ತನ್ನ ಮನಸ್ಸಿನಲ್ಲಿರುವ ಬಯಕೆಯನ್ನು ಹೊರಹಾಕಿದ ಸೀನಿಯರ್ ನಟಿ ಪ್ರಿಯಮಣಿ, ಆ ನಟನೊಂದಿಗೆ ರೊಮ್ಯಾನ್ಸ್ ಮಾಡಬೇಕು ಎಂದ ನಟಿ…..!

Follow Us :

ಸಿನಿರಂಗದಲ್ಲಿ ಅನೇಕ ನಟಿಯರು ಸಿನೆಮಾಗಳಲ್ಲಿ ಜೋರು ಸದ್ದು ಮಾಡಿ, ವಯಸ್ಸಾದ ಬಳಿಕ ಸಿನಿರಂಗದಿಂದ ದೂರವುಳಿಯುತ್ತಾರೆ. ಆದರೆ ಕೆಲವು ನಟಿಯರು ಮಾತ್ರ ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಾರೆ. ಈ ಸಾಲಿಗೆ ನಟಿ ಪ್ರಿಯಮಣಿ ಸಹ ಸೇರುತ್ತಾರೆ. ಆಕೆಗೆ ನಲವತ್ತರ ವಯಸ್ಸಾದರೂ ಸಹ ಯಂಗ್ ನಟಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಅನೇಕ ಸಿನೆಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಇದೀಗ  ಆಕೆ ಹಂಚಿಕೊಂಡ ತನ್ನ ಮನಸ್ಸಿನಲ್ಲಿರುವ ಬಯಕೆಯ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಆ ಕಾಮೆಂಟ್ ವೈರಲ್ ಆಗಿದೆ.

ನಟಿ ಪ್ರಿಯಮಣಿ ಸೌಂದರ್ಯದ ಜೊತೆಗೆ ಅಭಿನಯದ ಮೂಲಕ ಸಹ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ನಟನೆ, ನೃತ್ಯ, ಸೌಂದರ್ಯ ಎಲ್ಲವನ್ನು ಹೊಂದಿರುವ ಪ್ರಿಯಮಣಿ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ಪಡೆದುಕೊಂಡರು. ಆಕೆಗೆ ಬಂದ ಪ್ರತಿಯೊಂದು ಅವಕಾಶವನ್ನು ಸಹ ಸದ್ಬಳಕೆ ಮಾಡಿಕೊಂಡು ಯಾವುದೇ ವಿವಾದಗಳ ಸುದ್ದಿಗೆ ಹೋಗದೇ ಕೆರಿಯರ್‍ ಸಾಗಿಸಿದ್ದಾರೆ. ಇನ್ನೂ ಅನೇಕ ಕಮರ್ಷಿಯಲ್ ಸಿನೆಮಾಗಳಲ್ಲೂ ಆಕೆ ಗ್ಲಾಮರ್‍ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆರಿಯರ್‍ ಜೊತೆಗೆ ವೈಯುಕ್ತಿಕ ಜೀವನದಲ್ಲೂ ಸಹ ಆಕೆ ಪಕ್ಕಾ ಪ್ಲಾನಿಂಗ್ ನಿಂದ ನಡೆದುಕೊಂಡಿದ್ದಾರೆ. ಅನೇಕ ಹಿಟ್ ಸಿನೆಮಾಗಳಲ್ಲಿ ಆಕೆ ನಟಿಸಿದ್ದಾರೆ. ಇನ್ನೂ ಆಕೆಗೆ ಸಿನೆಮಾಗಳಲ್ಲಿ ಅವಕಾಶಗಳು ಕಡಿಮೆಯಾದ ಸಮಯದಲ್ಲೇ ಆಕೆ ಮುಸ್ತಾಫಾ ಎಂಬಾತನೊಂದಿಗೆ ಮದುವೆಯಾದರು. ಮದುವೆಯಾದ ಬಳಿಕವೂ ಸಹ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.

ಇನ್ನೂ ಪ್ರಿಯಮಣಿ ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಹಾಗೂ ವೆಂಕಟ್ ಪ್ರಭು ಕಾಂಬಿನೇಷನ್ ನಲ್ಲಿ ತೆರೆಗೆ ಬರಲಿರುವ ಕಸ್ಟಡಿ ಎಂಬ ಸಿನೆಮಾದಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಾದಿಯಲ್ಲೇ ಆಕೆ ಸಿನೆಮಾ ಪ್ರಮೋಷನ್ ನಿಮಿತ್ತ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತನ್ನ ಮನಸ್ಸಿನಲ್ಲಿರುವ ಬಯಕೆಯೊಂದನ್ನು ಹೊರಹಾಕಿದ್ದಾರೆ. ಆಕೆಗೆ ಸ್ಟಾರ್‍ ಹಿರೋ ಮೆಗಾಸ್ಟಾರ್‍ ಚಿರಂಜೀವಿಯವರೊಂದಿಗೆ ರೊಮ್ಯಾನ್ಸ್ ಮಾಡುವ ಬಯಕೆಇದೆಯಂತೆ. ಈ ಮಾತನ್ನು ಆಕೆ ನಾಚುತ್ತಾ ಹಂಚಿಕೊಂಡಿದ್ದಾರೆ. ಇನ್ನೂ ಈ ಕಾಮೆಂಟ್ ಇದೀಗ ವೈರಲ್ ಆಗುತ್ತಿದ್ದು, ನೆಟ್ಟಿಗರು ಸಹ ವಿವಿಧ ರೀತಿಯಲ್ಲಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

ಇನ್ನೂ ಚೈತನ್ಯ ನನಗೆ ತುಂಬಾ ವರ್ಷಗಳ ಹಿಂದೆಯೇ ಪರಿಚಯ. ಮೊದಲ ಬಾರಿಗೆ ಆತನೊಂದಿಗೆ ನಟಿಸುತ್ತಿದ್ದೇನೆ. ನಮ್ಮಿಬ್ಬರ ಕಾಂಬಿನೇಷನ್ ಪ್ರೇಕ್ಷಕರನ್ನು ಚೆನ್ನಾಗಿ ರಂಜಿಸಲಿದೆ. ಇನ್ನೂ ಟಾಲಿವುಡ್ ನ ಬಾಲಕೃಷ್ಣ, ವೆಂಕಟೇಶ್, ನಾಗಾರ್ಜುನ್ ರವರೊಂದಿಗೆ ನಟಿಸಿದ್ದೇನೆ. ಆದರೆ ಮೆಗಾಸ್ಟಾರ್‍ ಚಿರಂಜೀವಿಯವರ ಜೊತೆಗೆ ನಟಿಸಬೇಕೆಂಬ ಬಯಕೆ ನನಗೆ ಉಳಿದಿದೆ. ಶಾರುಖ್ ಖಾನ್ ರವರು ಎಂದರೇ ಸಹ ಇಷ್ಟವಾಗಿದ್ದು, ಆತನೊಂದಿಗೆ ಎಂತಹ ಸನ್ನಿವೇಶಗಳಲ್ಲಾದರೂ ಸಹ ನಟಿಸಲು ಸಿದ್ದ ಎಂದು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಪ್ರಿಯಮಣಿ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.