ತನ್ನ ಪ್ರಿಯಕರನ್ನು ಪರಿಚಯ ಮಾಡಿದ ಸೌತ್ ಬ್ಯೂಟಿ ಐಶ್ವರ್ಯ ಲಕ್ಷ್ಮೀ, ಸೋಷಿಯಲ್ ಮಿಡಿಯಾ ಮೂಲಕ ಮಾಹಿತಿ ಹಂಚಿಕೊಂಡ ನಟಿ…..!

Follow Us :

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ಅದರಲ್ಲೂ ಅವರ ವೈಯುಕ್ತಿಕ ವಿಚಾರಗಳನ್ನು ತಿಳಿದುಕೊಳ್ಳಲು ಅವರ ಅಭಿಮಾನಿಗಳಿಗೆ ತುಂಬಾನೆ ಆಸಕ್ತಿ ಇರುತ್ತದೆ. ಅದರಲ್ಲೂ ಅವರ ಲವ್, ಡೇಟಿಂಗ್, ಮದುವೆ ವಿಚಾರಗಳಂತೂ ಕಡಿಮೆ ಸಮಯದಲ್ಲೇ ಸಖತ್ ಹರಿದಾಡುತ್ತವೆ. ಆ ಸುದ್ದಿ ನಿಜವಿರಲಿ ಅಥವಾ ಸುಳ್ಳಾಗಿರಲಿ ಕಡಿಮೆ ಸಮಯದಲ್ಲೇ ಬಿರುಗಾಳಿಯಂತೆ ಹಬ್ಬುತ್ತದೆ. ಇದೀಗ ಸೌತ್ ನ ಯಂಗ್ ನಟಿ ಐಶ್ವರ್ಯ ಲಕ್ಷ್ಮೀ ತಾನು ಪ್ರೀತಿ ಮಾಡುವ ಯುವಕನನ್ನು ಸೋಷಿಯಲ್ ಮಿಡಿಯಾ ಮೂಲಕ ಪರಿಚಯಿಸಿದ್ದಾರೆ.

ನಟ ಐಶ್ವರ್ಯ ಲಕ್ಷ್ಮೀ ಬಹುಬೇಡಿಕೆ ನಟಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಮಟ್ಟಿ ಕುಸ್ತಿ, ಪೊನ್ನಿಯನ್ ಸೆಲ್ವನ್, ಅಮ್ಮು ಸಿನೆಮಾಗಳ ಮೂಲಕ ಸೌತ್ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಸಿನೆಮಾಗಳು ಆಕೆಗೆ ತುಂಬಾನೆ ಕ್ರೇಜ್ ತಂದುಕೊಟ್ಟಿದ್ದು, ಮತಷ್ಟು ಸಿನೆಮಾಗಳ ಅವಕಾಶಗಳು ಹರಸಿ ಬರುತ್ತಿವೆ. ಇನ್ನೂ ಐಶ್ವರ್ಯ ತಾನು ಪ್ರೀತಿಗೆ ಬಿದ್ದ ಬಗ್ಗೆ ತಿಳಿಸಿದ್ದಾರೆ. ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತನ್ನ ಪ್ರಿಯಕರನ್ನು ಪರಿಚಯಿಸಿದ್ದಾರೆ. ನಟ ಅರ್ಜುನ್ ದಾಸ್ ಎಂಬಾತನೊಂದಿಗೆ ಆಕೆ ಪ್ರೀತಿಗೆ ಬಿದ್ದಿರುವುದಾಗಿ ತಿಳಿಸಿದ್ದಾರೆ. ಇನ್ನೂ ಐಶ್ವರ್ಯ ಪೋಸ್ಟ್ ಕಂಡ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಕೆಲವರು ಈ ಸುದ್ದಿಯನ್ನು ನಂಬುತ್ತಿಲ್ಲ. ಪಬ್ಲಿಸಿಟಿ ಭಾಗವಾಗಿ ಆಕೆ ಈ ಪೋಸ್ಟ್ ಮಾಡಿದ್ದಾರೆ ಎಂದೂ ಸಹ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಇದಕ್ಕೆ ಕಾರಣ ಕೆಲವು ದಿನಗಳ ಹಿಂದೆಯಷ್ಟೆ ಐಶ್ವರ್ಯ ತನ್ನ ಜೀವನದಲ್ಲಿ ಮದುವೆ ಎಂಬುದಕ್ಕೆ ಜಾಗವಿಲ್ಲ. ಜೀವನಪೂರ್ತಿ ಹೀಗೇ ಇರುತ್ತೇನೆ ಎಂದು ಹೇಳಿದ್ದರು. ಇದೀಗ ಆಕೆ ತನ್ನ ಪ್ರಿಯಕರನ್ನು ಸೋಷಿಯಲ್ ಮಿಡಿಯಾ ಮೂಲಕ ಪರಿಚಯಿಸಿದ್ದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಕೆಲವರು ಆಕೆಗೆ ಶುಭಾಷಯಗಳನ್ನು ತಿಳಿಸುತ್ತಿದ್ದರೇ, ಮತ್ತೆ ಕೆಲವರು ಯಾವುದಾದರೂ ಸಿನೆಮಾದ ಪ್ರಮೋಷನ್ ಇರಬಹುದು ಎಂದೂ ಸಹ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಸಹ ಐಶ್ವರ್ಯ ಹಂಚಿಕೊಂಡ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.

ಮಲಯಾಳಂ ಮೂಲದ ಈಕೆಯ ಕೈಯಲ್ಲಿ ಅನೇಕ ಸಿನೆಮಾಗಳಿವೆ. ತಮಿಳು ಹಾಗೂ ಮಲಯಾಳಂ ಸಿನೆಮಾಗಳು ಮಾತ್ರ ಆಕೆಯ ಖಾತೆಯಲ್ಲಿವೆ. ತೆಲುಗಿನ ಸ್ಟಾರ್‍ ನಟರ ಜೊತೆಗೆ ನಟಿಸುವ ಇಚ್ಚೆಯನ್ನು ಸಹ ಆಕೆ ಹೊಂದಿದ್ದಾರೆ ಎನ್ನಲಾಗಿದೆ. ಇನ್ನೂ ಐಶ್ವರ್ಯ ಪರಿಚಯಿಸಿದ ಅರ್ಜುನ್ ದಾಸ್ ಬುಟ್ಟಬೊಮ್ಮ ಎಂಬ ತೆಲುಗು ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.