Film News

ಖಳನಾಯಕ ನಟನೊಂದಿಗೆ ತಮನ್ನಾ ಲವ್ ಅಫೈರ್, ತಮನ್ನ ಲವ್ ಸೀಕ್ರೇಟ್ ಬಯಲಾಯ್ತೆ?

ಸಿನಿರಂಗದಲ್ಲಿ ಇನ್ನೂ ಮದುವೆಯಾಗದವರ ಪಟ್ಟಿಯಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಸಹ ಒಬ್ಬರಾಗಿದ್ದಾರೆ. ಕೆಲವು ದಿನಗಳಿಂದ ತಮನ್ನಾ ಮದುವೆಯ ಬಗ್ಗೆ ಅನೇಕ ರೂಮರ್‍ ಗಳು ಹರಿದಾಡುತ್ತಿವೆ. ಈ ವರ್ಷದ ಆರಂಭದಿಂದಲೇ ತಮನ್ನಾ ಮದುವೆಯ ಬಗ್ಗೆ ಅನೇಕ ರೂಮರ್‍ ಗಳು ಹುಟ್ಟಿಕೊಂಡಿದ್ದವು. ಇದೀಗ ಮತ್ತೊಂದು ಸುದ್ದಿ ಸಹ ತಮನ್ನ ಲವ್ ಅಫೈರ್‍ ಬಗ್ಗೆ ಹರಿದಾಡುತ್ತಿದೆ. ಸಿನೆಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುವ ನಟನೊಂದಿಗೆ ಸಮಂತಾ ಲವ್ ಟ್ರಾಕ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ಆ ಸೆಲ್ಫಿ ಮತಷ್ಟು ಬಲ ತಂದುಕೊಡುತ್ತಿದೆ.

ಸೌತ್ ಸಿನಿರಂಗದಲ್ಲಿ ಸುಮಾರು ದಶಕಗಳಿಂದ ಬಹುಬೇಡಿಕೆ ನಟಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ. ತಮನ್ನಾ ಎಂದರೇ ಅನೇಕ ಯುವಕರ ಕ್ರಷ್ ಎಂದೇ ಕರೆಯಲಾಗುತ್ತದೆ. ಗ್ಲಾಮರಸ್ ಡ್ಯಾನ್ಸ್ ಗೆ ಸಂಬಂಧಿಸಿದಂತೆ ಯುವಕರಲ್ಲಿ ತಮನ್ನಾ ತಂದುಕೊಂಡಷ್ಟು ಕ್ರೇಜ್ ಬೇರೆ ಯಾವುದೇ ನಟಿ ಪಡೆದುಕೊಳ್ಳಲಿಲ್ಲ ಎನ್ನಬಹುದಾಗಿದೆ. ತೆಲುಗು ಸಿನಿರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್‍ ಗಳ ತೆರೆ ಹಂಚಿಕೊಂಡಿದ್ದಾರೆ ತಮನ್ನಾ, ತೆಲುಗು ಸ್ಟಾರ್‍ ನಟರಾದ ಪವನ್, ಪ್ರಭಾಸ್, ಮಹೇಶ್ ಬಾಬು, ಜೂನಿಯರ್‍ ಎನ್.ಟಿ.ಆರ್‍, ಅಲ್ಲು ಅರ್ಜುನ್, ರಾಮ್ ಚರಣ್ ಸೇರಿದಂತೆ ಅನೇಕ ಯಂಗ್ ನಟರೊಂದಿಗೂ ಸಹ ತಮನ್ನಾ ತೆರೆ ಹಂಚಿಕೊಂಡಿದ್ದಾರೆ. ಹ್ಯಾಪಿ ಡೇಸ್ ಎಂಬ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ಈಕೆಯ ಖಾತೆಯಲ್ಲಿ ಅನೇಕ ಹಿಟ್ ಸಿನೆಮಾಗಳಿವೆ.

ಸಾಮಾನ್ಯವಾಗಿ ನಟಿಯರ ವೈಯುಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳೂ ಸೇರಿದಂತೆ ಅನೇಕರಿಗೆ ತುಂಬಾನೆ ಆಸಕ್ತಿಯಾಗಿರುತ್ತದೆ. ಇದೇ ಹಾದಿಯಲ್ಲಿ ತಮನ್ನಾ ರವರ ಮದುವೆಯ ಬಗ್ಗೆ ಅನೇಕ ಬಾರಿ ಪ್ರಶ್ನೆಗಳು ಎದುರಾಗುತ್ತಲೇ ಇದೆ. ಸದ್ಯ ತಮನ್ನಾಗೆ 33 ವರ್ಷ ವಯಸ್ಸಾಗಿದೆ. ಇನ್ನೂ ಸಹ ಆಕೆ ಮದುವೆಯಾಗಿಲ್ಲ. ಈ ಹಿಂದೆ ಅನೇಕ ಬಾರಿ ಆಕೆಯ ಮದುವೆಯ ಬಗ್ಗೆ ವಿವಿಧ ರೂಮರ್‍ ಗಳು ಕೇಳಿಬಂದಿತ್ತು. ಆದರೆ ಅದೆಲ್ಲವೂ ಸುಳ್ಳು ಎಂದು ತಮನ್ನಾ ತಳ್ಳಿಹಾಕಿದ್ದರು. ಇದೀಗ ತಮನ್ನ ರವರಿಗೆ ಸಂಬಂಧಿಸಿದ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ತಮನ್ನಾ ಹೊಸ ವರ್ಷವನ್ನು ಗೋವಾದಲ್ಲಿ ಆಚರಿಸಿಕೊಂಡರು. ಪಾರ್ಟಿಯಲ್ಲಿ ತಮನ್ನಾ ಒಬ್ಬ ವ್ಯಕ್ತಿಯನ್ನು ತಬ್ಬಿಕೊಂಡು ಮುತ್ತಿಟ್ಟಿರುವ ಪೊಟೋ ಒಂದು ವೈರಲ್ ಆಗಿದೆ. ಈ ಪೊಟೋ ಕಾರಣದಿಂದ ಆ ವ್ಯಕ್ತಿಗೂ ತಮನ್ನಾಗೂ ಏನು ಸಂಬಂಧ ಎಂಬ ಸುದ್ದಿ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಇನ್ನೂ ಆ ವ್ಯಕ್ತಿ ಬೇರೆ ಯಾರೂ ಅಲ್ಲ ವಿಜಯ್ ವರ್ಮ. ನಟ ವಿಜಯ್ ವರ್ಮ ಅನೇಕ ಸಿನೆಮಾಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ತಮನ್ನಾ ಹಾಗೂ ವಿಜಯ್ ವರ್ಮ ನಡುವೆ ಪ್ರೇಮ ಪಯಣ ಸಾಗುತ್ತಿದೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಆದರೆ ಈ ಬಗ್ಗೆ ತಮನ್ನಾ ಆಗಲಿ, ಅಥವಾ ವಿಜಯ್ ವರ್ಮ ಆಗಲಿ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top