News

ರಾಜ್ಯದಲ್ಲಿರೋದು ಕಾಂಗ್ರೇಸ್ ಸರ್ಕಾರ, ಐದು ವರ್ಷ ನಾನೇ ಸಿಎಂ ಎಂದ ಸಿದ್ದು, ಡಿಕೆಶಿ ಸಿಎಂ ಆಸೆಗೆ ಬಿತ್ತ ಕೊಳ್ಳಿ?

ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿದ್ದು, ಮುಂದಿನ ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಚರ್ಚೆಗೆ ತೆರೆ ಎಳೆದಿದ್ದಾರೆ. ಕೆಲವು ದಿನಗಳಿಂದ ರಾಜ್ಯದಲ್ಲಿ ಸಿಎಂ ವಿಚಾರವಾಗಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದ್ದು, ಇದೀಗ ಅದಕ್ಕೆ ಸಿದ್ದು ತೆರೆ ಎಳೆದಿದ್ದಾರೆ. ಅದರ ಜೊತೆಗೆ ಡಿಕೆಶಿ ಸಿಎಂ ಆಗುವ ಕನಸಿಗೆ ಕೊಳ್ಳಿ ಬಿತ್ತಾ ಎಂಬ ಅನುಮಾನವೂ ಸಹ ಮೂಡಿದೆ ಎಂದು  ಹೇಳಲಾಗುತ್ತಿದೆ.

ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಅನೇಕ ವಿಚಾರಗಳ ಬಗ್ಗೆ ಮಾದ್ಯಮದವರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಶಾಸಕ ರಮೇಶ್ ಜಾರಕಿಹೊಳಿಯವರು ಕಾಂಗ್ರೇಸ್ ಸರ್ಕಾರ ಶೀಘ್ರದಲ್ಲೇ ಬೀಳಲಿದೆ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಕರ್ನಾಟಕದ ಜನತೆ ಕಾಂಗ್ರೇಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿದ್ದಾರೆ. ಐದು ವರ್ಷ ಕಾಂಗ್ರೇಸ್ ಸರ್ಕಾರ ಆಡಳಿತ ನಡೆಸುತ್ತದೆ. ಆ ಐದೂ ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದಿದ್ದಾರೆ. ಇದೀಗ ಸಿದ್ದರಾಮಯ್ಯ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಮುಂದಿನ ಅವಧಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‍ ಸಿಎಂ ಆಗಲಿದ್ದಾರೆ ಎಂಬ ಚರ್ಚೆ, ದಲಿತ ಸಿಎಂ ಆಗಲಿದ್ದಾರೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿತ್ತು. ಇದೀಗ ಸಿಎಂ ಸಿದ್ದು ನೀಡಿದ ಹೇಳಿಕೆ ಎಲ್ಲದಕ್ಕೂ ಕೌಂಟರ್‍ ಅಥವಾ ಚರ್ಚೆಗೆ ಬ್ರೇಕ್ ಹಾಕಿದಂತಿದೆ ಎನ್ನಲಾಗುತ್ತಿದೆ.

ಇನ್ನೂ ಈ ಹಿಂದೆ ಆಪರೇಷನ್ ಕಮಲ ಮಾಡಿ ಬಿಜೆಪಿ ಯವರು ಯಶಸ್ವಿಯಾಗಿದ್ದರು. ಅದೇ ಕಾರಣದಿಂದ ಇದೀಗ ಮತ್ತೆ ಆ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರೆ. ಆದರೆ ಅವರ ಪ್ರಯತ್ನ ಈ ಭಾರಿ ಸಫಲವಾಗೋಲ್ಲ ಎಂದು ಹೇಳಿದ್ದಾರೆ. ಇನ್ನೂ ಸರ್ಕಾರದಲ್ಲಿ ಮೂರು ಉಪಮುಖ್ಯಮಂತ್ರಿಗಳು ಇರಲಿದ್ದಾರೆಯೇ ಎಂಬ ಪ್ರಶ್ನೆಗೆ ಸಹ ಸಿದ್ದು ಉತ್ತರಿಸಿ, ಕಾಂಗ್ರೇಸ್ ಸರ್ಕಾರ ರಾಷ್ಟ್ರೀಯ ಪಕ್ಷವಾಗಿದೆ ಇಂತಹ ಎಲ್ಲಾ ವಿಚಾರಗಳ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು. ಇದೀಗ ಸಿಎಂ ಸಿದ್ದು ನೀಡಿದ ಐದು ವರ್ಷ ನಾನೇ ಸಿಎಂ ಹೇಳಿಕೆ ರಾಜ್ಯದಲ್ಲಿ ಯಾವ ರೀತಿಯ ಚರ್ಚೆ ಹುಟ್ಟಿಹಾಕುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top