Film News

ಸೌತ್ ಬ್ಯೂಟಿ ರಾಶಿ ಖನ್ನಾಗೆ ಮದುವೆ ಫಿಕ್ಸ್ ಆಯ್ತಾ, ಅದಕ್ಕಾಗಿ ಸಿನೆಮಾಗಳನ್ನು ಒಪ್ಪುತ್ತಿಲ್ಲವೇ, ರಾಶಿ ಖನ್ನಾ ಸ್ಪಷ್ಟನೆ?

ನಟಿ ರಾಶಿ ಖನ್ನಾ ಸೌತ್ ಸಿನಿರಂಗದ ಬ್ಯೂಟಿಪುಲ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ನಟಿಯಾಗಿ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡಿರುವ ಈಕೆಗೆ ಇತ್ತಿಚಿಗೆ ಅವಕಾಶಗಳು ಕಡಿಮೆಯಾಗಿದೆ. ನಟಿಸಿದ ಸಿನೆಮಾಗಳೂ ಸಹ ಅಷ್ಟೊಂದು ಸಕ್ಸಸ್ ಆಗುತ್ತಿಲ್ಲ. ಇನ್ನೂ ನಟಿ ರಾಶಿ ಖನ್ನಾ ತೆಲುಗಿನ ಊಹಲು ಗುಸಗುಸಲಾಡೆ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾದ ಮೂಲಕವೇ ಆಕೆ ಅನೇಕರ ಯುವಕರ ಕನಸಿನ ರಾಣಿಯಾದರು. ಇದೀಗ ಆಕೆ ಮದುವೆಯ ಬಗ್ಗೆ ಕೆಲವೊಂದು ರೂಮರ್‍ ಗಳು ಕೇಳಿಬಂದಿದ್ದು, ಅದಕ್ಕೆ ರಾಶಿ ಖನ್ನಾ ಸ್ಪಷ್ಟನೆ ನೀಡಿದ್ದಾರೆ.

ನಟಿ ರಾಶಿ ಖನ್ನಾಗೆ ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಆಕೆ ಕೆಲವೊಂದು ಪ್ರಯೋಗಾತ್ಮಕ ಸಿನೆಮಾಗಳಲ್ಲಿ ನಟಿಸಲು ಮುಂದಾಗಿದ್ದಾರೆ.  ಜೊತೆಗೆ ವೆಬ್ ಸೀರಿಸ್ ಗಳತ್ತ ಮುಖ ಮಾಡಿದ್ದಾರೆ. ಈ ಹಾದಿಯಲ್ಲೇ ಆಕೆ ಇತ್ತೀಚಿಗೆ ಫಾರ್ಜಿ ಎಂಬ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀರಿಸ್ ಫೆ.10 ರಿಂದ ಅಮೇಜಾನ್ ಪ್ರೈಂ  ನಲ್ಲಿ ಸ್ಟ್ರೀಮಿಂಗ್ ಸಹ ಆಗುತ್ತಿದೆ. ಇನ್ನೂ ಈ ಸಿರೀಸ್ ರಾಶಿ ಖನ್ನಾಗೆ ಒಳ್ಳೆಯ ಕಮ್ ಬ್ಯಾಕ್ ತಂದುಕೊಟ್ಟಿದೆ ಎಂದೇ ಹೇಳಬಹುದಾಗಿದೆ. ಈ ಸೀರಿಸ್ ರಾಜ್ ಅಂಡ್ ಡಿಕೆ ನಿರ್ದೇಶನ ಮಾಡಿದ್ದಾರೆ. ಫೇಕ್ ನೋಟ್ ಗಳನ್ನು ಆಧರಿಸಿ ನಿರ್ಮಾಣವಾಗಿದ ಈ ಸೀರಿಸ್ ನಲ್ಲಿ ಷಾಹಿದ್ ಕಪೂರ್‍, ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಈ ಸೀರಿಸ್ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡ ಹಿನ್ನೆಲೆಯಲ್ಲಿ ಬಾಲಿವುಡ್ ನಲ್ಲಿ ಆಫರ್‍ ಗಳು ಬರಬಹುದು ಎಂದು ರಾಶಿ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.

ಇನ್ನೂ ರಾಶಿ ಖನ್ನಾ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಂದರ್ಶನದಲ್ಲಿ ಮದುವೆ ರೂಮರ್‍ ಗಳ ಬಗ್ಗೆ ಸಹ ರಿಯಾಕ್ಟ್ ಆಗಿದ್ದಾರೆ. ಸಂದರ್ಶನದಲ್ಲಿ ಮದುವೆ ರೂಮರ್‍ ಬಗ್ಗೆ ಪ್ರಶ್ನೆ ಎದುರಾಗಿದೆ. ನೀವು ಸಿನೆಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದೀರೀ, ಮದುವೆಯಾಗುವ ಆಲೋಚನೆಯ ಕಾರಣದಿಂದ ಹೊಸ ಸಿನೆಮಾಗಳಿಗೆ ಸೈನ್ ಮಾಡುತ್ತಿಲ್ಲ ಎಂದು ರೂಮರ್‍ ಗಳು ಕೇಳಿಬರುತ್ತಿವೆ ಎಂದು ಪ್ರಶ್ನೆ ಎದುರಾಗಿದೆ. ಅದಕ್ಕೆ ರಾಶಿ ಖನ್ನಾ ಉತ್ತರಿಸುತ್ತಾ ಅದೆಲ್ಲಾ  ಸುಳ್ಳು ಸುದ್ದಿಗಳು, ನಾನು ಮದುವೆಯಾಗುತ್ತಿರುವ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾನು ಸಿನೆಮಾಗಳನ್ನು ಮಾಡುವುದನ್ನೂ ಸಹ ಕಡಿಮೆ ಮಾಡಿಲ್ಲ. ತಮಿಳು ಹಾಗೂ ತೆಲುಗಿನಲ್ಲಿ ಕೆಲವೊಂದು ಕಥೆಗಳನ್ನು ಕೇಳಿದ್ದೇನೆ ಆದರೆ ಫಾರ್ಜಿ ಸಿರೀಸ್ ಬಿಡುಗಡೆಯ ಬ್ಯುಸಿಯಲ್ಲಿ ಅವುಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ.

ಅಷ್ಟೇ ಅಲ್ಲದೇ ಕೆಲವೊಂದು ಸಿನೆಮಾಗಳು ಚರ್ಚೆಗಳ ಹಂತದಲ್ಲಿವೆ. ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್ ಗಳನ್ನು ಪ್ರಕಟಿಸುತ್ತೇನೆ ಎಂದು ಹೇಳುವ ಮೂಲಕ ಮದುವೆ ರೂಮರ್‍ ಗಳಿಗೆ ಚೆಕ್ ಇಟ್ಟಿದ್ದಾರೆ. ಸದ್ಯ ರಾಶಿ ಖನ್ನಾ ಸಿದ್ದಾರ್ಥ್ ಮೆಲ್ಹೋತ್ರಾ ಗೆ ಜೋಡಿಯಾಗಿ ಯೋಧ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಜುಲೈ ಮಾಹೆಯಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಶೀಘ್ರದಲ್ಲೇ ಆಕೆಯ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಸಹ ಮಾಹಿತಿ ಹೊರಬರಲಿದೆ.

Most Popular

To Top