ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದ ಧನುಷ್-ಐಶ್ವರ್ಯ, ಹಾಟ್ ಟಾಪಿಕ್ ಆದ ಉಮೈರ್ ಸಂಧು ಟ್ವೀಟ್…!

ಕಾಲಿವುಡ್ ನ ಖ್ಯಾತ ನಟ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಪುತ್ರಿ ಐಶ್ವರ್ಯ ಹಾಗೂ ಸ್ಟಾರ್‍ ನಟ ಧನುಷ್ ರವರು ಮದುವೆಯಾಗಿ ಸುಮಾರು 18 ವರ್ಷಗಳ ಕಾಲ ಅನ್ಯೋನ್ಯತೆಯಿಂದ ಜೀವನ ಸಾಗಿಸಿದ್ದರು. ಅಷ್ಟು ವರ್ಷಗಳ ಕಾಲ ಅನ್ಯೋನ್ಯತೆಯಿಂದ ಜೀವನ ಸಾಗಿಸಿದ್ದ ಈ ಜೋಡಿ ಸಡನ್ ಆಗಿ ಅಭಿಮಾನಿಗಳಿಗೆ ವಿಚ್ಚೇದನ ಪಡೆದುಕೊಳ್ಳುವ ಬಗ್ಗೆ ಶಾಕಿಂಗ್ ಸುದ್ದಿಯನ್ನು ಹೊರಹಾಕಿದರು. ಜನವರಿ 2022 ರಲ್ಲಿ ಈ ಜೋಡಿ ವಿಚ್ಚೇದನ ಪಡೆದುಕೊಳ್ಳುವುದಾಗಿ ಘೋಷಣೆ ಮಾಡಿದರು. ಬಳಿಕ ಕಳೆದ ವರ್ಷ ಅಕ್ಟೋಬರ್‍ ಮಾಹೆಯಲ್ಲಿ ಇಬ್ಬರೂ ಒಂದಾಗಲಿದ್ದಾರೆ ಎಂಬ ಹೇಳಲಾಗಿತ್ತು. ಇದೀಗ ಮತ್ತೊಮ್ಮೆ ಅವರು ಕೋರ್ಟ್‌ಗೆ ವಿಚ್ಚೇದನಕ್ಕಾಗಿ ಹೋಗಿದ್ದಾರೆ ಎಂಬ ಸುದ್ದಿಯೊಂದು ಹಾಟ್ ಟಾಪಿಕ್ ಆಗಿದೆ.

ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂದು ಧನುಷ್ ಹಾಗೂ ಐಶ್ವರ್ಯ ದಂಪತಿಯ ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರಬಂತು. ಇದಾದ ಬಳಿಕ ಕಳೆದ ವರ್ಷದ ಅಕ್ಟೋಬರ್‍ ಮಾಹೆಯಲ್ಲಿ ಅವರಿಬ್ಬರೂ ತಮ್ಮ ವಿಚ್ಚೇದನದ ನಿರ್ಧಾರದಿಂದ ಹೊರಬಂದಿದ್ದಾರೆ. ರಜನಿಕಾಂತ್ ಅಳಿಯ ಹಾಗೂ ಮಗಳ ನಡುವೆ ರಾಜಿ ಸಂದಾನ ಮಾಡಿದ್ದು, ಅವರು ವಿಚ್ಚೇದನದ ನಿರ್ಧಾರದಿಂದ ಹೊರಬಂದಿದ್ದಾರೆ. ಶೀಘ್ರದಲ್ಲೇ ಒಂದಾಗಿ ಬಾಳಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬಂದವು. ಇದೀಗ ಮತ್ತೊಮ್ಮೆ ಅವರು ವಿಚ್ಚೇದನ ಬಯಸಿ ಕೋರ್ಟ್ ಮೆಟ್ಟಿಲೇರಿದ್ದಾರಂತೆ. ಧನುಷ್ ಬೇರೆ ಹುಡುಗಿಗಾಗಿ ಐಶ್ವರ್ಯ ರಜನಿಕಾಂತ್ ರಿಂದ ಬೇರೆಯಾಗಲಿದ್ದಾರೆ ಎಂಬ ಗುಸುಗುಸು ಸಹ ಕೇಳಿಬರುತ್ತಿದ್ದೆ. ಆದರೆ ಈ ವಿಚಾರ ವಿವಾದಾತ್ಮಕ ಫಿಲಂ ಕ್ರಿಟಿಕ್ ಉಮೈರ್‍ ಸಂಧು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಫಿಲಂ ಕ್ರಿಟಿಕ್ ಉಮೈರ್‍ ಸಂಧು ಇತ್ತಿಚಿಗೆ ದೊಡ್ಡ ದೊಡ್ಡ ಸ್ಟಾರ್‍ ಗಳ ಬಗ್ಗೆ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಸಿನೆಮಾ ಸೆಲೆಬ್ರೆಟಿಗಳ ಅಫೈರ್‍ ಗಳ ಬಗ್ಗೆ ಟಾರ್ಗೆಟ್ ಮಾಡಿ ಹಾಟ್ ಹಾಟ್ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಇದೀಗ ಧನುಷ್ ಐಶ್ವರ್ಯ ರಜನಿಕಾಂತ್ ಗೆ ಸಂಬಂಧಿಸಿದ ಟ್ವೀಟ್ ಮಾಡಿದ್ದು, ಹಾಟ್ ಟಾಪಿಕ್ ಆಗಿದೆ. ಇದೀಗ ಉಮೈರ್‍ ಸಂಧು ಟ್ವೀಟ್ ನಲ್ಲಿ ಎಷ್ಟು ಸತ್ಯವಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಆದರೆ ಆತನ ಟ್ವೀಟ್ ಮಾತ್ರ ಸೋಷಿಯಲ್ ಮಿಡಿಯಾ ಸೇರಿದಂತೆ ಸಿನಿರಂಗದಲ್ಲೂ ಹಾಟ್ ಟಾಪಿಕ್ ಆಗಿದೆ.

ಇನ್ನೂ ಉಮೈರ್‍ ಸಂಧು ಇಂತಹ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡುತ್ತಾ ಖ್ಯಾತಿ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಕಾಮೆಂಟ್ ಗಳೂ ಸಹ ಕೇಳಿಬರುತ್ತಿದೆ. ಏಕೆಂದರೇ ಆತ ಹೇಳಿದ್ದ ಯಾವುದೇ ಟ್ವೀಟ್ ಗಳು ನಿಜವಾಗಿಲ್ಲ. ಇನ್ನೂ ಉಮೈರ್‍ ಸಂಧು ಹಂಚಿಕೊಂಡ ಟ್ವೀಟ್ ನಿಂದಾಗಿ ಧನುಷ್ ಹಾಗೂ ಐಶ್ವರ್ಯ ಅಭಿಮಾನಿಗಳು ಆತನ ವಿರುದ್ದ ಕಾಮೆಂಟ್ ಗಳ ಮೂಲಕ ಆಕ್ರೋಷ ಹೊರಹಾಕುತ್ತಿದ್ದಾರೆ.