ಮದುವೆಯಾಗದೇ ಇರೋದು ದೊಡ್ಡ ಅಪರಾಧವೇ? ಶ್ರುತಿ ಹಾಸನ್ ನೇರ ಪ್ರಶ್ನೆ, ವೈರಲ್ ಆದ ಹೇಳಿಕೆ….!

Follow Us :

ಸಿನಿರಂಗದಲ್ಲಿ ಯಾವುದೇ ವಿಚಾರ ಆದರೂ ನೇರವಾಗಿ ಮಾತನಾಡುವಂತಹ ನಟಿಯರಲ್ಲಿ ಸ್ಟಾರ್‍ ನಟಿ ಶ್ರುತಿ ಹಾಸನ್ ಮುಂದಿರುತ್ತಾರೆ. ಈ ಹಿಂದೆ ಅನೇಕ ಬಾರಿ ಆಕೆಯ ದೇಹದ ಬಗ್ಗೆ ಅನೇಕ ಕಾಮೆಂಟ್ ಗಳು ಎದುರಾಗಿದ್ದವು. ಕೆರಿಯರ್‍ ಹಳ್ಳ ತಪ್ಪಿದಾಗ ಆಕೆ ವಿದೇಶಕ್ಕೆ ಹಾರಿದ್ದರು. ಬಳಿಕ ಮಾನಸಿಕ ಸಮಸ್ಯೆಗಳನ್ನು ಸಹ ಎದುರಿಸಿದ್ದರು. ಗಬ್ಬರ್‍ ಸಿಂಗ್ ಸಿನೆಮಾದ ಬಳಿಕ ಆಕೆ ಮತ್ತೆ ಬೇಡಿಕೆ ಪಡೆದುಕೊಂಡರು. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವಂತಹ ಶ್ರುತಿ ಹಾಸನ್ ಪೊಟೋಗಳ ಜೊತೆಗೆ ಆಗಾಗ ವೈಯುಕ್ತಿಕ ಜೀವನದ ಬಗ್ಗೆ ಮಾತನಾಡುತ್ತಿರುತ್ತಾರೆ.

ಸಿನಿರಂಗದಲ್ಲಿ ಸಕ್ಸಸ್ ಕಾಣದೇ ಐರನ್ ಲೆಗ್ ಎಂಬ ಮುದ್ರೆಯನ್ನು ಪಡೆದುಕೊಂಡ ಶ್ರುತಿ ಹಾಸನ್ ಬಳಿಕ ಗಬ್ಬರ್‍ ಸಿಂಗ್ ಸಿನೆಮಾದ ಮೂಲಕ ಗೋಲ್ಡನ್ ಲೆಗ್ ಎಂಬ ಮುದ್ರೆ ಪಡೆದುಕೊಂಡರು. ಇದೀಗ ಆಕೆ ಕೆರಿಯರ್‍ ತುಂಬಾ ಸಕ್ಸಸ್ ಪುಲ್ ಆಗಿ ಕಾಣುತ್ತಿದೆ. ಸದ್ಯ ಶ್ರುತಿ ಹಾಸನ್ ಗೆ 40 ವಯಸ್ಸಾಗಿದೆ. ಮದುವೆ ವಯಸ್ಸು ದಾಟುತ್ತಾ ಬಂದರೂ ಶ್ರುತಿ ಹಾಸನ್ ಮದುವೆಯಾಗಿಲ್ಲ. ಈ ಹಿಂದೆ ಶ್ರುತಿ ವಿದೇಶಿ ಯುವಕನನ್ನು ಪ್ರೀತಿಸಿದ್ದರು. ಆತನೊಂದಿಗೆ ಆಕೆ ಮದುವೆಯಾಗುತ್ತಾರೆ ಎಂದೂ ಸಹ ಹೇಳಲಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ಆತನೊಂದಿಗೆ ಬ್ರೇಕಪ್ ಮಾಡಿಕೊಂಡರು ಎನ್ನಲಾಗಿದೆ. ಸದ್ಯ ಶ್ರುತಿ ಶಾಂತಾನು ಹಜಾರಿಕಾ ಎಂಬ ಡೂಡಲ್ ಆರ್ಟಿಸ್ಟ್ ಜೊತೆಗೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ.

ಇನ್ನೂ ಶ್ರುತಿ ಹಾಸನ್ ಮದುವೆಯ ಬಗ್ಗೆ ಅನೇಕ ವಿಮರ್ಶೆಗಳನ್ನು ಎದುರಿಸಿದ್ದಾರೆ. ಮೂವತ್ತು ವರ್ಷ ದಾಟಿದರೂ ಸಹ ಮದುವೆಯಾಗಿಲ್ಲ ಎಂದು ಎದುರಾದ ಟ್ರೋಲ್ ಗಳ ಬಗ್ಗೆ ಶ್ರುತಿ ರಿಯಾಕ್ಟ್ ಆಗಿದ್ದಾರೆ. ಮೂವತ್ತು ವರ್ಷ ದಾಟಿದರೇ ಮದುವೆಯಾಗಬೇಕೆಂಬ ನಿಯಮಗಳು ಏನಾದರೂ ಇದೆಯೇ, ನನಗೆ 30 ವರ್ಷ ಆದ ಬಳಿಕ ನನ್ನಲ್ಲಿ ಪರಿಪಕ್ವತೆ ಬೆಳೆದಿದೆ. ಆದ್ದರಿಂದಲೇ ನಾನು ಪ್ರಶಾಂತವಾಗಿ ಇದ್ದೇನೆ. ಮನಸ್ಸು ಚೆನ್ನಾಗಿದ್ದರೇ ಆ ವ್ಯಕ್ತಿ ಆಟೊಮೆಟಿಕ್ ಆಗಿಯೇ ಪ್ರಶಾಂತವಾಗಿರುತ್ತಾನೆ. ನಾನು ಇದೀಗ ತುಂಬಾ ಹಾಯಾಗಿ ಇದ್ದೀನಿ.  ಕೆಲವು ದಿನಗಳ ವರೆಗೂ ನನ್ನ ಮದುವೆ ವಿಚಾರದಲ್ಲಿ ಲೆಕ್ಕವಿಲ್ಲದಷ್ಟು ವಿಮರ್ಶೆಗಳನ್ನು ಎದರುಸಿದ್ದೇನೆ. ನನಗೆ ಮೂವತ್ತು ವರ್ಷ ಎಂದು ನನಗೆ ನೆನಪಿಸು‌ತ್ತಿದ್ದರು. ನನಗಿಂತ ಅವರಿಗೆ ನನ್ನ ಮದುವೆಯ ಮೇಲೆ ನೋವು ಹೆಚ್ಚು.  ಅಷ್ಟಕ್ಕೂ 30 ವರ್ಷ ದಾಟಿ ಮದುವೆಯಾಗದೇ ಇದ್ದರೇ ಅದು ಅಪರಾಧವೇ. ಅದರಿಂದ ದೇಶದ ಆರ್ಥಿಕ ವ್ಯವಸ್ಥೆ ಪೆಟ್ಟು ತಿನ್ನುತ್ತಾ, ಅಂತಹ ಟ್ರೋಲ್ ಗಳಿಂದ ತುಂಭಾನೆ ಒತ್ತಡಕ್ಕೆ ಗುರಿಯಾಗಿದ್ದೆ. ಆದರೇ ಇದೀಗ ಅವುಗಳನ್ನು ಕಿವಿಗೆ ಸಹ ಹಾಕಿಕೊಳ್ಳುತ್ತಿಲ್ಲ. ಆ ರೀತಿ ಮಾಡಿದಾಗಿನಿಂದ ಜೀವನವನ್ನು ಯಾವುದೇ ನೋವಿಲ್ಲದೇ ಎಂಜಾಯ್ ಮಾಡುತ್ತಿದ್ದೇನೆ ಎಂದು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಶ್ರುತಿ ಹಾಸನ್ ಹೇಳಿದ್ದಾರೆ.