ಅಂತರ್ಜಾತಿ ವಿವಾಹ ಮಾಡಿಕೊಂಡ ಸ್ವರಾ ಭಾಸ್ಕರ್, ಅಣ್ಣ ಎಂದ ವ್ಯಕ್ತಿಯೊಂದಿಗೆ ಮದುವೆ, ಸಖತ್ ಟ್ರೋಲ್ ಆದ ನಟಿ….!

Follow Us :

ಬಾಲಿವುಡ್ ಸಿನಿರಂಗದ ಬೋಲ್ಡ್ ನಟಿ ಎಂದೇ ಖ್ಯಾತಿ ಪಡೆದುಕೊಂಡ ಸ್ವರಾ ಭಾಸ್ಕರ್‍ ಕಳೆದೆರಡು ದಿನಗಳ ಹಿಂದೆಯಷ್ಟೆ ಸಮಾಜವಾದಿ ಪಾರ್ಟಿಯ ಯುವ ಮುಖಂಡ ಫಹಾದ್ ಆಹ್ಮದ್ ಎಂಬಾತನೊಂದಿಗೆ ವಿವಾಹವಾದರು. ಕಳೆದ ತಿಂಗಳ 6 ಎಂದು ರಿಜಿಸ್ಟರ್‍ ಮ್ಯಾರೇಜ್ ಮಾಡಿಕೊಂಡ ಈ ಜೋಡಿ ಇತ್ತೀಚಿಗಷ್ಟೆ ಸೋಷಿಯಲ್ ಮಿಡಿಯಾ ಮೂಲಕ ಈ ವಿಚಾರವನ್ನು ಹಂಚಿಕೊಂಡರು. ಇನ್ನೂ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುವ ಈಕೆ ಇದೀಗ ಅಂತರ್ಜಾತಿ ವಿವಾಹವಾಗಿ ಸುದ್ದಿಯಾಗಿದ್ದಾರೆ. ಈ ಹಿಂದೆ ಫಹಾದ್ ನನ್ನು ಅಣ್ಣ ಎಂದಿದ್ದು, ಅಣ್ಣ ಎಂದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದೀಯಾ ಎಂದು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

ನಟಿ ಸ್ವರಾ ಭಾಸ್ಕರ್‍ ಹಾಗೂ ಫಹಾದ್ ಸುಮಾರು ದಿನಗಳಿಂದ ರಿಲೇಷನ್ ಶಿಪ್ ನಲ್ಲಿದ್ದರಂತೆ. ಫಹಾದ್ ಸಹ ಮೋದಿ ಸರ್ಕಾರದ ವಿರುದ್ದ ಹೋರಾಟ ಮಾಡುತ್ತಿರುತ್ತಾರೆ. ಈ ಕಾರಣದಿಂದ ಅವರಿಬ್ಬರ ನಡುವೆ ಪರಿಚಯ ಏರ್ಪಟ್ಟು ಪರಿಚಯ ಪ್ರೀತಿಯಾಗಿ ಇದೀಗ ಮದುವೆಯಾಗಿದ್ದಾರೆ. ಇನ್ನೂ ತಾವು ಮದುವೆಯಾದ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿಕೊಟ್ಟಿದ್ದಾರೆ. ಸಾರ್ವಜನಿಕ ಸಮಾರಂಭಗಳಲ್ಲಿ ಅವರಿಬ್ಬರು ಭಾಗಿಯಾದ ದೃಶ್ಯಗಳು, ಕೊರ್ಟ್‌ನಲ್ಲಿ ಮದುವೆಯಾದ ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ನಾವು ಪ್ರೀತಿಗಾಗಿ ಹುಡುಕಿದರೇ, ಮೊದಲು ಸ್ನೇಹ ದೊರೆಯುತ್ತದೆ. ಬಳಿಕ ಅದು ಪ್ರೀತಿಯಾಗಿ ಬದಲಾಗುತ್ತದೆ, ವೆಲ್ಕಂ ಫಹಾದ್ ಅಹ್ಮದ್ ಎಂದು ಸ್ವರಾ ಭಾಸ್ಕರ್‍ ಪೋಸ್ಟ್ ಮಾಡಿದ್ದರು. ಈ ಹಿಂದೆ ಫಹಾದ್ ನನ್ನು ಸ್ವರಾ ಭಾಸ್ಕರ್‍ ಅಣ್ಣ ಎಂದಿದ್ದರು ಎಂಬ ಪೋಸ್ಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಳೆದ 2020 ರಲ್ಲಿ ಸಮಾಜವಾದಿ ಪಾರ್ಟಿ ಪ್ರಚಾರದ ಸಮಯದಲ್ಲಿ ಫಹಾದ್ ನೊಂದಿಗೆ ಪರಿಚಯವಾಗಿತ್ತಂತೆ. ಮೊದಲಿಗೆ ಫಹಾದ್ ನನ್ನು ಸ್ವರಾ ಅಣ್ಣ ಎಂದು ಕರೆಯುತ್ತಿದ್ದರು. ಆತನ ಹುಟ್ಟುಹಬ್ಬದ ಸಮಯದಲ್ಲಿ ಫಹಾದ್ ಭಾಯ್ ಎಂದು ಹೇಳುತ್ತಾ ಹುಟ್ಟುಹಬ್ಬದ ಶುಭಾಷಯಗಳನ್ನು ತಿಳಿಸಿದ್ದರು. ಇದೀಗ ಈ ಟ್ವೀಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಣ್ಣ ಎಂದು ಕರೆದ ವ್ಯಕ್ತಿಯೊಂದಿಗೆ ಹೇಗೆ ಮದುವೆಯಾಗದೆ ಎಂದು ಸ್ವರಾ ಭಾಸ್ಕರ್‍ ರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಇನ್ನೂ ಆ ಟ್ಟೀಟ್ ಸ್ಕ್ರೀನ್ ಶಾಟ್ ಹಂಚಿಕೊಂಡು ಸಖತ್ ಟ್ರೋಲ್ ಮಾಡುತ್ತಿದ್ದಾರೆ ಇನ್ನೂ ಆಕೆ ಈ ಟ್ರೋಲ್ ಗಳಿಗೆ ಯಾವ ರೀತಿಯಲ್ಲಿ ಕೌಂಟರ್‍ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.