ಐಟಂ ಸಾಂಗ್ ಆಫರ್ ಅನ್ನು ತಿರಸ್ಕರಿಸಿದ ಆಂಕರ್ ಕಂ ನಟಿ ರಶ್ಮಿ ಗೌತಮ್….!

Follow Us :

ಆಂಕರ್‍ ಕಂ ನಟಿ ರಶ್ಮಿ ಸಿನೆಮಾಗಳು ಕಿರುತೆರೆ ಶೋಗಳ ಮೂಲಕ ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ. ಜಬರ್ದಸ್ತ್ ಶೋ ಮೂಲಕ ಸದಾ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ಈಕೆ ಗ್ಲಾಮರಸ್ ಪೋಸ್ ಗಳ ಮೂಲಕ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಇದೀಗ ರಶ್ಮಿಗೆ ಐಟಂ ಸಾಂಗ್ ನಲ್ಲಿ ನಟಿಸುವ ಅವಕಾಶ ಬಂದಿದ್ದು ಅದನ್ನು ತಿರಸ್ಕರಿಸಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಜಬರ್ದಸ್ತ್ ಕಾಮಿಡಿ ಶೋ ಮೂಲಕ ತುಂಬಾನೆ ಕ್ರೇಜ್ ಪಡೆದುಕೊಂಡ ರಶ್ಮಿ ಇತ್ತೀಚಿಗೆ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಈಗಾಗಲೇ ಕೆಲವೊಂದು ಸಿನೆಮಾಗಳಲ್ಲಿ ಆಕೆ ನಟಿಸಿದ್ದಾರೆ. ಆದರೆ ಆ ಸಿನೆಮಾ ಸಣ್ಣ ಸಿನೆಮಾಗಳಾಗಿದೆ. ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ಆಕೆಗೆ ನಟಿಯಾಗಿ ಒಳ್ಳೆಯ ಕ್ರೇಜ್ ಸಿಗಲಿಲ್ಲ ಎನ್ನಬಹುದಾಗಿದೆ. ಸದ್ಯ ರಶ್ಮಿ ತೆಲುಗಿನ ಅನೇಕ ಶೋಗಳಿಗೆ ಆಂಕರ್‍ ಆಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಆಕೆ ಸಿನೆಮಾಗಳಲ್ಲಿ ಅವಕಾಶಗಳೂ ಸಹ ಬರುತ್ತಿವೆ. ಈ ಹಾದಿಯಲ್ಲೇ ಆಕೆಗೆ ಐಟಂ ಸಾಂಗ್ ಒಂದರಲ್ಲಿ ನಟಿಸುವ ಅವಕಾಶ ಬಂದಿತ್ತು ಎನ್ನಲಾಗಿದೆ. ಆದರೆ ಆ ಆಫರ್‍ ಅನ್ನು ರಶ್ಮಿ ತಿರಸ್ಕರಿಸಿದ್ದಾರೆ ಎಂಬ ಮಾತುಗಳು ಸಿನಿರಂಗದಲ್ಲಿ ಕೇಳಿಬರುತ್ತಿವೆ.

ಇನ್ನೂ ಆಂಕರ್‍ ಕಂ ನಟಿ ಅನಸೂಯ ರಂತೆ ರಶ್ಮಿ ಸಹ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕೆಲವೊಂದು ಸಿನೆಮಾಗಳಲ್ಲಿ ಅನಸೂಯ ಐಟಂ ಸಾಂಗ್ಸ್ ನಲ್ಲಿ ನಟಿಸುವ ಅವಕಾಶಗಳು ಬಂದರೂ ಸಹ ಆಕೆ ನೋ ಎಂದು ಹೇಳಿದ್ದರಂತೆ. ಹಿರೋಯಿನ್ ಆಗಿ ನಟಿಸಲು ಮಾತ್ರ ಆಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರಂತೆ. ಆಕೆಯಂತೆ ರಶ್ಮಿ ಸಹ ಖ್ಯಾತ ನಟರೊಬ್ಬರ ಸಿನೆಮಾದಲ್ಲಿ ಐಟಂ ಸಾಂಗ್ ಮಾಡುವ ಅವಕಾಶ ಬಂದರೇ ಆಕೆ ನೇರವಾಗಿ ನೋ ಎಂದು ಹೇಳಿದ್ದಾರಂತೆ. ಸದ್ಯ ಈ ಸುದ್ದಿ ಸಿನಿವಲಯದಲ್ಲಿ ಹರಿದಾಡುತ್ತಿದೆ. ಇನ್ನೂ ರಶ್ಮಿಗೆ ಇನ್ನೂ ಹಿರೋಯಿನ್ ಆಗಿ ಕ್ರೇಜ್ ಬಂದಿಲ್ಲ. ಆದರೂ ಸಹ ಆಕೆ ಐಟಂ ಸಾಂಗ್ ನಲ್ಲಿ ನಟಿಸೋಕೆ ನೋ ಎಂದಿರುವುದು ಅನೇಕರನ್ನು ಶಾಕ್ ಆಗುವಂತೆ ಮಾಡಿದೆ.

ಇನ್ನೂ ರಶ್ಮಿ ಗೆ ತೆಲುಗಿನಲ್ಲಿ ಮಾತ್ರವಲ್ಲೇ ತಮಿಳಿನಲ್ಲೂ ಸಹ ಆಫರ್‍ ಗಳು ಹರಿದುಬರುತ್ತಿವೆ. ತಮಿಳು ಸಿನೆಮಾಗೂ ಸಹ ಆಕೆ ನೋ ಎಂದಿದ್ದಾರಂತೆ. ಆಕೆ ತೆಲುಗು ಸಿನಿರಂಗದಲ್ಲಿ ಮಾತ್ರ ಮುಂದುವರೆಯಲು ಇಷ್ಟಪಡುತ್ತಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಇನ್ನೂ ಕಿರುತೆರೆಯಲ್ಲಂತೂ ರಶ್ಮಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ.