Film News

ಆಂಕರ್ ಜಾನ್ಸಿ ಅಪಪ್ರಚಾರದ ಬಗ್ಗೆ ಸೀರಿಯಸ್ ಅಲಿಗೇಷನ್ಸ್, ತಪ್ಪು ವಾರ್ತೆಗಳ ಬಗ್ಗೆ ಫೈರಿಂಗ್ ಕೌಂಟರ್…..!

ತೆಲುಗು ಸಿನಿರಂಗದ ಆಂಕರ್‍ ಕಂ ನಟಿ ಜಾನ್ಸಿ ಅನೇಕ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇತ್ತಿಚಿಗೆ ಆಕೆಗೆ ಆದಂತಹ ಅನ್ಯಾಯ, ರೂಮರ್‍ ಗಳ ಬಗ್ಗೆ ಆಕೆ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಆಕೆ ಕೆಲವೊಂದು ಸೀರಿಯಸ್ ಕಾಮೆಂಟ್ಸ್ ಮಾಡಿದ್ದು, ತನ್ನ ವಿರುದ್ದ ಕೆಟ್ಟದಾಗಿ ಬರೆದಂತಹ ಮಿಡಿಯಾದ ಮೇಲೆ ಫೈರಿಂಗ್ ಆಗಿದ್ದಾರೆ. ಕೆಲವು ವಿಚಾರಗಳ ಬಗ್ಗೆ ಆಕೆ ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸೀನಿಯರ್‍ ನಟಿ ಜಾನ್ಸಿ ಕೆಲವೊಂದು ವಿಚಾರಗಳ ಬಗ್ಗೆ ಫೈರ್‍ ಆಗಿದ್ದಾರೆ. ನನಗೆ ಅನ್ಯಾಯ ಮಾಡಿದಂತಹವರಿಗೆ ತಪ್ಪದೇ ನನ್ನ ಶಾಪ ತಟ್ಟುತ್ತೆ. ಈ ರೀತಿಯಾದಂತಹ ಕೆಲವು ಘಟನೆಗಳೂ ಸಹ ಇದೆ. ಎರಡು ದಿನಗಳ ಶೂಟಿಂಗ್ ಮಾಡಿದ ಬಳಿಕ ನನ್ನನ್ನು ಆ ಸಿನೆಮಾದಿಂದ ಹೊರಹಾಕಿದರು. ದೊಡ್ಡ ಡೈರೆಕ್ಟರ್‍, ಸ್ಟಾರ್‍ ಹಿರೋ ಕಾಂಬಿನೇಷನ್ ನ ಸಿನೆಮಾ ಒಂದರಲ್ಲಿ ನಾನು ಒಂದು ಪಾತ್ರ ಮಾಡುತ್ತಿದೆ. ಎರಡು ದಿನಗಳ ಶೂಟಿಂಗ್ ಸಹ ಮುಗಿಸಿದ್ದೆ. ನನಗೆ ಎರಡು ದಿನಗಳ ರೆನ್ಯುಮರೇಷನ್ ಸಹ ಕೊಟ್ಟರು. ಬಳಿಕ ನನ್ನ ಪಾತ್ರಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಿಕೊಂಡರು. ಈ ರೀತಿ ಮಾಡಿದರೆ ಯಾರಿಗೆ ತಾನೇ ನೋವಾಗುವುದಿಲ್ಲ. ಅವರಿಗೆ ಸರಿಯಾದ ಒಡೆದ ಬಿತ್ತು. ನನಗೆ ಅನ್ಯಾಯ ಮಾಡಿದ್ದಕ್ಕಾಗಿ ಅದು ನಡೆದಿದೆ ಎಂದು ಹೇಳೊಲ್ಲ. ಆ ಸಿನೆಮಾದಲ್ಲಿ ಒಳ್ಳೆಯ ಕಥೆಯಿರಲಿಲ್ಲ. ಅದರಿಂದ ಅದು ಫ್ಲಾಪ್ ಆಯ್ತು ಎಂದಿದ್ದಾರೆ.

ಇನ್ನೂ ನನ್ನ ಒಳ್ಳೆಯತನದ ಬಗ್ಗೆ ತಿಳಿಯಬೇಕಾದರೇ ಗೂಗಲ್ ನಲ್ಲಿ ಹತ್ತು ಅಥವಾ ಹನ್ನೊಂದನೇ ಪೇಜ್ ಹುಡುಕಬೇಕು ಆದರೆ ನನ್ನ ಬಗ್ಗೆ ಕೆಟ್ಟ ಸುದ್ದಿಗಳು ಮಾತ್ರ ಮೊದಲನೇ ಪೇಜ್ ನಲ್ಲೇ ಸಿಗುತ್ತದೆ. ಜಾನ್ಸಿಗೆ ಆ ಹಿರೋ ಜೊತೆಗೆ ಅಫೈರ್‍ ಇದೆ. ಪೊಲೀಸರ ರೈಡ್ ನಲ್ಲಿ ಸಿಕ್ಕಿಕೊಂಡಿದ್ದಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿದೆ. ಒಂದು ವೇಳೆ ನಾನು ಪೊಲೀಸರಿಗೆ ಸಿಕ್ಕಿಬಿದ್ದಿದ್ದರೇ ನಾನು ಇಲ್ಲಿರುತ್ತೇನೇಯೇ, ಆ ಸುದ್ದಿ ಯಾರು ಬರೆದರೋ ಯಾರು ಬರೆಸಿದ್ದಾರೆ ಎಂಬುದು ಸಹ ನನಗೆ ಗೊತ್ತು. ನನಗೆ ಎಂಟು ನಂದಿ ಅವಾರ್ಡ್‌ಗಳು ದೊರೆತಿದೆ. ಆದರೆ ಅದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಇತ್ತಿಚಿಗೆ ವೆಬ್ ಸೈಟ್ ಮಿಡಿಯಾಗಳು ತುಂಬಾ ಕೆಟ್ಟದಾಗಿದೆ. ಒಬ್ಬರು ಏನಾದರು ಕೆಟ್ಟದಾಗಿ ಬರೆದರೇ ಸಾಕು ಎಲ್ಲರೂ ಅದೇ ಬರೆಯುತ್ತಾರೆ. ಆ ಸುದ್ದಿಯ ಬಗ್ಗೆ ರೀಸರ್ಚ್ ಮಾಡಿ ಅಥವಾ ಪೋನ್ ಮಾಡಿ ನಿಜ ತಿಳಿದುಕೊಂಡು ಬರೆಯುವವರು ಯಾರು ಇಲ್ಲ. ಎಲ್ಲರೂ ಕಾಪಿ ಫೇಸ್ಟ್ ಮಾಡುವವರೇ, ಆ ರೀತಿ ಬರೆಯುವಂತ ಸುದ್ದಿಯ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಇನ್ನೂ ನನ್ನ ಮೇಲೆ ಬಂದಂತಹ ಈ ರೀತಿಯ ಸುಳ್ಳು ಸುದ್ದಿಗಳ ಕಾರಣದಿಂದ ನಾನು ದೊಡ್ಡ ಹುದ್ದೆಯಿಂದ ವಂಚಿತಳಾದೆ. ಯುನೆಸ್ಕೋ ಪರವಾಗಿ ನಾನು ಕರ್ನಾಟಕ ಹಾಗೂ ಸೌತ್ ನ ಅಂಬಾಸಿಡರ್‍ ಆಗಿ ಆಯ್ಕೆ ಮಾಡಬೇಕಿತ್ತು. ಆದರೆ ಇಂತಹ ರೂಮರ್‍ ಗಳ ಕಾರಣದಿಂದ ಆ ಹುದ್ದೆ ಹೋಯಿತು ಎಂದು ಆಕೆ ನೋವನ್ನು ವ್ಯಕ್ತಪಡಿಸಿದ್ದಾರೆ.

Most Popular

To Top