಾ ಪತಿ ವಿದ್ಯಾಸಾಗರ್‍ ಅನಾರೋಗ್ಯದ ಕಾರಣದಿಂದ ಮೃತಪಟ್ಟರು.  ಬಳಿಕ ಆಕೆ ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಗಳೂ ಸಹ ಕೇಳಿಬಂದವು. ಆದರೆ ಆಕೆ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ.