Film News

ಕಾಶಾಯ ತೊಟ್ಟು, ದೈವ ಸೇವೆ ಮಾಡುತ್ತಾ ಕಾಣಿಸಿಕೊಂಡ ಮಿಲ್ಕಿ ಬ್ಯೂಟಿ ತಮನ್ನಾ, ವಿಶೇಷ ಪೂಜೆಗಳು ಮಾಡಿದ ತಮನ್ನಾ…!

ದಕ್ಷಿಣದ ಸಿನಿರಂಗದಲ್ಲಿ ಮಿಲ್ಕೀ ಬ್ಯೂಟಿ ಎಂದೇ ಖ್ಯಾತಿ ಪಡೆದ ತಮನ್ನಾಬಹುತೇಕ ಎಲ್ಲಾ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ನಟಿಸುವ ಮೂಲಕ ಅಪಾರ ಪ್ರಮಾಣದ ಅಭಿಮಾನಿಗಳನ್ನು ಗಿಟ್ಟಿಸಿಕೊಳ್ಳುವುದರ ಜೊತೆಗೆ ಬಹುಬೇಡಿಕೆಯನ್ನು ಸೃಷ್ಟಿಸಿಕೊಂಡ ನಟಿಯಾಗಿದ್ದಾರೆ. ಗ್ಲಾಮರಸ್ ಲುಕ್ಸ್ ಹಾಗೂ ಅಭಿನಯದೊಂದಿಗೆ ಎಲ್ಲರನ್ನೂ ಆಕರ್ಷಣೆ ಮಾಡುತ್ತಾ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ದಶಕಗಳ ಕಾಲ ಗ್ಲಾಮರಸ್ ಡ್ಯಾನ್ಸ್ ಮೂಲಕ ಯುವಕರಲ್ಲಿ ತಮನ್ನಾ ಸಂಪಾದಿಸಿಕೊಂಡಷ್ಟು ಕ್ರೇಜ್ ಯಾವುದೇ ಹಿರೋಯಿನ್ ಪಡೆದುಕೊಂಡಿಲ್ಲ ಎಂದೇ ಹೇಳಬಹುದಾಗಿದೆ.

ದಶಕಗಳ ಕಾಲದಿಂದ ಗ್ಲಾಮರ್‍, ಡ್ಯಾನ್ಸ್ ಹಾಗೂ ಅಭಿನಯದ ಮೂಲಕ ಅನೇಕ ನಟಿಯರಿಗೆ ಪೈಪೋಟಿ ನೀಡುವಂತಹ ಸ್ಟಾರ್‍ ನಟಿಯಾದರು ಮಿಲ್ಕಿ ಬ್ಯೂಟಿ ತಮನ್ನಾ. ಆಕೆಯ ಗ್ಲಾಮರ್‍ ಹಾಗೂ ಡ್ಯಾನ್ಸ್ ಇಂದಿಗೂ ಯಂಗ್ ನಟಿಯರನ್ನೂ ಅಸೂಯೆ ಪಡಿಸುವಂತಿರುತ್ತದೆ ಎನ್ನಲಾಗುತ್ತಿದೆ. ಇಂದಿಗೂ ಸಹ ಆಕೆ ಎಂದರೇ ಯುವಕರಲ್ಲಿ ತುಂಬಾ ಕ್ರೇಜ್ ಇದೆ. ತೆಲುಗು ಸ್ಟಾರ್‍ ನಟರಾದ ಪ್ರಭಾಸ್, ಮಹೇಶ್, ಪವನ್ ಕಲ್ಯಾಣ್, ಎನ್.ಟಿ.ಆರ್‍, ಅಲ್ಲು ಅರ್ಜುನ್, ರಾಮ್ ಚರಣ್ ಸೇರಿದಂತೆ ಅನೇಕ ಸ್ಟಾರ್‍ ಗಳ ಜೊತೆ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಜೊತೆಗೆ ಅನೇಕ ಯುವಕರ ಕನಸಿನ ರಾಣಿಯಾಗಿದ್ದಾರೆ. ಅಷ್ಟೇಅಲ್ಲದೇ ಟಾಲಿವುಡ್ ನಲ್ಲಿ ಆಕೆಯನ್ನು ಪ್ಯಾಷನ್ ಐಕಾನ್ ಎಂತಲೂ ಕರೆಯುತ್ತಾರೆ. ಇದೀಗ ತಮನ್ನಾ ಕಾಶಾಯ ಧರಿಸಿ ಕಾಣಿಸಿಕೊಂಡಿದ್ದಾರೆ. ಆಕೆಯ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನೂ ತಮನ್ನಾ ಇತ್ತಿಚಿಗೆ ಪ್ರಸಿದ್ದ ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿ ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ. ಈ ಹಾದಿಯಲ್ಲೆ ತಮನ್ನಾ ಹಿಮಾಲಯದಲ್ಲಿರುವ ವೈಷ್ಣವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಇಷಾ ಯೋಗ ಕೇಂದ್ರದಲ್ಲಿರುವ ಶಕ್ತಿ ಮಾತೆ ಲಿಂಗಭೈರವಿ ದೇವಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದ್ದಾರೆ. ಕಾಶಾಯ ಬಟ್ಟೆಗಳನ್ನು ಧರಿಸಿ ತುಂಬಾ ಭಕ್ತಿಯೊಂದಿಗೆ ಈ ಪೂಜೆಗಳನ್ನು ಮಾಡಿದ್ದಾರೆ. ಇನ್ನೂ ಈ ಪೂಜೆಗಳನ್ನು ಮಾಡುತ್ತಿದ್ದರೇ ಆಧ್ಯಾತ್ಮಿಕ ಅನುಭೂತಿಯಲ್ಲೇ ಇದ್ದಂತಿದೆ ಎಂದು ತಮನ್ನಾ ಹೇಳಿದ್ದಾರೆ. ಇನ್ನೂ ತಮನ್ನಾ ಇತ್ತೀಚಿಗೆ ಸದಾ ಪೂಜೆಗಳನ್ನು ಮಾಡುತ್ತಿದ್ದರೇ, ತಮನ್ನಾ ಮದುವೆಗೆ ಸಿದ್ದರಾಗಿದ್ದಾರೆ. ಈ ಹಾದಿಯಲ್ಲೇ ಆಕೆ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

ಇನ್ನೂ ಇತ್ತೀಚಿಗೆ ತಮನ್ನಾ ಹಿಂದಿ ನಟ ವಿಜಯ್ ವರ್ಮ ಜೊತೆಗೆ ಪ್ರೇಮಾಯಣ ನಡೆಸುತ್ತಿದ್ದಾರೆ ಎಂದು ಸುದ್ದಿಗಳು ಕೇಳಿಬರುತ್ತಿವೆ. ಹೊಸ ವರ್ಷದ ಆಚರಣೆಯ ವೇಳೆ ವಿಜಯ್ ಗೆ ತಮನ್ನಾ ಮುತ್ತಿಟ್ಟ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಆದರೆ ಈ ಬಗ್ಗೆ ತಮನ್ನಾ ಆಗಲಿ, ಅಥವಾ ವಿಜಯ್ ಆಗಲಿ ಪ್ರತಿಕ್ರಿಯೆ ನೀಡಿಲ್ಲ.

Most Popular

To Top