Film News

ರೆಡ್ ಸೀರೆಯಲ್ಲಿ ಸೋಷಿಯಲ್ ಮಿಡಿಯಾವನ್ನೇ ಕೆಂಪಾಗಿಸಿ ಸೀನಿಯರ್ ಬ್ಯೂಟಿ ತ್ರಿಷಾ, ವೈರಲ್ ಆದ ಹಾಟ್ ಪೋಸ್…!

ಸೌತ್ ಸಿನಿರಂಗದಲ್ಲಿ ಹೆಚ್ಚು ಪರಿಚಯದ ಅವಸರವಿಲ್ಲದ ನಟಿಯರಲ್ಲಿ ತ್ರಿಷಾ ಸಹ ಒಬ್ಬರಾಗಿದ್ದಾರೆ. ಅನೇಕ ವರ್ಷಗಳ ಕಾಲ ದೊಡ್ಡ ಸ್ಟಾರ್‍ ಗಳ ಜೊತೆಗೆ ಸಹ ನಟಿಸುವ ಮೂಲಕ ಸೌತ್ ಸಿನಿರಂಗವನ್ನು ಆಳಿದ್ದರು. ಸದ್ಯ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಕ್ರೇಜಿ ಆಫರ್‍ ಗಳ ಮೂಲಕ ಸಿನಿರಂಗದಲ್ಲಿ ಮುಂದುವರೆಯುತ್ತಿದ್ದಾರೆ. ಸುಮಾರು ಎರಡು ದಶಕಗಳಿಂದ ಸಿನಿರಂಗದಲ್ಲಿ ನಟಿಯಾಗಿರುವ ತ್ರಿಷಾ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಆಕೆ ರೆಡ್ ಕಲರ್‍ ಸೀರೆಯಲ್ಲಿ ಹಾಟ್ ಪೋಸ್ ಕೊಟ್ಟಿದ್ದು, ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸೌತ್ ನಲ್ಲಿ ಸುಮಾರು ವರ್ಷಗಳ ಬಳಿಕ ತ್ರಿಷಾ ಹವಾ ಮತ್ತೆ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕಂಡು ಕೊಳ್ಳುತ್ತಿರುವ ಸಕ್ಸಸ್ ಎಂದು ಹೇಳಲಾಗುತ್ತಿದೆ. ತಮಿಳಿನಲ್ಲಿ ಕಳೆದ ವರ್ಷ ತೆರೆಕಂಡ ಪೊನ್ನಿಯನ್ ಸೆಲ್ವನ್ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿತ್ತು. ದೊಡ್ಡ ದೊಡ್ಡ ಸ್ಟಾರ್‍ ಗಳನ್ನು ಹೊಂದಿದ ಈ ಸಿನೆಮಾ ತಮಿಳಿನ ಬಾಹುಬಲಿ ಸಿನೆಮಾ ಎಂದೇ ಹೇಳಲಾಗಿತ್ತು. ಈ ಸಿನೆಮಾದಲ್ಲಿ ಪ್ರಮುಖ ನಟಿಯರಾಗಿ ತ್ರಿಷಾ, ಐಶ್ವರ್ಯ, ಶೋಭಿತಾ ನಟಿಸಿದ್ದಾರೆ. ಇತ್ತೀಚಿಗಷ್ಟೆ ಆಕೆ ಲಿಯೋ ಎಂಬ ಆಕ್ಷನ್ ಸಿನೆಮಾದಲ್ಲಿ ವಿಜಯ್ ದಳಪತಿ ಜೊತೆಗೆ ನಟಿಸಿದ್ದರು. 14 ವರ್ಷಗಳ ಬಳಿಕ ಅವರಿಬ್ಬರು ಲಿಯೋ ಸಿನೆಮಾದಲ್ಲಿ ನಟಿಸಿದ್ದಾರೆ.

ಇನ್ನೂ ಲಿಯೋ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಸಹ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ ಎನ್ನಬಹುದಾಗಿದೆ. ಈ ನಿಟ್ಟಿನಲ್ಲೇ ಚಿತ್ರತಂಡ ಚೆನೈನಲ್ಲಿ ಸಕ್ಸಸ್ ಮೀಟ್ ಏರ್ಪಾಡು ಮಾಡಿತ್ತು. ಈ ವೇಳೆ ವಿಜಯ್, ತ್ರಿಷಾ, ಲೋಕೇಶ್ ಕನಗರಾಜ್ ಹಾಜರಾಗಿದ್ದರು. ತ್ರಿಷಾ ಮಾತ್ರ ಇಡೀ ಕಾರ್ಯಕ್ರಮಕ್ಕೆ ಹೈಲೈಟ್ ಆಗಿದ್ದರು ಎನ್ನಲಾಗಿದೆ. ರೆಡ್ ಕಲರ್‍ ಡಿಸೈನರ್‍ ಸೀರೆಯಲ್ಲಿ ಇಡೀ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟಿದ್ದಾರೆ ಎನ್ನಲಾಗಿತ್ತು. ಇದೀಗ ಅದೇ ಸೀರೆಯಲ್ಲಿ ಆಕೆ ಪೊಟೋಶೂಟ್ಸ್ ಮಾಡಿಸಿದ್ದು, ಈ ಪೊಟೋಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಈ ಗ್ಲಾಮರಸ್ ಪೊಟೋಗಳಂತೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಪೊಟೋಗಳ ಜೊತೆಗೆ ಆಕೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ಲಿಯೋ ಸಕ್ಸಸ್ ಮೀಟ್ ಗೆ ಹಾಜರಾದ ತನ್ನ ಅಭಿಮಾನಿಗಳಿಗೆ ಧನ್ಯವಾದಗಳು, ಕಾರ್ಯಕ್ರಮವನ್ನು ಸಕ್ಸಸ್ ಮಾಡಿದ್ದಕ್ಕೆ ಥ್ಯಾಂಕ್ಸ್ ಎಂದು ಹೇಳಿದ್ದಾರೆ.

ಸದ್ಯ ತ್ರಿಷಾ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಂಡು ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಆಕೆ ಸತುರಂಗ ವಟ್ಟೈ 2, ರಾಮ್ ಪಾರ್ಟ್-1 ಹಾಗೂ ಐಡೆಂಟಿಟಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top