ಬೋಲ್ಡ್ ರೋಲ್ಸ್ ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟ ಬುಟ್ಟಬೊಮ್ಮ ಪೂಜಾ ಹೆಗ್ಡೆ, ಆಫರ್ ಗಳು ಸಿಗದೇ ಈ ನಿರ್ಧಾರಕ್ಕೆ ಬಂದ್ರಾ?

Follow Us :

ಸೌತ್ ಸಿನಿರಂಗದಲ್ಲಿ ಬುಟ್ಟಬೊಮ್ಮ ಎಂದೇ ಖ್ಯಾತಿ ಪಡೆದುಕೊಂಡ ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಸೂಪರ್‍ ಹಿಟ್ ಗಳು, ಸ್ಟಾರ್‍ ನಟರೊಂದಿಗೆ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡಿದ್ದರು. ಸ್ಟಾರ್‍ ನಟರಿಗೆ ಲಕ್ಕಿ ಹಿರೋಯಿನ್ ಆಗಿದ್ದರು. ಆದರೆ ಇತ್ತಿಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಾಣುತ್ತಿದ್ದಾರೆ. ಬೀಸ್ಟ್, ರಾಧೆಶ್ಯಾಮ್, ಆಚಾರ್ಯ, ಸರ್ಕಸ್ ಹೀಗೆ ಆಕೆ ಸಾಲು ಸಾಲು ಸೋಲುಗಳನ್ನು ಕಂಡರು. ಈ ಹಿನ್ನೆಲೆಯಲ್ಲಿ ಆಕೆ ಇದೀಗ ಡೇರಿಂಗ್ ಡಿಸಿಷನ್ ತೆಗೆದುಕೊಂಡಿದ್ದಾರೆ. ಬೋಲ್ಡ್ ಪಾತ್ರಗಳಲ್ಲಿ ನಟಿಸೋಕೆ ಸೈ ಎಂದು ಹೇಳಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಸಾಲು ಸಾಲು ಸಕ್ಸಸ್ ಕಾಣುತ್ತಿದ್ದ ಪೂಜಾ ಹೆಗ್ಡೆಗೆ ಬೀಸ್ಟ್ ಸಿನೆಮಾದಿಂದ ಸಾಲು ಸಾಲು ಸೋಲುಗಳು ಎದುರಾದವು. ಸ್ಟಾರ್‍ ನಟರ ಸಿನೆಮಾಗಳೂ ಸಹ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದವು. ಈ ಕಾರಣದಿಂದ ಆಕೆ ಐರನ್ ಲೆಗ್ ಎಂಬ ಆರೋಪ ಸಹ ಹೊತ್ತುಕೊಂಡರು. ಆಕೆಗೆ ಎದುರಾಗುತ್ತಿದ್ದ ಸಾಲು ಸಾಲು ಸೋಲುಗಳ ಕಾರಣದಿಂದ ಮೇಕರ್ಸ್ ಆಕೆಯನ್ನು ಸೈಡ್ ಗಿಟ್ಟರು ಎಂದೂ ಸಹ ಹೇಳಲಾಗುತ್ತಿದೆ. ಆಕೆ ಒಪ್ಪಿಕೊಂಡ ಸಿನೆಮಾಗಳಿಂದಲೂ ಸಹ ಹೊರಬಂದರು. ಮಹೇಶ್ ಬಾಬು ರವರ ಗುಂಟೂರು ಕಾರಂ ಸಿನೆಮಾದಿಂದಲೂ ಹೊರಬಂದರು. ಪವನ್ ಕಲ್ಯಾಣ್ ರವರ ಉಸ್ತಾದ್ ಭಗತ್ ಸಿಂಗ್ ಸಿನೆಮಾದಿಂದಲೂ ಸಹ ಆಕೆಯನ್ನು ತೆಗೆದುಹಾಕಿದರು ಎನ್ನಲಾಗಿದೆ. ಎರಡೂ ಸ್ಟಾರ್‍ ಗಳ ಸಿನೆಮಾಗಳಿಂದ ಅವಕಾಶ ಕಳೆದುಕೊಂಡ ಪೂಜಾ ಹೆಗ್ಡೆ ಸಾಯಿಧರಮ್ ತೇಜ್ ಜೊತೆಗೆ ಗಂಜಾ ಶಂಕರ್‍ ಸಿನೆಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತಾದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇನ್ನೂ ಬಾಲಿವುಡ್ ನಲ್ಲಿ ದೇವಾ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

ಇದೀಗ ಹರಿದಾಡುತ್ತಿರುವ ಸುದ್ದಿಯಂತೆ ಪೂಜಾ ಹೆಗ್ಡೆ ಡೇರಿಂಗ್ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಅವಕಾಶಗಳು ಕೈ ಜಾರುತ್ತಿರುವ ಕಾರಣದಿಂದ ಆಕೆ ಬೋಲ್ಡ್ ಪಾತ್ರಗಳಲ್ಲಿ ನಟಿಸುವುದಕ್ಕೆ ಸಿದ್ದವಾಗುತ್ತಿದ್ದಾರಂತೆ. ಜೊತೆಗೆ ಲೇಡಿ ಓರಿಯೆಂಟೆಡ್ ಸಿನೆಮಾಗಳಿಗೂ ಸೈ ಎನ್ನುತ್ತಿದ್ದಾರಂತೆ. ತಮಿಳಿನ ಖ್ಯಾತ ನಿರ್ದೇಶಕ ಅಜಯ್ ಜ್ಞಾನಮುತ್ತು ರವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನೆಮಾದಲ್ಲಿ ಪೂಜಾ ಹೆಗ್ಡೆ ಬೋಲ್ಡ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಿನೆಮಾ ನೇರವಾಗಿ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದೂ ಸಹ ಹೇಳಲಾಗುತ್ತಿದೆ. ಈಗಾಗಲೇ ಅನೇಕ ಸಿನೆಮಾಗಳಲ್ಲಿ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡಂತ ಪೂಜಾ ಹೆಗ್ಡೆ ಅನೇಕ ಕಮರ್ಷಿಯಲ್ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡಿದ್ದರು. ಆದರೆ ಇದೀಗ ಆಕೆ ಹೊಸ ಮಾದರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಇನ್ನೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಸಹ ಸುದ್ದಿ ಮಾತ್ರ ಭಾರಿ ವೈರಲ್ ಆಗುತ್ತಿದೆ.