Film News

ಪಿಂಕ್ ಗೌನ್ ನಲ್ಲಿ ಬೇಬಿ ಬಂಪ್ ಪೊಟೋಸ್ ಶೇರ್ ಮಾಡಿದ ನಟಿ ಪೂರ್ಣ, ಎಮೋಷನಲ್ ಕಾಮೆಂಟ್ ಮಾಡಿದ ನಟಿ…!

ಮಲಯಾಳಂ ಸಿನೆಮಾಗಳ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಪೂರ್ಣ ಸೌತ್ ಸಿನಿರಂಗದಲ್ಲಿ ಬೇಡಿಕೆಯುಳ್ಳ ನಟಿಯಾಗಿದ್ದರು.  ಕಳೆದ ವರ್ಷ ದುಬೈ ಮೂಲದ ಉದ್ಯಮಿ ಷಾನಿದ್ ಆಸೀಫ್ ಅಲಿ ಎಂಬಾತನನ್ನು ಮದುವೆಯಾದರು. ಇವರ ಮದುವೆ ರಹಸ್ಯವಾಗಿ ನಡೆದಿತ್ತು. ಬಳಿಕ ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಂಡರು. ಈ ವಿಡಿಯೋ ಅನ್ನು ಆಕೆ ತನ್ನ ಯೂಟೂಬ್ ಖಾತೆಯ ಮೂಲಕ ಹಂಚಿಕೊಂಡಿದ್ದರು. ಇನ್ನೂ ಶೀಘ್ರದಲ್ಲೇ ಪೂರ್ಣ ತಾಯಿಯಾಗಲಿದ್ದಾರೆ. ಇದೀಗ ಆಕೆ ಪಿಂಕ್ ಡ್ರೆಸ್ ನಲ್ಲಿ ಬೇಬಿಬಂಪ್ ಪೊಟೋಶೂಟ್ಸ್ ಹಂಚಿಕೊಂಡಿದ್ದು, ಪೊಟೋಗಳು ವೈರಲ್ ಆಗಿದೆ.

ನಟಿ ಪೂರ್ಣ ಸೀಕ್ರೇಟ್ ಆಗಿ ಮದುವೆಯಾದರು. ಕೆಲವು ದಿನಗಳ ಹಿಂದೆಯಷ್ಟೆ ಪೂರ್ಣ ಸೀಮಂತ ಕಾರ್ಯಕ್ರಮ ಸಹ ಅದ್ದೂರಿಯಾಗಿ ನೆರವೇರಿತ್ತು. ಇನ್ನೂ ಈ ಸೀಮಂತ ಕಾರ್ಯಕ್ರಮದಲ್ಲಿ ಪೂರ್ಣ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು ಭಾಗವಹಿಸಿದ್ದರು. ಗ್ರಾಂಡ್ ಸೀರೆಯಲ್ಲಿ ಪೂರ್ಣ ಬೊಂಬೆಯಂತೆ ಕಾಣಿಸಿಕೊಂಡಿದ್ದು, ಆಕೆ ಅಷ್ಟೊಂದು ಸುಂದರವಾಗಿ ತಯಾರಾಗಲು ಪ್ರತ್ಯೇಕ ತಂಡ ಕೆಲಸ ಮಾಡಿದೆಯಂತೆ. ಇನ್ನೂ ಈ ಕಾರ್ಯಕ್ರಮದಲ್ಲಿ ಪೂರ್ಣ ತುಂಬಾ ಸಂತೋಷವಾಗಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಪೂರ್ಣ ಪಿಂಕ್ ಡ್ರೆಸ್ ನಲ್ಲಿ ಬೇಬಿಬಂಪ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ನಟಿ ಪೂರ್ಣ ತುಂಬಾ ಆಕ್ಟೀವ್ ಆಗಿಯೇ ಇರುತ್ತಾರೆ. ಆಗಾಗ ಪೊಟೋಶೂಟ್ಸ್ ಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳೊಂದಿಗೆ ಹತ್ತಿರವಾಗಿಯೇ ಇರುತ್ತಾರೆ. ಇದೀಗ ಆಕೆ ತನ್ನ ಬೇಬಿಬಂಪ್ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ. ಲಾಂಗ್ ಪಿಂಕ್ ಗೌನ್ ನಲ್ಲಿ ಆಕೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸುಂದರವಾಗಿರುವಂತಹ ಪೂರ್ಣ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ಆಕೆ ತನ್ನ ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಎಮೋಷನಲ್ ಕಾಮೆಂಟ್ ಸಹ ಮಾಡಿದ್ದಾರೆ. ಜೀವನದಲ್ಲಿ ನಡೆಯುವಂತಹ ಅತಿ ದೊಡ್ಡ ಮಿರಾಕಲ್ ಏನೆಂದರೇ, ನಮ್ಮ ಒಳಗೆ ಇನ್ನೊಂದು ಜೀವ ಬೆಳೆಯುವುದು ಎಂದು ಕಾಮೆಂಟ್ ಮಾಡಿದ್ದಾರೆ.  ಇನ್ನೂ ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಶುಭಾಷಯಗಳನ್ನು ಕೋರುತ್ತಿದ್ದಾರೆ.

ಇನ್ನೂ ನಟಿ ಪೂರ್ಣ ಖಾತೆಯಲ್ಲಿ ಅವುನು, ಅವುನು 2, ರಾಜು ಗಾರಿ ಗದಿ ಸೇರಿದಂತೆ ಕೆಲವೊಂದು ಹಿಟ್ ಸಿನೆಮಾಗಳಿವೆ. ಕಳೆದ ವರ್ಷ ಆಕೆ ದೃಶ್ಯಂ-2 ಹಾಗೂ ಅಖಂಡ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಎರಡೂ ಸಿನೆಮಾಗಳು ಆಕೆಗೆ ಒಳ್ಳೆಯ ಕ್ರೇಜ್ ತಂದುಕೊಟ್ಟಿತ್ತು.  ಇನ್ನೂ ನಾನಿ ಅಭಿನಯದ ದಸರಾ ಸಿನೆಮಾದಲ್ಲೂ ಸಹ ಪ್ರಮುಖ ಪಾತ್ರದಲ್ಲಿ ಪೂರ್ಣ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಮಗುವಾದ ಬಳಿಕ ಪೂರ್ಣ ಸಿನೆಮಾಗಳಲ್ಲಿ ಮುಂದುವರೆಯುತ್ತಾರಾ ಅಥವಾ ಸಿನೆಮಾಗಳಿಗೆ ಗುಡ್ ಬೈ ಹೇಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top