ಸ್ಲೀವ್ ಲೆಸ್ ಬ್ಲೌಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಉಪ್ಪೇನ ಬ್ಯೂಟಿ ಕೃತಿ ಶೆಟ್ಟಿ, ಕ್ಯೂಟ್ ಅಂಡ್ ಫನ್ನಿ ಪೊಟೋಸ್ ವೈರಲ್…..!

Follow Us :

ಸೌತ್ ಸಿನಿರಂಗದ ನಟಿ ಕೃತಿ ಶೆಟ್ಟಿ ಸ್ಟಾರ್‍ ಇಮೇಜ್ ಗಿಟ್ಟಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ತೆಲುಗು, ತಮಿಳು, ಮಲಯಾಳಂ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕಡೆ ಓದುತ್ತಾ, ಮತ್ತೊಂದು ಕಡೆ ಸಿನೆಮಾಗಳನ್ನು ಮಾಡುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಸಿನೆಮಾಗಳಂತೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಆಕೆಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಇದೀಗ ಸಂಪ್ರದಾಯವಾಗಿಯೇ ಆಕೆ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಟಿ ಕೃತಿ ಶೆಟ್ಟಿ ಪಂಜಾ ವೈಷ್ಣವ್ ತೇಜ್ ಜೊತೆಗೆ ಉಪ್ಪೇನಾ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಕರ್ನಾಟಕದ ಮೂಲದ ಈಕೆ ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡರು. ಬಳಿಕ ಸಾಲು ಸಾಲು ಹಿಟ್ಸ್ ಪಡೆದುಕೊಂಡ ಈಕೆಗೆ ಸೋಲುಗಳೂ ಸಹ ದೊರೆತವು. ಇನ್ನೂ ಆಕೆ ಬ್ಯೂಟಿ ಹಾಗೂ ನಟನೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಪಡೆದುಕೊಂಡಿದ್ದಾರೆ. ಇದೀಗ ಆಕೆ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ಕಸ್ಟಡಿ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಇದೇ ಮೇ.12 ರಂದು ಅದ್ದೂರಿಯಾಗಿ ತೆರೆ ಕಾಣಲಿದೆ. ಈ ಹಾದಿಯಲ್ಲೇ ಚಿತ್ರತಂಡ ಬ್ಯಾಕ್ ಟು ಬ್ಯಾಕ್ ಪ್ರಮೋಷನ್ ಸಹ ಮಾಡುತ್ತಿದೆ. ಈ ಪ್ರಮೋಷನ್ ಗಳಲ್ಲಿ ಕೃತಿ ಶೆಟ್ಟಿ ಸಹ ಭಾಗಿಯಾಗುತ್ತಿದ್ದು, ವಿವಿಧ ರೀತಿಯ ಡ್ರೆಸ್ ಗಳ ಮೂಲಕ ಮತಷ್ಟು ಮೆರುಗು ಕೊಡುತ್ತಿದ್ದಾರೆ.

ಇನ್ನೂ ಕೃತಿ ಶೆಟ್ಟಿ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಇದೀಗ ಕಸ್ಟಡಿ ಸಿನೆಮಾದ ಪ್ರಮೋಷನ್ ನಿಮಿತ್ತ ಆಕೆ ಸೀರೆಯಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಸೀರೆಯಲ್ಲಿ ಕ್ಯೂಟ್ ಅಂಡ್ ಬ್ಯೂಟಿಪುಲ್ ಲುಕ್ಸ್ ಕೊಟ್ಟಿದ್ದಾರೆ. ಆಕೆ ಸ್ಲೀವ್ ಲೆಸ್ ಬ್ಲೌಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತೆ ಲುಕ್ಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಲುಕ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಸೇರಿದಂತೆ ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅದರಲ್ಲೂ ಆಕೆಯ ಕ್ಯೂಟ್ ಅಂಡ್ ಫನ್ನಿ ಚೇಷ್ಟೆಗಳು ಯುವಕರ ಹೃದಯ ಕದಿಯುತ್ತಿವೆ ಎನ್ನಲಾಗಿದೆ.

ಇನ್ನೂ ಕೃತಿ ಶೆಟ್ಟಿಗೆ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಫಾಲೋಯಿಂಗ್ ಇದೆ. ಸದ್ಯ 5.5 ಮಿಲಿಯನ್ ಫಾಲೋವರ್ಸ್ ಹೊಂದಿರುವ ಈಕೆಯ ಪೋಟೊಗಳು ಕ್ಷಣಗಳಲ್ಲೆ ವೈರಲ್ ಆಗುತ್ತಿರುತ್ತವೆ. ಇದೀಗ ಆಕೆ ಕಸ್ಟಡಿ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಜೊತೆಗೆ ಮಲಯಾಳಂನ ಅಜಾಯಂತೆ ರಂದಂ ಮೋಷಣಂ ಎಂಬ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.